ವಿಶ್ವ ರೆಡಿಯೋಗ್ರಫಿ ದಿನಾಚರಣೆ

ರೆಡಿಯೋಗ್ರಫಿ ಅಥವಾ ಎಕ್ಸ್ ರೇ ಎಂದರೆ ಅದೃಶ್ಯ ಕಿರಣಗಳು ಎಂದರ್ಥ. ಕನ್ನಡದಲ್ಲಿ ಇವನ್ನು ಕ್ಷ ಕಿರಣಗಳೆಂದೂ ಕರೆಯುವುದುಂಟು. ಸುಮಾರು 100 ವರ್ಷಗಳ ಹಿಂದೆ ಕಂಡು ಹಿಡಿಯಲ್ಪಟ್ಟ ಈ ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರದ ಜೊತೆಗೆ ಇತರ ಹಲವಾರು ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆಯನ್ನು ನೀಡುತ್ತ ಬಂದಿದೆ.

ಪ್ರತಿವರ್ಷ ನ ೮ರಂದು ವಿಶ್ವ ರೆಡಿಯೋಗ್ರಫಿ ದಿನಾಚರಣೆಯನ್ನು ಆಚರಿಸಲಾಗುವುದು. ವಿದ್ಯುತ್ಕಾಂತೀಯ ತರಂಗಗಳು ಎಂದು ಕರೆಯಲ್ಪಡುವ ಒಂದು ರೀತಿಯ ವಿಕರಣವೇ ಎಕ್ಸ್‌ ರೇ, ಇದು ವಿಕರಣಗಳನ್ನು ಹಾಯಿಸಿದಾಗ ನಮ್ಮ ದೇಹದ ಒಳಗಿನ ಚಿತ್ರಗಳನ್ನು ಕಪ್ಪು ಬಿಳಿ ಛಾಯೆಯಲ್ಲಿ ನೋಡಬಹುದಾದ ಒಂದು ರೀತಿಯ ತಂತ್ರಜ್ಞಾನ. ವಿಭಿನ್ನ ಅಂಗಾಂಶಗಳು ಭಿನ್ನ ಪ್ರಮಾಣದ ವಿಕಿರಣವನ್ನು ಹೀರಿಕೊಳ್ಳುವ ಮೂಲಕ ನಮಗೆ ಚಿತ್ರವನ್ನು ಗೋಚರಿಸುತ್ತದೆ.

೧೮೯೫ರಲ್ಲಿ ಎಕ್ಸ್‌ ರೇ ಅವಿಷ್ಕಾರವಾಯಿತು. ಆದತ ನೆನೆಪಿಗಾಗಿ ಇಂದು ವಿಶ್ವದೆಲ್ಲಡೆ ಈ ದಿನವನ್ನು ಆಚರಿಸಲಾಗುವುದು. ರೆಡಿಯೋಗ್ರಫಿ ಇಮೇಜಿಂಗ್‌ ಮತ್ತು ಚಿಕಿತ್ಸೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ರೋಗಿಗಳ ರೋಗ ನಿರ್ಣಯ ಮತ್ತು ಚಿಕಿತ್ಸೆಯಲ್ಲಿ ರೇಡಿಯೋಗ್ರಫಿಯು ಇಂದು ನಿರ್ಣಾಯಕ ಪಾತ್ರ ವಹಿಸುತ್ತದೆ.

ಅಸೋಸಿಯೇಷನ್‌ ಆಫ್‌ ರೆಡಿಯೋಗ್ರಾಫರ್ಸ್‌ ಆಫ್‌ ನೈಜೀರಿಯಾ, ಯುನೈಟೆಡ್‌ ಕಿಂಗ್‌ಡಂ ನ ಸೊಸೈಟಿ ಆಫ್‌ ರೆಡಿಯೋಗ್ರಾಫರ್ಸ್‌ ಸೇರಿಂದತೆ ವಿವಿಧ ರಾಷ್ಟ್ರೀಯ ರೇಡಿಯೋಗ್ರಾಫರ್‌ಗಳ ಸಂಘಗಳು ಮತ್ತು ಸಮಾಜಗಳು ಈ ದಿನವನ್ನು ವಿಶ್ವದ್ಯಾದಂತ್ಯ ಆಚರಿಸುತ್ತವೆ.

ಹೆನ್ರಿಕ್ ಗೈಸ್ಲರ್ ಎಂಬಾತ ಒಂದು ಬೆಳವಣಿಗೆಯನ್ನು ಗಮನಿಸಿದ. ಭಾಗಶಃ ನಿರ್ವಾತವಾಗಿರುವ ಕೊಳವೆಯೊಳಗೆ ಅತಿ ಹೆಚ್ಚಿನ ವೋಲ್ಟೇಜ್ ಹೊಂದಿರುವ ವಿದ್ಯುತ್ ಅನ್ನು ಹಾಯಿಸಿದಾಗ, ಸೊಗಸಾದ ಬೆಳಕಿನ ಪ್ರಭೆ ಹರಡುತ್ತಿತ್ತು. ನಂತರ ಸರ್ ವಿಲಿಯಂ ಕ್ರೂಕ್ಸ್ ಅವರು, ಈ ಪ್ರಭೆಗೆ ವಿದ್ಯುದಾಂಶ ಹೊಂದಿರುವ ಕಣಗಳೇ ಕಾರಣ ಎಂಬುದನ್ನು ಪತ್ತೆ ಹಚ್ಚಿದರು. ಅವನ್ನು ಆಗ ಕ್ಯಾಥೋಡ್ ಕಿರಣಗಳು ಎಂದು ಕರೆಯಲಾಯಿತು. ಮುಂದೆ ಹೆನ್ರಿಕ್ ಹರ್ಟ್ಜ್ ಎಂಬ ವಿಜ್ಞಾನಿ, ಈ ವಿದ್ಯುದಾಂಶ ಹೊಂದಿದ ಕಣಗಳು ತೆಳುವಾದ ಬಂಗಾರ ಅಥವಾ ಪ್ಲಾಟಿನಮ್‌ನಂಥ ಲೋಹದ ಹಾಳೆಯೊಳಗಿಂದ ಹಾಯ್ದುಹೋಗುತ್ತವೆ ಎಂಬುದನ್ನು ತೋರಿಸಿಕೊಟ್ಟ. ಆತನ ಶಿಷ್ಯ ಲಿಯೊನಾರ್ಡ್, ಈ ಕಿರಣಗಳು ಕೊಳವೆಯಿಂದ ಹೊರಹೋಗಲು ಪುಟ್ಟ ಕಿಂಡಿಯನ್ನು ಮಾಡಿದ. ಈ ಬೆಳವಣಿಗೆಯ ನಂತರ, 1885ರಲ್ಲಿ ವಿಲಿಯಂ ರಾಂಟಿಜೆನ್ ಎಂಬ ವಿಜ್ಞಾನಿ ಇಂಥ ಕೆಲವು ಕೊಳವೆಗಳ ಮೇಲೆ ಪ್ರಯೋಗ ನಡೆಸುತ್ತಿದ್ದಾಗ, ರಂಧ್ರವಿಲ್ಲದ ಕೊಳವೆಯೊಂದರ ಸುತ್ತಮುತ್ತಲಿನ ಸಟಿಕದಂಥ ವಸ್ತುಗಳು ಥಳಥಳಿಸುತ್ತಿದ್ದುದನ್ನು ಗಮನಿಸಿದ. ರಂಧ್ರವಿಲ್ಲದ್ದರಿಂದ, ಬೆಳಕಿನ ಪ್ರಭೆ ಗಾಜಿನ ಕೊಳವೆಯಾಚೆಗೆ ಹೋಗಲು ಅವಕಾಶವೇ ಇರಲಿಲ್ಲ. ಹೀಗಿರುವಾಗ, ಈ ಪ್ರಭೆ ಉಂಟು ಮಾಡಿದ್ದು ಗಾಜಿನೊಳಗಿಂದ ಹೊರಬಿದ್ದ ಅದೃಶ್ಯ ಕಿರಣಗಳೇ ಇರಬೇಕೆಂದು ಆತ ನಿರ್ಧರಿಸಿದ. ಇವು ಕಣ್ಣಿಗೆ ಗೋಚರವಾಗದ್ದರಿಂದ, ಅವಕ್ಕೆ ಎಕ್ಸ್ ಕಿರಣಗಳು ಎಂದು ಕರೆದ. ಇವು ಇತರ ಕಿರಣಗಳಿಗಿಂತ ಭಿನ್ನವಾಗಿದ್ದವು.

ಈ ಕಿರಣಗಳ ವಿಶೇಷವೆಂದರೆ, ಇವು ಅತಿ ಕಡಿಮೆ ತರಂಗಾಂತರ ಹೊಂದಿರುತ್ತವೆ. ಅತ್ಯಂತ ವೇಗವಾಗಿ ಚಲಿಸುತ್ತವೆ. ಸಾಧಾರಣ ಅಡೆತಡೆಗಳನ್ನು ಭೇದಿಸಿಕೊಂಡು ನುಗ್ಗುತ್ತವೆ. ಬಹುತೇಕ ನಿರ್ವಾತವಾಗಿರುವ ಕೊಳವೆಯೊಂದರಲ್ಲಿ ಧನ ಮತ್ತು ಋಣ ವಿದ್ಯುತ್ ಫಲಕಗಳನ್ನು ಜೋಡಿಸಿ, ಅತ್ಯಕ ವೋಲ್ಟೇಜ್‌ನ ವಿದ್ಯುತ್ ಅನ್ನು ಹಾಯಿಸಲಾಗುತ್ತದೆ. ಈ ಎರಡೂ ಫಲಕಗಳ ನಡುವೆ ವಿದ್ಯುತ್ ಸರಾಗವಾಗಿ ಹರಿಯಲು ಬಾರದಂತೆ ಟಂಗ್‌ಸ್ಟನ್ ಲೋಹದಿಂದ ನಿರ್ಮಿಸಿದ ತಡೆ ಒಡ್ಡಲಾಗುತ್ತದೆ. ಅತ್ಯಕ ವೋಲ್ಟೇಜ್‌ನ ಪ್ರವಾಹಕ್ಕೆ ತಡೆ ಬಿದ್ದ ತಕ್ಷಣ, ಎಕ್ಸ್‌ರೇಗಳು ಉದ್ಭವಿಸಿ ಗಾಜಿನ ಕೊಳವೆಯಿಂದ ಚದುರುತ್ತವೆ. ಈ ಕಿರಣಗಳನ್ನು ನಿಗದಿತ ದಿಕ್ಕಿನೆಡೆ ಚದುರುವಂತೆ ಮಾಡಿ, ಎಕ್ಸ್‌ರೇ ಫೊಟೊ ತೆಗೆಯಲಾಗುತ್ತದೆ. ಮನುಷ್ಯನ ಮೂಳೆಯನ್ನು ಈ ಕಿರಣಗಳು ಭೇದಿಸಲಾಗದ್ದರಿಂದ, ಮೂಳೆ ಮುರಿತ ಪತ್ತೆ ಹಚ್ಚಲು ಇದು ತುಂಬಾ ಉಪಯುಕ್ತ.

ವಿಲ್ಹೆಮ್ ರಾಂಟ್‌ಜನ್(ಮಾರ್ಚ್ ೨೭ ೧೮೪೫ – ಫೆಬ್ರುವರಿ ೧೦ ೧೯೨೩) ಜರ್ಮನಿಯ ಭೌತಶಾಸ್ತ್ರಜ್ಞ.ಇವರು ೧೮೯೫ ರಲ್ಲಿ ಕ್ಷ ಕಿರಣವನ್ನು ಕಂಡುಹಿಡಿದರು.ಇದಕ್ಕಾಗಿ ಇವರಿಗೆ ೧೯೦೧ರಲ್ಲಿ ಪ್ರಥಮ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.

ದದ ಪರಿಚಯವಿಲ್ಲದವರು ಈ ಕಾಲದಲ್ಲಿ ಯಾರೊಬ್ಬರು ಇರಲಾರರು. ಇದರಿಂದ ಪರೀಕ್ಷಗೆ ಒಳಗಾದವರು ವಿರಳವೆಂದೆ ಹೇಳಬಹುದು. ಆದರೆ ಎಕ್ಸ್ ರೇ ಕಿರಣಗಳ ಸ್ವರೂಪವೇನೆಂಬುದನ್ನು ಅರಿತವರು ಬಹಳಷ್ಟು ಮಂದಿ ಇದ್ದಂತ್ತಿಲ್ಲ. ನೂರು ವರ್ಷಗಳ ಹಿಂದೆ ವಿಜ್ಞಾನಿಗಳೆನೆಸಿದವರಿಗೆ ಅದರ ಅಸ್ತಿತ್ವ ಗೊತ್ತಿರಲಿಲ್ಲ. ವಿಧ್ಯುತ್- ಅಯಸ್ಕಾಂತಿಕ ಪ್ರಕಾಶದಿಂದ ಉದ್ಭವಿಸುವ ಈ ಕಿರಣಗಳನ್ನು ಕಂಡು ಹಿಡಿದು ಅಪಾರ ಗೌರವ ಮನ್ನಣೆಗೊಳಿಸಿದವರು ಜರ್ಮನಿಯ ಕಾರ್ನಾಡ್ ರೋಂಟ್‌ಗೇನ್ [ ೧೮೪೫-೧೯೨೩]. ಜಗತ್ತು ಸೃಷ್ಟಿಯಾದಾಗಿನಿಂದ ಪ್ರಕಟವಾದ ವೈಜ್ಞಾನಿಕ ಆವಿಷ್ಕಾರಗಳಲ್ಲಿ ಇದೊಂದು ಅತ್ಯಂತ ಮಹತ್ವದ ಶೋಧನೆಯಾಗಿದೆ. ವೈದ್ಯರು ಈಗ ರೋಗ ನಿದಾನಕ್ಕಾಗಿ ಬಳಸುವ ಸಾಧನ ಸಲಕರಣೆಗಳಲ್ಲಿ ಶೇಕಡ ೫೦ ಕ್ಕಿಂತ ಹೆಚ್ಚು ಎಕ್ಸ್ ರೇ ಗೆ ಸಂಭAದಿಸಿದ ಸಲಕರಣೆಯಿಂದಾಗುತ್ತದೆ. ವೈಜ್ಞಾನಿಕ ಹಾಗೂ ಕೈಗಾರಿಕ ವಲಯಗಳಲ್ಲು ಅದರ ಪಾತ್ರ ಹಿರಿದು.