ವಿಶ್ವ ವಿಕಲಚೇತನರ ದಿನಾಚರಣೆ ಸಭೆ

ಸಿರವಾರ.ಜ.೧೩- ತಾಲೂಕಿನ ಮಲ್ಲಟ ಗ್ರಾಮ ಪಂಚಾಯಿತಿಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯ ಸಭೆ ಜರುಗಿತು.
ಈ ಕುರಿತು ಪಿಡಿಓ ಕೃಷ್ಣ ಅವರು ಮಾತನಾಡಿ “ನಮ್ಮ ಪಂಚಾಯತಿಯಲ್ಲಿನ ವಿಕಲಚೇತನರು ದೇವರ ಸಮಾನರು ಇವರಿಗೆ ಸಿಗಬೇಕಾದ ಸವಲತ್ತುಗಳನ್ನು ಸಿಗಬೇಕು. ನಮ್ಮ ಪಂಚಾಯತಿಯಲ್ಲಿ ಶೇ ರಷ್ಟು ಅನುದಾನ ಮೀಸಲಿಟ್ಟಿದ್ದೆವೆ. ಆ ಅನುದಾನದಲ್ಲಿ ವಿಕಲಚೇತನರಿಗೆ ಸಾಮಗ್ರಿಗಳು ಅವರಿಗೆ ಬಳಕೆಯಾಗುವ ವಸ್ತುಗಳನ್ನು ಪಂಚಾಯತಿ ಅನುದಾನದಲ್ಲಿ ಕೊಡಿಸುವಂತಹ ಕೆಲಸ ನಾನು ಪ್ರಾಮಾಣಿಕತೆಯಿಂದ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ವೀರೇಶ್, ರಂಗಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ರವಿ ಚಲವಾದಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ರಮೇಶ ಬಂಡಾರಿ ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.