ವಿಶ್ವ ಯುವಕೌಶಲ್ಯ ದಿನ

ಕಲಬುರಗಿ ಜು 16: ನಗರದ ಶರಣ ಸಿರಸಗಿ ಮಡ್ಡಿಯಲ್ಲಿರುವ ಜನ ಶಿಕ್ಷಣ ಸಂಸ್ಥಾನ ಕಛೇರಿಯಲ್ಲಿ ವಿಶ್ವಯುವ ಕೌಶಲ್ಯ ದಿನಾಚರಣೆಯನ್ನು ಆಚರಿಸಲಾಯಿತು
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಹಾಯಕ ಕಾರ್ಮಿಕ ಆಯುಕ್ತ ಅವಿನಾಶ ನಾಯಕ್ ಅವರು ಮಾತನಾಡಿ,ಕಾರ್ಮಿಕರಿಗೆತಮ್ಮ ಕೌಶಲ್ಯ ಅಭಿವೃದ್ಧಿಗಾಗಿ ಮತ್ತು ಅವರ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ಪ್ಲಂಬರ್, ಪೇಂಟರ್, ಎಲೆಕ್ಟ್ರಿಷಿಯನ್ ಕಿಟ್‍ಗಳನ್ನು ಸಹ ನೀಡುತ್ತಿದ್ದೇವೆ. ಎಂದು ಹೇಳಿದರು. ಅಲ್ಲದೇ ಸುಳ್ಳು ಮಾಹಿತಿ ನೀಡಿ ನೋಂದಣಿಯಾಗಿ ಸೌಲಭ್ಯ
ಪಡೆದುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ ಎಂದರು
ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರಿಗೆ ಸಿಗುವ ವಿವಿಧ
ಸೌಲಭ್ಯಗಳ ಬಗ್ಗೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹಾಗೂ ಸಹಾಯಕ
ಕಾರ್ಮಿಕ ಅಧಿಕಾರಿಗಳು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾರ್ಮಿಕ ಅಧಿಕಾರಿಗಳು
ರಮೇಶ ಸುಂಬಡ ಮಾತನಾಡಿ ಟೇಲರ್, ಗೃಹ ಕಾರ್ಮಿಕರು, ಹಮಾಲರು, ಭಟ್ಟಿ ಕಾರ್ಮಿಕರಿಗೆ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಜನ ಶಿಕ್ಷಣ ಸಂಸ್ಥಾನದ ನಿರ್ದೇಶಕ ಸುರೇಂದ್ರ ಪೋಲಿಸ್ ಪಾಟೀಲ ಮಾತನಾಡಿ ಕೌಶಲ್ಯ ಅಭಿವೃದ್ಧಿ ಎನ್ನುವುದು ನಮ್ಮ ಜೀವನದ ಅವಿಭಾಜ್ಯ
ಅಂಗವಾಗಿರಬೇಕು. ನಾವು ಪ್ರತಿ ದಿನ ಒಂದಿಲ್ಲೊಂದು ಕೌಶಲ್ಯ ತರಬೇತಿ
ಪಡೆದು ಇನ್ನೂ ಉತ್ತಮ ರೀತಿಯಲ್ಲಿ ನಮ್ಮ ಕ್ಷಮತೆಯನ್ನು ಹೆಚ್ಚಿಸಿಕೊಳ್ಳುಬೇಕು. ನಾವು ಯಾವುದೇ ಒಂದು ವೃತ್ತಿಗೆ
ಅಂಟಿಕೊಂಡಿರದೇ ವಿವಿಧ ರೀತಿಯ ಹಲವಾರು ಬಹು ಕೌಶಲ್ಯಗಳನ್ನು
ಹೊಂದಿ ನಾವು ನಮ್ಮ ಕೌಶಲ್ಯ ಅಭಿವೃದ್ಧಿ ಜೊತೆಗೆ ನಮ್ಮ ಆರ್ಥಿಕ
ಜೀವನವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಸವರಾಜ ಧಾಬಾ, ಸಿದ್ದಣಗೌಡ ಬಿರಾದಾರ, ಹಾಗೂ
ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಪಾರ್ವತಿ ಹಿರೇಮಠ ನಿರೂಪಿಸಿ ವಂದಿಸಿದರು.