ವಿಶ್ವ ರಕ್ತದಾನಿಗಳ ದಿನಾಚರಣೆ

ರಾಯಚೂರು,ಜೂ.೧೪_
ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ನಡೆಯಿತು. ಕಾಲೇಜಿನ ಯುವ ರೆಡ್ ಕ್ರಾಸ್ ಸಮಿತಿ, ಐಕ್ಯೂಎಸಿ ವಿಭಾಗ ಮತ್ತು ನವೋದಯ ವೈದ್ಯಕೀಯ ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನವೋದಯ ವೈದ್ಯಕೀಯ ಕಾಲೇಜಿನ ಕಮ್ಯುನಿಟಿ ಮೆಡಿಸನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರೂಪಕಲಾ ಎನ್. ಚಾಲನೆ ನೀಡಿ ವಿದ್ಯಾರ್ಥಿನಿಯರಿಗೆ ರಕ್ತದಾನದ ಮಹತ್ವ ತಿಳಿಸಿಕೊಟ್ಟರು.
೧೮ ರಿಂದ ೬೫ ವರ್ಷದೊಳಗಿನ ಆರೋಗ್ಯವಂತ ಮಹಿಳೆಯರು ವರ್ಷಕ್ಕೆ ಎರಡು-ಮೂರು ಬಾರಿ ರಕ್ತದಾನ ಮಾಡಬಹುದು. ಬಿ.ಪಿ, ಶುಗರ್ ಇರುವ, ಮುಟ್ಟಿನ ಸಂದರ್ಭದಲ್ಲಿಯೂ ಮಹಿಳೆಯರು ರಕ್ತದಾನ ಮಾಡಬಹುದಾಗಿದೆ.
ಥೈರಾಯ್ಡ್, ಹೆಚ್ ಐ ವಿ ಮತ್ತಿತರ ಗಂಭೀರ ಕಾಯಿಲೆ ಇರುವವರಿಗೆ ರಕ್ತದಾನ ಮಾಡಲು ಬರುವುದಿಲ್ಲ ಎಂಬ ವಿಷಯ ಸೇರಿದಂತೆ ರಕ್ತದಾನ ಕುರಿತ ಹಲವಾರು ಮಾಹಿತಿಗಳನ್ನು ವಿದ್ಯಾರ್ಥಿನಿಯರಿಗೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಪ್ರಾಚಾರ್ಯರಾದ ಡಾ.ಪುಷ್ಪಾ ವಹಿಸಿದ್ದರು.
ಕಾಲೇಜಿನ ಯುವ ರೆಡ್ ಕ್ರಾಸ್ ಸಮಿತಿಯ ಸಂಚಾಲಕಿ ಉಮಾದೇವಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆ ಮೇಲೆ ಐಕ್ಯೂಎಸಿ ಸಂಯೋಜಕಿ ಡಾ.ಜ್ಯೋತಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ಸುಗುಣಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪ್ರಸನ್ನಕುಮಾರ, ಗಣಕಯಂತ್ರ ವಿಭಾಗದ ಮುಖ್ಯಸ್ಥ ಶರಣಗೌಡ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಡಾ.ಸ್ವರೂಪ ರಾಣಿ ಹಾಗೂ ನವೋದಯ ವ್ಯೆದ್ಯಕೀಯ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು. ಕಾರ್ಯಕ್ರಮವನ್ನು ರಾಜೇಶ್ವರಿ ಪ್ರಾರ್ಥಿಸಿದರು, ಸಂಗೀತ ಸ್ವಾಗತಿಸಿದರು, ಶ್ರೀದೇವಿ ವಂದಿಸಿದರು, ಮಂಜುಳಾ ಹಾಗು ಗಾಯತ್ರಿ ನಿರೂಪಿಸಿದರು.