ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಮಾ. 27 ರಂದು ಬಿಚ್ಚಿದ ಜೋಳಿಗೆ ನಾಟಕ ಪ್ರದರ್ಶನ

ಕಲಬುರಗಿ,ಮಾ.24:ಕಲಬುರಗಿ ರಂಗಾಯಣ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಡಾ.ಎಸ್.ಜಿ. ನಾಗಲೋಟಿಮಠ ಆತ್ಮಕಥೆ ಆಧಾರಿತ ಬಿಚ್ಚಿದ ಜೋಳಿಗೆ ನಾಟಕ ಪ್ರದರ್ಶನ ಹಾಗೂ ರಂಗ ಗೌರವ ಕಾರ್ಯಕ್ರಮವನ್ನು ಇದೇ ಮಾರ್ಚ್ 27 ರಂದು ಸಂಜೆ 5.30 ಗಂಟೆಗೆ ಕಲಬುರಗಿ ರಂಗಾಯಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ರಂಗಾಯಣ ಉಪನಿರ್ದೇಶಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿಯ ನಾಗೇಂದ್ರ ನಾಟ್ಯ ಸಂಘದ ನಾಗಪ್ಪಯ್ಯ ಮಹಾಸ್ವಾಮಿಗಳನ್ನು ರಂಗ ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.