ವಿಶ್ವ ವೈದ್ಯರ ದಿನಕ್ಕೆ ವೈದ್ಯರ ಅನುಪಮ ಕೊಡುಗೆ

ಕೋಲಾರ,ಜು,೮:ಕೋಲಾರ ನಗರದ ಪ್ರಸಿದ್ಧ ಶ್ರೀ ಚೌಡೇಶ್ವರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ.. ವೈದ್ಯರು ಸಾವಿನ ಅಂಚಿನಲ್ಲಿದ್ದ ರೋಗಿಯನ್ನು ಸಂಪೂರ್ಣ ಗುಣಪಡಿಸುವ ಮೂಲಕ ವಿಸ್ಮಯಕ್ಕೆ ಕಾರಣರಾಗಿದ್ದಾರೆ ಎಂಬ ಮಾಹಿತಿ ತಡವಾಗಿ ವರದಿಯಾಗಿದೆ
ಮಾಲೂರು ತಾಲೂಕು ಮೂಲದ ಮಹಿಳೆಯೊಬ್ಬರು ಬಹು ವಿಧದ ಕಾಯಿಲೆಗಳಿಂದ ಬಳಲುತ್ತಿದ್ದರು.ಆರಂಭದಲ್ಲಿ ಅವರಿಗೆ ಕಾಣಿಸಿಕೊಂಡ ಸಣ್ಣ ಹೊಟ್ಟೆ ನೋವಿಗೆ ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಉಪಶಮನವಾಗಲಿಲ್ಲ ಆ ಸಂದರ್ಭದಲ್ಲಿ ಅವರು ಕೋಲಾರದ ಶ್ರೀ ಚೌಡೇಶ್ವರಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ದಾಖಲಾದರು. ಹುಟ್ಟೇ ನೋವಿನ ಷ-ಕಿರಣ ಪರೀಕ್ಷೆಯ ನಂತರ ಕಿಡ್ನಿ ವೈಫಲ್ಯ ,ರಕ್ತ ಹೆಪ್ಪುಗಟ್ಟುವಿಕೆ, ಹೃದಯ ವೈಫಲ್ಯ ಹೀಗೆ ಅನೇಕ ಸವಾಲುಗಳನ್ನು ಎದುರಿಸುವ ಸಂದಿಗ್ಧತೆಯು ಏಕಕಾಲಕ್ಕೆ ಉಂಟಾಗಿ ಅವರ ಜೀವಕ್ಕೆ ಕಂಟಕವಾಗಿತ್ತು. ಅಂತಹ ಸಂದರ್ಭದಲ್ಲಿ ಅವರು ಶ್ರೀ ಚೌಡೇಶ್ವರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾದರು.
ಗ್ಯಾಸ್ಟ್ರಿಕ್ ಪ್ಯಾರಾಪೆಸ್ಟನ್ ನಿಂದ ಉಂಟಾದ ಈ ಕಾಯಿಲೆಯನ್ನು ಗುಣಪಡಿಸಲು ತಜ್ಞ ವೈದ್ಯರುಗಳು ನಿರಂತರವಾಗಿ ಶ್ರಮಿಸಿದರು. ಜೀವ ಹೋಗುತ್ತಿರುವ ಸಂದರ್ಭದಲ್ಲಿ ಅವರನ್ನು ಉಳಿಸಿಕೊಳ್ಳಲು ಇದ್ದ ಏಕೈಕ ಮಾರ್ಗ ವೆಂದರೆ ಅದು ಸರ್ಜರಿ. ಈ ಹಂತದಲ್ಲಿ ಡಾ. ವೈ .ಸಿ ಮಂಜುನಾಥ್ ರವರು ಸ್ಕ್ಯಾನಿಂಗ್ ಮುಖೇನ ರೋಗಿಯ ಗುಣಲಕ್ಷಣಗಳನ್ನು ಪತ್ತೆಹಚ್ಚಿದ್ದರು. ಡಾ. ಮನೋಹರ್ ರವರು ಶಸ್ತ್ರ ಚಿಕಿತ್ಸೆಯನ್ನು ಕೈಗೊಂಡರು.ಡಾ.ಅಶ್ವಿನ್ ರವರು ಅನೆಸ್ತಿಷ್ಯಾ ನೀಡಿದರು. ಸರ್ಜರಿ ನಂತರ ಅವರ ಜೀರ್ಣ ಶಕ್ತಿ ಹೆಚ್ಚಿಸುವಲ್ಲಿ ಮತ್ತು ನೀರಿನ ಅಂಶವನ್ನು ದೇಹದಲ್ಲಿ ಕಾಯ್ದುಕೊಳ್ಳುವಲ್ಲಿ ಕಿಡ್ನಿ ವೈಫಲ್ಯ ಆಗದಂತೆ ನೋಡಿಕೊಳ್ಳುವಲ್ಲಿ ಡಾ. ವೈ .ಸಿ.ಬೀರೇಗೌಡ gವರು ನಿರಂತರ ಶ್ರಮವಹಿಸಿದ್ದರು.
ಬಿಪಿ ಏರಿಳಿತ ಉಂಟಾದಾಗ ಮತ್ತು ಹೃದಯ ಸಂಬಂಧಿ ಕಾಯಿಲೆ ಕಂಡು ಬಂದಾಗ, ಜಯದೇವ ಆಸ್ಪತ್ರೆಯ ಖ್ಯಾತ ಹೃದಯ ತಜ್ಞ ವೈದ್ಯರಾದ ಡಾ. ಸೂರ್ಯಪ್ರಕಾಶ್ ರವರ ಸಲಹೆ ಮತ್ತು ಮಾರ್ಗದರ್ಶನವನ್ನು ಸಹ ಡಾ. ವೈ ಸಿ. ಬೀರೇಗೌಡ ವರು ಪಡೆದುಕೊಂಡಿದ್ದರು. ಮತ್ತು ಖ್ಯಾತ ವೈದ್ಯರಾದ ಪ್ರೊಫೆಸರ್ ಶ್ರೀನಿವಾಸ್ ರವರು ಸಹ ಆಸ್ಪತ್ರೆಗೆ ಭೇಟಿ ನೀಡಿ ರೋಗಿಯನ್ನು ಉಪಚರಿಸಿದ್ದರು.ಚಿಕಿತ್ಸೆಯ ಹತ್ತು ದಿನದ ನಂತರ ಇಂದು ರೋಗಿಯು ಸಂಪೂರ್ಣ ಗುಣಮುಖವಾಗಿದ್ದಾರೆ.ತನಗೆ ಪುನರ್ಜನ್ಮ ನೀಡಿದ ವೈದ್ಯಕೀಯ ತಂಡವನ್ನು ಮತ್ತು ಶ್ರೀ ಚೌಡೇಶ್ವರಿ ನಸಿಂಗ್ ಹೋಮ್ನ ಕಾರ್ಯವೈಖರಿಯನ್ನು ಕೈಯಲ್ಲಿಂದ ಗುಣಮುಖರಾದ ಮಹಿಳೆ ಮತ್ತು ಅವರ ಕುಟುಂಬ ಸದಸ್ಯರು ಬಹುವಾಗಿ ಪ್ರಶಂಸಿದ್ದಾರೆ.
ವೈದ್ಯರ ದಿನಕ್ಕೆ ರೋಗಿ ಒಬ್ಬರಿಗೆ ತಜ್ಞ ವೈದ್ಯರುಗಳು ನೀಡಿದ ವಿಶೇಷವಾದ ಕೊಡುಗೆ ಇದಾಗಿದೆ ಎನ್ನಬಹುದಾಗಿದೆ.