ವಿಶ್ವ ರೇಬಿಸ್‌ ದಿನ


ಸಾಮಾನ್ಯವಾಗಿ ಪ್ರಾಣಿಗಳ ಕಡಿತದಿಂದಾಗಿ ಬರುವಂತಹ ರೇಬೀಸ್ ಕಾಯಿಲೆಯಿಂದಾಗಿ ಸಾಯುವವರ ಸಂಖ್ಯೆಯು ವಿಶ್ವಮಟ್ಟದಲ್ಲಿ ಹೆಚ್ಚಾಗುತ್ತಿದೆ. ವಿಶ್ವ ಮಟ್ಟದಲ್ಲಿ ರೇಬಿಸ್ ಕಾಯಿಲೆಗೆ ಚುಚ್ಚುಮದ್ದು ಲಭ್ಯವಿದ್ದರೂ ಜನರು ಇದರ ಬಗ್ಗೆ ನಿರ್ಲಕ್ಷ್ಯ ವಹಿಸುವ ಪರಿಣಾಮವಾಗಿ ರೆಬೀಸ್ ಕಾಯಿಲೆಯು ಮಾರಣಾಂತಿಕವಾಗುತ್ತಿದೆ. ವಿಶ್ವ ಮಟ್ಟದಲ್ಲಿ ರೆಬೀಸ್ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ರೇಬೀಸ್ ದಿನವನ್ನು ಆಚರಿಸಲಾಗುತ್ತದೆ. ಸರ್ಕಾರೇತರ ಸಂಸ್ಥೆಗಳು, ವಿವಿಧ ದೇಶಗಳ ಸರ್ಕಾರಗಳು ವಿಶ್ವ ರೇಬೀಸ್ ದಿನವನ್ನು ಆಚರಿಸುತ್ತವೆ ಮತ್ತು ರೇಬೀಸ್ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ಸೆಪ್ಟೆಂಬರ್ 28ರಂದು 13ನೇ ವಿಶ್ವ ರೇಬೀಸ್ ದಿನವನ್ನು ಆಚರಿಸಲಾಗುತ್ತದೆ.

ಕಾಡು ಪ್ರಾಣಿಗಳು, ಅದೇ ರೀತಿಯಾಗಿ ಸಾಕು ಪ್ರಾಣಿಗಳು ಕೂಡ ರೇಬೀಸ್ ಹಬ್ಬಿಸುತ್ತದೆ. ಈ ಕೆಳಗಿನ ಪ್ರಾಣಿಗಳು ರೇಬೀಸ್ ವೈರಸ್ ನ್ನು ಮನುಷ್ಯರಿಗೆ ಹಬ್ಬುವುದು. ಇವುಗಳಲ್ಲಿ ಮುಖ್ಯವಾಗಿ ನಾಯಿ, ಬಾವಲಿ, ಬೆಕ್ಕು, ದನ, ಆಡು, ಕುದುರೆ, ನೀರ್ನಾಯಿಗಳು, ನರಿ, ಮಂಗ ಇತ್ಯಾದಿಗಳು.ರೇಬೀಸ್ ಸೋಂಕು ರೇಬೀಸ್ ವೈರಸ್ ನಿಂದಾಗಿ ಬರುವುದು. ಸೋಂಕಿತ ಪ್ರಾಣಿಯ ಜೊಲ್ಲಿನಿಂದ ರೇಬೀಸ್ ವೈರಸ್ ಹರಡುವುದು. ಸೋಂಕಿತ ಪ್ರಾಣಿಯು ಮತ್ತೊಂದು ಪ್ರಾಣಿಗೆ ಅಥವಾ ಮನುಷ್ಯನಿಗೆ ಕಚ್ಚಿದ ವೇಳೆ ಈ ವೈರಸ್ ಹರಡುವುದು. ಕೆಲವೊಂದು ಸಲ ಮೈಯಲ್ಲಿ ಇರುವಂತಹ ಯಾವುದೇ ತೆರೆದ ಗಾಯದ ಮೇಲೆ ಸೋಂಕಿತ ಪ್ರಾಣಿಯ ಜೊಲ್ಲು ಬಿದ್ದರೆ ಆಗ ರೇಬೀಸ್ ಹರಡುವುದು. ಆದರೆ ಇದು ತುಂಬಾ ಅಪರೂಪವಾಗಿರುವುದು. ಸೋಂಕಿತ ಪ್ರಾಣಿಯು ನಿಮ್ಮ ಕೈಯಲ್ಲಿರುವ ಗಾಯವನ್ನು ನೆಕ್ಕಿದರೆ ಹೀಗೆ ಆಗುವುದೂ ಇದೆ.
ನಿಮಗೆ ಪ್ರಾಣಿ ಕಚ್ಚಿದೆಯಾ ಅಥವಾ ಇಲ್ಲವಾ ಎನ್ನುವ ಬಗ್ಗೆ ಗೊಂದಲವಿದ್ದರೂ ನೀವು ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು. ಕೆಲವೊಂದು ಸಂದರ್ಭದಲ್ಲಿ ಬಾವಲಿಯು ನೀವು ಮಲಗಿದ ಕೋಣೆಗೆ ಗೊತ್ತಿಲ್ಲದಂತೆ ಪ್ರವೇಶ ಮಾಡಿ ನಿಮಗೆ ಅರಿವಿಲ್ಲದಂತೆ ಕಚ್ಚಿ ಹೋಗಬಹುದು. ಕೋಣೆಯಲ್ಲಿ ಇರುವ ಬಾವಲಿಯನ್ನು ನೀವು ನೋಡಿದರೆ ಆಗ ನಿಮಗೆ ಕಚ್ಚಿರಬಹುದು ಎನ್ನುವ ಭಾವನೆ ಆಗಬಹುದು. ಮಗು ಅಥವಾ ಯಾವುದೇ ವಿಕಲತೆ ಹೊಂದಿರುವ ವ್ಯಕ್ತಿಯ ಬಳಿ ಬಾವಲಿ ಕಂಡುಬಂದರೆ ಆಗ ನೀವು ಬಾವಲಿ ಕಡಿದಿದೆ ಎಂದು ತಿಳಿಯಿರಿ.

ರೇಬಿಸ್‌ಗೆ ಮೊದಲು ಲಸಿಕೆ ಕಂಡುಹಿಡಿದ ಲೂಯಿ ಪಾಶ್ಚರ್‌ ಮರಣ ಹೊಂದಿದ ದಿನವನ್ನು 2007ರಿಂದ ವಿಶ್ವ ರೇಬಿಸ್‌ ದಿನವೆಂದು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ರೇಬಿಸ್‌ ಕುರಿತು ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಮೂಲ ಆಶಯ. ಶ್ವಾನಗಳಿಂದ ಮನುಷ್ಯನಿಗೆ ರೇಬಿಸ್‌ ಹರಡುವುದನ್ನು 2030ರ ಒಳಗೆ ತಡೆಯುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. ರೇಬಿಸ್‌ ಅನ್ನುವುದು ಸಸ್ತನಿಗಳಲ್ಲಿ ವೈರಾಣುವಿನಿಂದ ಹರಡುವ ಕಾಯಿಲೆ. ವಿಶೇಷವಾಗಿ ಶ್ವಾನಗಳಿಂದ (ಕಡಿತ ಅಥವಾ ಲಾಲಾರಸದ ಸಂಪರ್ಕದಿಂದ) ಮನುಷ್ಯನಿಗೆ ಹರಡುತ್ತದೆ. ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಅದರಿಂದ ಮಿದುಳಿಗೆ ಘಾಸಿಯಾಗಿ ಸಾವು ಸಂಭವಿಸುತ್ತವೆ. ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಇದು ಗುಣಪಡಿಸಬಹುದಾದ ಕಾಯಿಲೆ ಎನ್ನುವುದು ತಜ್ಞರ ಅಭಿಮತ, ವಿಶ್ವ ರೇಬಿಸ್‌ ದಿನವು ಜಗತ್ತಿನ ಅತ್ಯಂತ ದೊಡ್ಡ ಜಾಗೃತಿ ಕಾರ್ಯಕ್ರಮವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮುಂದಾಳತ್ವದಲ್ಲಿ ಪ್ರತಿವರ್ಷ ಏಪ್ರಿಲ್‌ನಿಂದಲೇ ಇದರ ಸಿದ್ಧತೆ ಆರಂಭವಾಗುತ್ತದೆ.

ಪ್ರತಿ ವರ್ಷ ಜಗತ್ತಿನಲ್ಲಿ ರೇಬಿಸ್‌ನಿಂದ ಸಂಭವಿಸುವ ಮರಣ. ಅದರಲ್ಲಿ ಶೇ.90ರಷ್ಟು ಸಾವುಗಳು ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ವರದಿಯಾಗುತ್ತಿವೆ. ಸಾವು ಪ್ರತಿವರ್ಷ ಭಾರತದಲ್ಲಿ ರೇಬಿಸ್‌ನಿಂದ ಸಂಭವಿಸುತ್ತದೆ ಎಂದು ಕೇಂದ್ರ ಸರಕಾರವೇ ಹೇಳಿಕೊಂಡಿದೆ. ಅಂಡಮಾನ್‌-ನಿಕೋಬಾರ್‌, ಲಕ್ಷದ್ವೀಪದಲ್ಲಿ ಮಾತ್ರ ಯಾವುದೇ ರೇಬಿಸ್‌ ಸಾವು ಘಟಿಸುತ್ತಿಲ್ಲ! ಮನುಷ್ಯರಿಗೆ ರೇಬಿಸ್‌ ಬರಲು ಶ್ವಾನ ಕಡಿತ ಕಾರಣ ಎನ್ನುವುದು ತಜ್ಞರ ಅಭಿಮತ.

ಪ್ರಾಣಿ ನಿಯಂತ್ರಣ ಮತ್ತು ಲಸಿಕೆ ನೀಡುವಿಕೆ ಕಾರ್ಯಕ್ರಮಗಳು ಜಗತ್ತಿನ ಸಾಕಷ್ಟು ಪ್ರಾಂತ್ಯಗಳಲ್ಲಿ ರೇಬೀಸ್ ಅಪಾಯವನ್ನು ಕಡಿಮೆ ಮಾಡಿದೆ. ರೇಬೀಸ್ ಅಪಾಯ ಅತ್ಯಂತ ಹೆಚ್ಚು ಸಂಭವನೀಯವಾಗಿರುವ ಮಂದಿಗೆ ಮುಂಚಿತವಾಗಿಯೇ ರೋಗ-ನಿರೋಧಕ ಲಸಿಕೆ ನೀಡುವುದನ್ನು ಶಿಫಾರಸು ಮಾಡಲಾಗುತ್ತದೆ. ಅತ್ಯಂತ ಹೆಚ್ಚು ಅಪಾಯವುಳ್ಳ ಗುಂಪು, ಬಾವಲಿಗಳೊಂದಿಗೆ ಕೆಲಸ ಮಾಡುವವರನ್ನು ಅಥವಾ ರೇಬೀಸ್ ಸಾಮಾನ್ಯವಾಗಿರುವಂತೆ ಕಂಡುಬರುವ ಜಗತ್ತಿನ ಪ್ರದೇಶಗಳಲ್ಲಿ ದೀರ್ಘ ಸಮಯವನ್ನು ಕಳೆಯುವ ಜನರನ್ನು ಒಳಗೊಳ್ಳುತ್ತದೆ. ಈಗಾಗಲೇ ರೇಬೀಸ್‍ಗೆ ಒಡ್ಡಲ್ಪಟ್ಟ ಜನರಿಗೆ ರೇಬೀಸ್ ಲಸಿಕೆ ಮತ್ತು ಕೆಲವೊಮ್ಮೆ ರೇಬೀಸ್ ಇಮ್ಯುನೊಗ್ಲಾಬ್ಯುಲಿನ್ ಚಿಕಿತ್ಸೆಯನ್ನು ರೋಗಲಕ್ಷಣಗಳು ಆರಂಭವಾಗುವ ಮೊದಲೇ ನೀಡಲಾದರೆ, ಅಂತಹ ಚಿಕಿತ್ಸೆಯು ರೋಗವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗುತ್ತದೆ. ಕಚ್ಚಲ್ಪಟ್ಟ ಮತ್ತು ತರಚಿರುವ ಜಾಗವನ್ನು 15 ನಿಮಿಷಗಳ ಕಾಲ ಸೋಪ್ ಮತ್ತು ನೀರಿನೊಂದಿಗೆ ಪೋವಿಡೊನ್ ಅಯೋಡಿನ್, ಅಥವಾ ಡಿಟರ್ಜೆಂಟ್‍ನಿಂದ ತೊಳೆಯುವುದರಿಂದ ವೈರಸ್‍ಗಳನ್ನು ಕೊಲ್ಲಬಹುದು ಮತ್ತು ಈ ಕ್ರಮವು ರೇಬೀಸ್ ವರ್ಗಾಂತರಗೊಳ್ಳುವುದನ್ನು ತಡೆಯುವಲ್ಲಿ ಸ್ವಲ್ಪ ಪರಿಣಾಮಕಾರಿಯಾಗಿರುವಂತೆ ಕಂಡುಬರುತ್ತದೆ. ರೇಬೀಸ್ ಸೋಂಕಿಗೊಳಗಾದ ನಂತರ ಬದುಕುಳಿದವರು ಕೇವಲ ಕೆಲವೇ ಮಂದಿ ಮತ್ತು ಇದು ಸಾಧ್ಯವಾದುದು ಮಿಲ್ವಾಕೀ ಪ್ರೊಟೊಕಾಲ್ ಎಂದು ಕರೆಯಲಾಗುವ ಒಂದು ವಿಸ್ತೃತ ಚಿಕಿತ್ಸೆಯಿಂದ ಎನ್ನಬಹುದು.

ರೇಬಿಸ್‌ನಿಂದ ಸಾವಿಗೀಡಾಗುವ ಮಕ್ಕಳಲ್ಲಿ ಹೆಚ್ಚಿನವರು 5ರಿಂದ 13 ವರ್ಷದೊಳಗಿನ ಮಕ್ಕಳು. ಶ್ವಾನಗಳ ಜತೆ ಆಟವಾಡುವುದು, ಅವುಗಳ ವರ್ತನೆ ಗೊತ್ತಿಲ್ಲದೇ ಕೆಣಕಲು ಹೋಗಿ ಕಚ್ಚಿಸಿಕೊಳ್ಳುವುದು ಮುಖ್ಯ ಕಾರಣ. ಹೀಗಾಗಿ ಶ್ವಾನಗಳ ವರ್ತನೆ ಮತ್ತು ಆಂಗಿಕ ಭಾಷೆ (ಸಿಟ್ಟು, ಹತಾಶೆ, ಸ್ನೇಹದ ವರ್ತನೆ) ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿದೆ. ರೇಬಿಸ್‌ ಕುರಿತು ಅರಿವು ಮೂಡಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ರಾಷ್ಟ್ರೀಯ ರೇಬಿಸ್‌ ನಿಯಂತ್ರಣ ಯೋಜನೆ’ ರೂಪಿಸಿದೆ.