ವಿಶ್ವ ಯೋಗ ದಿನಾಚರಣೆ

ವಿಜಯಪುರ : ಜೂ.23:ಬುಧವಾರ ಶ್ರೀ ಮಹಾ ತಪಸ್ವಿ ಸೇವಾ ಪ್ರತಿಷ್ಠಾನ(ರಿ) ವತಿಯಿಂದ ಪೂಜ್ಯ ಶ್ರೀ ಶ್ರೀ ಅವಧೂತ ಕವಿ ಗುರುರಾಜ್ ಗುರೂಜಿಯವರ ಆಶೀರ್ವಾದ ಪಡೆದು ಜೂನ್-21 ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿಜಯಪುರದ ನಗರದ ಸ್ವಪ್ನ ಮೂಕ ಮತ್ತು ಕಿವುಡ ಮಕ್ಕಳ ಕಲಿಕಾ ಕೇಂದ್ರದಲ್ಲಿ ಇರುವ ಮುದ್ದು ಮಕ್ಕಳಿಗೆ ಯೋಗಾಭ್ಯಾಸ ಹಾಗೂ ಸೂರ್ಯ ನಮಸ್ಕಾರ ಮಾಡುವ ವಿಧಾನ ತಿಳಿಸಿ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪೆನ ಹಾಗೂ ಸಿಸ್ ಪೆನ್ಸಿಲಗಳ ಕಿಟಗಳನ್ನು ನೀಡುವುದರ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು
ವಿಜಯಪುರ : ಶ್ರೀ ಛತ್ರಪತಿ ಶಿವಾಜಿ ಪೌಂಡೇಶನ ವತಿಯಿಂದ ಕಾರಾಗೃಹಹ ಶಿಕ್ಷಾರ್ಹ ಅಪರಾಧಿಗಳಿಗೆ ಕ್ಷಮೆ ನೀಡಿ ಬಿಡುಗಡೆಗೊಳಿಸಬೇಕೆಂದು ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಖೈದಿಗಳಲ್ಲಿ ಹತ್ತು ವರ್ಷ ಪೂರೈಸಿದ ಖೈದಿಗಳಿಗೆ, ಐದು, ಮೂರು, ವರ್ಷ ಸಜಾ ಅನುಭವಿಸಿದ 40% ಶಿಕ್ಷೆ ಅನುಭವಿಸಿದರಿಗೆ ಸರ್ಕಾರದ ಹೆಚ್ಚುವರಿ ಅಧಿಕಾರದಿಂದ ಬಿಡುಗೊಡೆಗೊಳಿಸಬೇಕೆಂದು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ಕಾರಣ ಕರ್ನಾಟಕ ಕಾರಗೃಹ ನಿರ್ವಹಣೆಗೆ ನೂರಾರು ಕೋಟಿ ಹಣ ಖರ್ಚಾಗುತ್ತಿದ್ದು, ಈ ಬಿಡುಗಡೆ ಭಾಗ್ಯದ ಯೋಜನೆಯಿಂದ ಸರ್ಕಾರಕ್ಕೆ ಹಣ ಉಳಿತಾಯವಾಗಿ ತಾವು ಲೋಕ ಹಿತಕ್ಕಾಗಿ ಹಮ್ಮಿಕೊಂಡಿರುವ ಐದು ಗ್ಯಾರಂಟಿ ಯೋಜನೆಯ ಜೊತೆ ಈ ಬಿಡುಗಡೆ ಭಾಗ್ಯವನ್ನು ಕಲ್ಪಿಸಬೇಕೆಂದು ಸರ್ಕಾರಕ್ಕೆ ಶ್ರೀ ಛತ್ರಪತಿ ಶಿವಾಜಿ ಪೌಂಡೇಶನ ನಗರ ಅಧ್ಯಕ್ಷರಾದ ಧನಂಜಯ ನಿಮಗ್ರೇ(ಉಪ್ಪಾರ), ಮನೋಜ ಗೌಳಿ, ಪವನ ನಲಗೆ, ಗಣೇಶ ಗರುಡಕರ, ಜ್ಞಾನೇಶ್ವರ ಸಿಂದೆ, ಆನಂದ ಗರುಡಕರ ಮುಂತಾದವರು ಸೇರಿ ಜಿಲ್ಲಾಡಳಿತದ ಮುಖಾಂತರ ಕರ್ನಾಟಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದಾರೆಂದು ಪ್ರಕಟಣೆಗೆ ತಿಳಿಸಿದ್ದಾರೆ.