ಸಂಜೆವಾಣಿ ವಾರ್ತೆ
ಗಂಗಾವತಿ, ಜೂ.20: ನಾಳೆ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪತಂಜಲಿ ಯೋಗ ಸಮಿತಿ ಸೇರಿದಂತೆ ಇತರೆ ಸಂಘ ಸಂಸ್ಥೆಗಳಿಂದ ಇಂದು ಜಾಗೃತಿ ಜಾಥ ನಡೆಸಲಾಯಿತು. ನಗರದ ಸಿಬಿಎಸ್ ವೃತ್ತಿದಿಂದ ಆರಂಭವಾಗಿ ಮಹಾವೀರ ವೃತ್ತ, ಗಾಂಧಿ ವೃತ್ತ, ಬಸವಣ್ಣ ವೃತ್ತ, ಪಂಪಾನಗರದ ಮಾರ್ಗವಾಗಿ ಶ್ರೀಕೃಷ್ಣ ದೇವರಾಯ ವೃತ್ತದ ಮೂಲಕ ಲಯನ್ಸ್ ಶಾಲೆಯ ಅವರಣದವರೆಗೆ ಜಾಥಾ ನಡೆಸಲಾಯಿತು. ಯೋಗ ಸಮಿತಿಯ ಸಂಚಾಲಕ ಮಾತನಾಡಿ ಜೂ. 21 ರಂದು ವಿಶ್ವಾದ್ಯಂತ ಯೋಗದಿನವನ್ನು ಆಚರಿಸಲಾಗುತ್ತಿದೆ ಉತ್ತಮ ಆರೋಗ್ಯ ವೃದ್ಧಿಗಾಗಿ ಪ್ರತಿಯೊಬ್ಬರು ದಿನನಿತ್ಯ ಯೋಗ ಮಾಡಬೇಕು. ಯೋಗದಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು. ಈ ವೇಳೆ ಡಿವೈಎಸ್ ಪಿ ರುದ್ರೇಶ ಉಜ್ಜನಕೊಪ್ಪ, ಡಾ.ಎಸ್.ಬಿ ಹಂದ್ರಾಳ, ಸಣ್ಣಕ್ಕಿ ನೀಲಪ್ಪ ಸೇರಿದಂತೆ ಆರ್ಟ್ ಆಫ್ ಲಿವಿಂಗ್ ಯೋಗ ಸಮಿತಿ ಬಳಗ, ಸಹಜ ಯೋಗ ಪ್ರತಿಷ್ಠಾನ ಸಮಿತಿ, ವಿವೇಕ ಜಾಗೃತಿ ಬಳಗ, ರಾಮಚಂದ್ರ ಮೀಷನ್, ಪಿರಾಮಿಡ್ ಧ್ಯಾನ ಕೇಂದ್ರ, ಈಶ್ವರಿ ವಿಶ್ವವಿದ್ಯಾಲಯ, ಯೋಗ ಮತ್ತು ಆಧ್ಯಾತ್ಮ ಬಳಗ ಸೇರಿದಂತೆ ನೂರಾರು ಕಾಲೇಜ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.