ವಿಶ್ವ ವ್ಯಾಪಾರ ಸಮ್ಮೇಳನಕ್ಕೆ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ ಆಮಂತ್ರಣ

ಕಲಬುರಗಿ,ನ.25:ಜಿಲ್ಲೆಯ ಆಳಂದ್ ತಾಲ್ಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಸ್. ಲಿಂಗಮೂರ್ತಿ ಅವರು ನವೆಂಬರ್ 30ರಿಂದ ಡಿಸೆಂಬರ್ 3ರವರಗೆ ಜಿನೇವಾದಲ್ಲಿ ಜರುಗುವ 12ನೇ ಸಚಿವರ ಸಮ್ಮೇಳನದಲ್ಲಿ ಭಾಗವಹಿಸಲು ವಿಶ್ವ ವ್ಯಾಪಾರ ಸಂಸ್ಥೆಯಿಂದ ಆಮಂತ್ರಣ ಪತ್ರಿಕೆಯನ್ನು ಸ್ವೀಕರಿಸಿದ್ದಾರೆ.
ಡಬ್ಲ್ಯುಟಿಒ 164 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ ಮತ್ತು ಎಲ್ಲ ದೇಶಗಳ ಸಚಿವರು ಮತ್ತು ಕಾರ್ಯದರ್ಶಿಗಳು ಡಬ್ಲ್ಯುಟಿಒದ ವ್ಯಾಪಾರ ಮಾತುಕತೆಗಳು, ಒಪ್ಪಂದಗಳು ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ ಚರ್ಚೆಗಳಲ್ಲಿ ಭಾಗವಹಿಸುತ್ತಾರೆ. ಡಾ. ಎಸ್. ಲಿಂಗಮೂರ್ತಿ ಅವರು ಈ ಎಲ್ಲ ಚರ್ಚೆಗಳಲ್ಲಿ ಭಾಗವಹಿಸಲು ಡಬ್ಲ್ಯುಟಿಒನಿಂದ ಆಹ್ವಾನವನ್ನು ಪಡೆದಿದ್ದಾರೆ ಮತ್ತು ಅವರು ನವೆಂಬರ್ 30ರಿಂದ ಡಿಸೆಂಬರ್ 3ರ ಅವಧಿಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.