
ಕಲಬುರಗಿ,ಮೇ.8:ಸರ್ ಜಿನ್ ಹೆನ್ರಿ ಡುನಾಂಟ್ ಅವರ ಜನ್ಮದಿನದ ಅಂಗವಾಗಿ ಸೋಮವಾರ ಬೆಳಗ್ಗೆ 11 ಗಂಟೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾದೇಶಿಕ ಕಛೇರಿ ಮತ್ತು ಸ್ನಾತಕೋತ್ತರ ಕೇಂದ್ರ, ಕಲಬುರಗಿ, ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆಯನ್ನು ಆಚರಿಸಲಾಯಿತು.
ಯುವ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿಯಾದ ಶ್ರೀ ಶರಣಗೌಡ ಬಿರಾದಾರ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಹಾಗೂ ಕೊರೊನಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ತಾಲೂಕಾ ಶಾಖೆ ಮತ್ತು ಜಿಲ್ಲಾ ಕೇಂದ್ರದ ಮಹನಿಯರಿಗೆ ಸ್ವಾಗತಿಸಿದರು. ಪ್ರಾರಂಭದಲ್ಲಿ ಸಸಿಗೆ ನೀರುಣಿಸುವ ಮುಖಾಂತರ ಡಾ. ಶಂಭುಲಿಂಗಪ್ಪ, ವಿ.ಟಿ.ಯು ಕಲಬುರಗಿ, ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಮಾರಂಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕಲಬುರಗಿಯ ಸಭಾಪತಿಗಳಾದ ಶ್ರೀ ಅಪ್ಪಾರಾವ ಅಕ್ಕೋಣೆ ಅವರು ಅಧ್ಯಕ್ಷತೆ ವಹಿಸಿ ರೆಡ್ ಕ್ರಾಸ್ ಸಂಸ್ಥೆಯ ಕೆಲಸ ಕಾರ್ಯಕ್ರಮ ಕುರಿತು ಮಾತನಾಡಿದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಡಾ. ಶಾಂತಾ ಅಷ್ಠಗೆ ಅವರು ಸರ್ ಜಿನ್ ಹೆನ್ರಿ ಡುನಾಂಟ್ ಅವರ ಜೀವನ ಚರಿತ್ರೆ, ರೆಡ್ ಕ್ರಾಸ್ ಇತಿಹಾಸ, ಇದರ ಚಟುವಟಿಕೆಗಳು ಮತ್ತು ಸಂಸ್ಥೆಯ ಮೂಲತತ್ವಗಳ ಬಗ್ಗೆ ಮಹತ್ವದ ತಿಳುವಳಿಕೆಯನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕಲಬುರಗಿಯ ಉಪಸಭಾಪತಿಗಳಾದ ಶ್ರೀ ಅರುಣಕುಮಾರ ಲೋಯಾ, ಯುವ ರೆಡ್ ಕ್ರಾಸ್ ಘಟಕದ ಸಂಯೋಜಕಾರದ ಶ್ರೀ ಧನರಾಜ ಭಾಸಗಿ, ಪದಾಧಿಕಾರಿಯಾದ ಶ್ರೀ ವಿಶ್ವನಾಥ ಕೋರವಾರ ಅವರು ಉಪಸ್ಥಿತರಿದ್ದರು.
2022-23 ನೇ ಸಾಲಿನಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ ಭಾ.ರೆ.ಕ್ರಾ. ಸಂಸ್ಥೆ ಚಿಂಚೋಳಿ ತಾಲೂಕಾ ಶಾಖೆಯ ಸಭಾಪತಿಗಳಾದ ಶ್ರೀ ಜಗನ್ನಾಥ ಶೇರಿಕಾರ, ಭಾ.ರೆ.ಕ್ರಾ. ಸಂಸ್ಥೆ ಚಿತ್ತಾಪೂರ ತಾಲೂಕಾ ಶಾಖೆಯ ಸಭಾಪತಿಗಳಾದ ಸೈಯದ್ ನಿಜಾಮುದ್ದಿನ ಚಿಸ್ತಿ, ಡಾ. ಮಮತಾ ಪಾಟೀಲ, ರಕ್ತ ನಿಧಿ ಅಧಿಕಾರಿಗಳು, ಜಿಮ್ಸ್ ಆಸ್ಪತ್ರೆ, ಕಲಬುರಗಿ, ಶ್ರೀ ಶ್ರೀಕಾಂತ ಲಾಹೋಟಿ, ಮಾಲಿಕರು, ಲಾಹೋಟಿ ಮೋಟರ್ಸ್, ಮತ್ತು ಶ್ರೀ ಸಂಜಯ ಕುಮಾರ, ಪ್ರಧಾನ ವ್ಯವಸ್ಥಾಪಕರು ಎಲ್ ಆಂಡ್ ಟಿ ಲಿಮಿಟೆಡ್, ಮಹನಿಯರಿಗೆ ಶಾಲೂ ಹೋದಿಸಿ, ಹೂಹಾರ ಹಾಕಿ ಪ್ರಶಂಸಾ ಪತ್ರವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೊನೆಯದಾಗಿ ಜಿಲ್ಲಾ ಶಾಖೆಯ ಗೌ. ಕಾರ್ಯದರ್ಶಿಗಳಾದ ರವೀಂದ್ರ ಶಾಬಾದಿ ಅವರು ಎಲ್ಲರನ್ನು ವಂದಿಸಿ ರಾಷ್ಟ್ರಗೀತೆವೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಮಾಡಲಾಯಿತು.