ವಿಶ್ವ ರಂಗಭೂಮಿ ದಿನಾಚರಣೆ

ಕಲಬುರಗಿ,ಮಾ.27-ಭಗತ್ ಯುವ ಬಳಗ ಹಾಗೂ ನವಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯ ಆಚರಿಸಲಾಯಿತು.
ರಂಗಭೂಮಿ ಕಲಾವಿದ ಸೈಬಣ್ಣಾ (ಉಪ್ಪಿ) ಕಾರ್ಯಕ್ರಮ ಉದ್ಘಾಟಿಸಿದರು. ಭೈರವ ಎಂ.ಪೂಜಾರಿ ಮುಖ್ಯ ಅತಿತಿಗಳಾಗಿ ಆಗಮಿಸಿ ರಂಗಭೂಮಿ ದಿನದ ರಂಗ ಸಂದೇಶ ವಾಚನ ಮಾಡಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಪ್ರವೀಣ್ ನಾಯಕ ಅಧ್ಯಕ್ಷತೆ ವಹಿಸಿದ್ದರು.
ದೇವಾನಂದ್ ಎಸ್ ಪಿ ಅವರು ಪ್ರಾರ್ಥನಾ ಗೀತೆ , ಗಂಗಮ್ಮ ವಾಲಿಕಾರ್ ಅವರು ಸ್ವಾಗತ ಗೀತೆ ,ಭಾಗ್ಯಶ್ರೀ ಮಾಲಿಪಾಟೀಲ ಸ್ವಾಗತ ಭಾಷಣ ಮಾಡಿದರು.
ರಂಗಸಂದೇಶದ ನೆನಪಿನ ಕಾಣಿಕೆ ಕೊಡುವುದರ ಮೂಲಕ ಗಣ್ಯರನ್ನು ಗೌರವಿಸಲಾಯಿತು.ಅಂಬರೀಶ್ ಮರಾಠಾ ನಿರೂಪಿಸಿದರು , ಸಾಗರ್ ಘಾಳೆ ವಂದನಾಪರ್ಣೆ ಮಾಡಿದರು.
ನಂತರ ಭಗತ್ ಯುವ ಬಳಗ ಪ್ರಸ್ತುತಿಯಲ್ಲಿ “ಛಲವಂತ ಮಕ್ಕಳು” ನಾಟಕ ಪ್ರದರ್ಶನವಾಯಿತು.
ತದನಂತರ ನವಚೇತನ ಸಾಂಸ್ಕೃತಿಕ ಕಲಾ ಸಂಸ್ಥೆ ಪ್ರಸ್ತುತಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಯಕ್ರಮದ ಕಳೆ ಹೆಚ್ಚಿಸಿದವು.