ವಿಶ್ವ ರಂಗ ಭೂಮಿ ದಿನಾಚರಣೆಯ

ರಾಯಚೂರು, ಮಾ.೩೧- ಕರ್ನಾಟಕ ನಾಟಕ ಅಕಡಮಿ ಬೆಂಗಳೂರು ಹಾಗೂ ರಾಗ ಸಂಗಮ ಕಲಾ ಮಂಡಳಿ ( ರಿ ) ರಾಯಚೂರು ರವರ ಸಯುಕ್ತಾಶ್ರಯದಲ್ಲಿ ವಿಶ್ವ ರಂಗ ಭೂಮಿ ದಿನಾಚರಣೆಯ ಅಂಗವಾಗಿ ಶ್ರೀ ಶ್ರೀ ಶ್ರೀ ಮಾದರ ಚೆನ್ನಯ್ಯ ಗುರುಪೀಠ ಬಾಲಭವನದಲ್ಲಿ ರಂಗ ಗೀತೆಗಳು , ಹಾಗೂ ನಾಟಕ ಮೊಜಿನ ಮದುವೆಗಳು ನಾಟಕ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ನಿವೃತ್ತ ಕಾರ್ಮಿಕ ಇಲಾಖೆ ಅಧಿಕಾರಿ ಹಾಗೂ ಹಿರಿಯ ರಂಗಭೂಮಿ ಕಲಾವಿದ ಬಿ.ಹೆಚ್ . ಗುಂಡಳ್ಳಿ ಮಾತನಾಡಿ ರಂಗಭೂಮಿ ಕಲಾವಿದರನ್ನು ಕರ್ನಾಟಕ ನಾಟಕ ಅಕಡಮಿ ಬೆಂಗಳೂರು ಇವರು ಕಲಾವಿದರಿಗೆ ಪ್ರೋತ್ಸಹಾ ನೀಡುತ್ತಾ ಕಲಾವಿದರನ್ನು ಬೆಳೆಸುತ್ತಿದ್ದಾರೆ ಹಾಗೂ ಇನ್ನು ಹೆಚ್ಚಿನ ಹೊಸ ಪ್ರತಿಭೆಗಳನ್ನು ಬೆಳೆಸಿ ರಂಗ ಭೂಮಿಯನ್ನು ಉಳಿಸಿ ಬೆಳೆಸುವ ಕೆಲಸ ಅಕಡಮಿಯವರು ಮಾಡುತ್ತಿದ್ದಾರೆ ಎಂದು ಹೇಳಿದರು. ನಿವೃತ್ತ ಸಿ.ಪಿ.ಐ ರಾಮಣ್ಣ
,ಪೋಲಿಸ ಅಧಿಕಾರಿಗಳು ಉದ್ಘಾಟನೆಯನ್ನು ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಬಿ.ರಾಜಗೋಪಾಲ್, ಅಣಿವೀರಯ್ಯ ಸ್ವಾಮಿ ಹಿರಿಯ ಕಲಾವಿದರು. ಜೋಸಫ್ , ರಾಮಚಂದ್ರಪ್ಪ ಮಸ್ಸಿದಾಪುರ್ , ಜಿ . ರಮೇಶ ಜಿ ತಿಮ್ಮಪೂರು , ಬಿ.ಎನ್ . ವಾಲ್ಮೀಕಿ ಅಸ್ಕಿಹಾಳ ,ಹಾಗೂ ಅನೇಕ ಸಾಹಿತಿಗಳು,ಕಲವಿದರು,ಕಲಾ ಅಭಿಮಾನಿಗಳು,ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.