ವಿಶ್ವ ರಕ್ತದಾನಿಗಳ ದಿನಾಚರಣೆ

ಕೆ.ಆರ್. ಪುರ,ಜೂ.೧೫- ರಕ್ತದಾನ ಮಾಡುವುದರಿಂದ ಮೂರು ಜೀವಗಳ ರಕ್ಷಣೆಮಾಡುವುದರ ಜೊತೆಗೆ ನಮ್ಮ ಸದೃಢ ಆರೋಗ್ಯಕ್ಕೂ ಹೆಚ್ಚು ಸಹಕಾರಿಯಾಗಲಿದೆ ಎಂದು ಇ.ಎಲ್.ವಿ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್ ಸಮೀಪದ ಇ.ಎಲ್.ವಿ ಕಚೇಯಲ್ಲಿ ವಿಶ್ವ ರಕ್ತ ದಾನಿಗಳ ದಿನ ಅಂಗವಾಗಿ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಅವರು ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಪಘಾತ, ಹೆರಿಗೆ ಸಂದರ್ಭದಲ್ಲಿ ರಕ್ತದಾನ ಅವಶ್ಯಕತೆ ಹೆಚ್ಚಾಗಿರುತ್ತದೆ, ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದಾಗ ಬೇಕು, ಯುವಕರು ರಕ್ತದಾನ ಮಾಡುವುದರಿಂದ ಆರೋಗ್ಯವಾಗಿ ಇರಲು ಸಹಕಾರಿ ಯಾಗುತ್ತದೆ ಎಂದು ಅವರು ತಿಳಿಸಿದರು.
ಯುವಕರು ಆರು ತಿಂಗಳಿಗೆ ಒಮ್ಮೆ ರಕ್ತದಾನ ಮಾಡುವುದರಿಂದ ಹೊಸ ರಕ್ತ ಉತ್ಪತ್ತಿ ಆಗಿ ಆರೋಗ್ಯವಂತ ವಾಗಿರಬಹುದು ಎಂದು ಹೇಳಿದರು.
ರಕ್ತದಾನದಿಂದ ಹೃದಯ ಸಂಬಂಧಿಸಿದಂತಹ ಸಮಸ್ಯೆಗಳು ಕಡಿಮೆಯಾಗಲಿದ್ದು,ರಕ್ತದಾನಕ್ಕೆ ಪ್ರತಿಯೊಬ್ಬರು ಯಾವುದೇ ಗೊಂದಲವಿಲ್ಲದೆ ರಕ್ತ ದಾನ ಮಾಡುವಂತೆ ನುಡಿದರು.
ಇಎಲ್ ವಿ ಸಂಸ್ಥೆಯ ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ರಕ್ತದಾನ ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.