ವಿಶ್ವ ವಿಕಲಚೇತನರ ದಿನಾಚರಣೆ ಮತ್ತು ಸಾಧನ ಸಲಕರಣೆಗಳ ವಿತರಣೆ

????????????????????????????????????

ಸಿಂದಗಿ :ಜ.1: ವಿಕಲಚೇತನರಿಗೆ ಸರಕಾರ ಅನೇಕ ರೀತಿಗಳಲ್ಲಿ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತಿದೆ ಈ ಭಾಗದಲ್ಲಿ ಹೆಚ್ಚಿನ ಸೌಲಭ್ಯಗಳು ಸಿಗುವಂತಾಗಬೇಕಾದರೆ ಕಲ್ಪಿಸಿಕೊಡುವ ಅವಕಾಶ ನಾವು ನೀವು ಮಾಡಬೇಕಾಗಿದೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಜರುಗಿದ ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆ, ಆರ್.ಪಿ.ಡಿ ಟಾಸ್ಕಪೋರ್ಸ, ಎಮ್.ಆರ್.ಡಬ್ಲ್ಯೂ-ವಿ.ಆರ್.ಡಬ್ಲ್ಯೂ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ವಿಕಲಚೇತನರ ದಿನಾಚರಣೆ ಮತ್ತು ಸಾಧನ ಸಲಕರಣೆಗಳ ವಿತರಣೆ ಮತ್ತು ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಸನ್ಮಾನ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ವರ್ಷ ವಿಕಲ ಚೇತನರಿಗೆ ಸ್ವತಂ ಹಣದಲ್ಲಿ ವ್ಹಿಲ್‍ಚೇರ್ ನೀಡುವುದಾಗಿ ವಾಗ್ದಾನ ಮಾಡಿದ ಹಿನ್ನಲೆಯಲ್ಲಿ ಒದಗಿಸಿಕೊಟ್ಟಿದ್ದೇನೆ ಎಂದರು.

ಕಾರ್ಯಕ್ರಮವನ್ನು ತಾಲೂಕ ಪಂಚಾಯತ ಅಧ್ಯಕ್ಷೆ ಮಹಾನಂದ ಸಾಲಕ್ಕಿ ಉದ್ಘಾಟಿಸಿ ಮಾತನಾಡಿ, ವಿಕಲಚೇತನರಲ್ಲಿ ವೈಶಿಷ್ಠ ಪೂರ್ಣವಾದ ಕಲೆ ಇರುತ್ತದೆ. ಅದನ್ನು ನಾವು ಗುರುತಿಸಿ ಹೊರ ತಂದಾಗ ಮಾತ್ರ ಅನಾವರಣಗೊಳ್ಳಲು ಸಾಧ್ಯ ಅಲ್ಲದೆ ಅವರನ್ನು ಮುಖ್ಯವಾಹಿನಿಗೆ ತರಲು ನಾವೆಲ್ಲರು ಪ್ರಯತ್ನಸಿಬೇಕಾಗಿದೆ. ಇಂತಹ ಕಾರ್ಯಗಳನ್ನು ಸಂಘ ಸಂಸ್ಥೆಗಳು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಮಾಹಾಂತೇಶ ನೂಲಾನವರ ಮಾತನಾಡಿ, ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆ ಸುಮಾರ 2007ರಿಂದ ಕಾರ್ಯ ನಿರ್ವಹಿಸುತ್ತಿದ್ದು ಸಿಂದಗಿ ತಾಲೂಕಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ವಿಕಲಚೇತನರನ್ನು ಗುರುತಿಸಿ ಮೂಲ ಸೌಕರ್ಯಗಳನ್ನು ಒದಗಿಸಿದ ಕೀರ್ತಿ ವೇದಿಕೆಗೆ ಸಲ್ಲುತ್ತದೆ ಎಂದು ಹೇಳಿದರು.

ತಾಲೂಕಿನಿಂದ ಆಗಮಿಸಿದ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ, ವಿಕಲಚೇತನ ಕೋವಿಡ ವಾರಿಯರ್ಸಗೆ ಸನ್ಮಾನಿಸಲಾಯಿತು. ಮತ್ತು ಹತ್ತು ಜನ ವಿಕಲಚೇತನರಿಗೆ ವೀಲ್‍ಚೇರ್ ವಿತರಣೆ ಮಾಡಲಾಯಿತು. ನಿಯಾಲ್ ತಾಂಬೊಳ್ಳಿ ಹತ್ತು ವಿದ್ಯಾರ್ಥಿಗಳಿಗೆ ತಲಾ ಐದನೂರು ರೂಪಾಯಿ ಗೌರವ ಧನ ನೀಡಿದರು

ಇದೇ ಸಂದರ್ಭದಲ್ಲಿ ಐಕ್ಯತಾ ವೇದಿಕೆ ಅಧ್ಯಕ್ಷೆ ಸಬಿಯಾ ಮರ್ತೂರ, ಡಾ. ಎ.ಎ.ಮಾಗಿ, ಗೊಲ್ಲಾಳಪ್ಪಗೌಡ ಪಾಟೀಲ, ನಿಮಿಷಚಾರ್ಯ, ಶಾಬುದ್ದಿನ ಬುಕ್ಕದ, ಲಕ್ಷ್ಮೀ ರಾಠೋಡ, ಹೇಮಾ ಕಾಸರ, ರೋಷನಬಿ ವಾಲೀಕಾರ, ತಸ್ವಿನ ನದಾಫ್, ಸುರೇಖಾ ಗುರವ, ಸುನೀತಾ ಕ್ಷತ್ರಿ, ಮುತ್ತು ಸಾತಿಹಾಳ, ಮಲ್ಲಿಕಾರ್ಜನ ಮುತ್ತಗಿ, ಮಲ್ಲಮ್ಮ ಮುಳವಾಡ, ದಾವಲಸಾಬ ಮರ್ತೂರ, ವಿಜಯ ಭಜಂತ್ರಿ, ರಾಜು ಯಡ್ರಾಮಿ, ಜಾಪರಸಾದಿಖ್ ಸೇರಿದಂತೆ ಇನ್ನಿತರರು ಇದ್ದರು.