ವಿಶ್ವ ವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ 100 ಕೋಟಿರೂ. ಅನುದಾನ ನೀಡುವಂತೆ ಒತ್ತಾಯಿಸಿ ತಮಟೆ ಚಳುವಳಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.14:- ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿ ಮಂಡಿಸುವ ಬಜೆಟ್‍ನಲ್ಲಿ ವಿಶ್ವವಿದ್ಯಾಲಯದ ಸಮಗ್ರಅಭಿವೃದ್ಧಿಗೆ 100 ಕೋಟಿರೂ. ಅನುದಾನ ನೀಡುವಂತೆ ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅಧ್ಯಕ್ಷತೆಯಲ್ಲಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ನಗರದ ಭುವನೇಶ್ವರಿ ವೃತ್ತದಲ್ಲಿರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ತಮಟೆ ಬಡಿಯುವ ಮೂಲಕ ಪ್ರತಿಭಟನೆನಡೆಸಿದರು.
ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯದಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಗೆ ಅತಿ ಹೆಚ್ಚು ಬಾರಿ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರಿಗೆ ಜಿಲ್ಲೆಯ ನಾಡಿ ಮಿಡಿತಗೊತ್ತಿದೆ. ಈ ಬಾರಿಯತಮ್ಮ ಬಜೆಟ್‍ನಲ್ಲಿಚಾಮರಾಜನಗರಜಿಲ್ಲೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ, 5000 ಕೋಟಿ. ರೂ.ಗಳನ್ನು ಮೀಸಲಿಡುವ ಜೊತೆಗೆ ವಿಶ್ವ ವಿದ್ಯಾಲಯದ ಸಮಗ್ರಅಭಿವೃದ್ಧಿ, ಪ್ರವಾಸೋದ್ಯಮದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವ ಮೂಲಕ ಜಿಲ್ಲೆಯನ್ನು ಅಭಿವೃದ್ಧಿ ಮಾಡಬೇಕುಎಂದು ಒತ್ತಾಯಿಸಿದರು.
ಚಾಮರಾಜನಗರ ವಿಶ್ವವಿದ್ಯಾಲಯ ನೆಪಕ್ಕೆ ಮಾತ್ರ ಇದೆ. ಇಲ್ಲಿಗೆ ಅನೇಕ ಕೋರ್ಸ್‍ಗಳ ಅವಶ್ಯಕತೆ ಇದೆ. ರಾಜ್ಯ ಸರ್ಕಾರದಿಂದ ಅನುದಾನ ಸಿಗದೆ ಅಭಿವೃದ್ಧಿಯಾಗಿಲ್ಲ. ವಿವಿಯ ಸಮಗ್ರಅಭಿವೃದ್ಧಿಗಾಗಿಕನಿಷ್ಠ 100 ಕೋಟಿರೂ. ಅನುದಾನಮೀಸಲಿಡುವ ಮೂಲಕ ವಿವಿಯನ್ನು ಅಭಿವೃದ್ಧಿಪಡಿಸುವ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಇದೇ ಸಂದರ್ಭದಲ್ಲಿ ಒತ್ತಾಯ ಮಾಡಿದರು.
ಪ್ರವಾಸೋದ್ಯಮಜಿಲ್ಲೆಯಲ್ಲಿಬಹಳ ಹಿಂದುಳಿದಿದೆ. ಬಿಳಿಗಿರಿ ರಂಗನ ಬೆಟ್ಟ, ಮಲೆ ಮಹದೇಶ್ವರ ಸ್ವಾಮಿ ಬೆಟ್ಟ, ಹೊಗೆನಕಲ್, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಸುವರ್ಣವತಿ, ಚಿಕ್ಕಹೊಳೆ, ಭರಚುಕ್ಕಿಹೀಗೆ ಹಲವಾರು ಪ್ರವಾಸಿ ತಾಣಗಳಿವೆ. ಇದನ್ನುಅಭಿವೃದ್ಧಿ ಮಾಡಬೇಕುಎಂದರು.
ಜಿಲ್ಲೆಯ ಪ್ರತಿಯೊಂದು ಕೆರೆಗಳನ್ನು ತುಂಬಿಸುವ ಯೋಜನೆರೂಪಿಸಬೇಕು. ಜೊತೆಗೆ ಚಾಮರಾಜನಗರದಲ್ಲಿ 2ನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಬೇಕು.
ಸರ್ಕಾರದ ಮುಂದೆ ಪ್ರಸ್ತಾವನೆ ಹೋಗಿ ಸುಮಾರು 5 ವರ್ಷಗಳೇ ಕಳೆದಿದ್ದು, ನೆನೆಗುದಿಗೆ ಬಿದ್ದಿದೆ. ಇದನ್ನು ಅನುಷ್ಠಾನಗೊಳಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ತಮಿಳುನಾಡಿಗೆಕಾವೇರಿ ನೀರನ್ನು ಬಿಟ್ಟಿರುವರಾಜ್ಯ ಸರ್ಕಾರದಕ್ರಮವನ್ನು 163ನೇ ದಿನವಾದಇಂದೂಕೂಡಾ ಪ್ರತಿಭಟಿಸುವ ಮೂಲಕ ಖಂಡಿಸಿದರು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ವಿರುದ್ಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಪ್ರತಿಭಟನೆಯಲ್ಲಿಚಾ.ವೆಂ.ರಾಜ್‍ಗೋಪಾಲ್, ಚಾ.ರ.ಕುಮಾರ್, ಪಣ್ಯದಹುಂಡಿರಾಜು, ವೀರಭದ್ರ,ತಾಂಡವಮೂರ್ತಿ, ಆಟೋ ನಾಗೇಶ್, ರಾಜಪ್ಪ, ಮಹೇಶ್‍ಗೌಡ, ಸೋಮವಾರಪೇಟೆ ಮಂಜು, ಲಿಂಗರಾಜು, ಚಾ.ಸಿ.ಸಿದ್ದರಾಜು, ನಿಜಧ್ವನಿ ಗೋವಿಂದರಾಜು, ಗು.ಪುರುಷೋತ್ತಮ್, ನಂಜುಂಡಸ್ವಾಮಿ, ರವಿಚಂದ್ರ ಪ್ರಸಾದ್‍ಸೇರಿದಂತೆಇನ್ನಿತರರಿದ್ದರು.