ವಿಶ್ವ ಯಕೃತ್ತಿನ ಉರಿಯೂತ ದಿನಾಚರಣೆ

ರಾಯಚೂರು.ಜು.೩೦- ಲಯನ್ಸ್ ಕ್ಲಬ್ ನಿಂದ ವಿಶ್ವ ಯಕೃತ್ತಿನ ಉರಿಯೂತ ದಿನಾಚರಣೆ ಯನ್ನು ಜುಲೈ ೨೮ರಂದು ಲಯನ್ಸ್ ಶಾಲೆಯ ಆವರಣದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಸಂಘಟನೆಯ ಉಸ್ತುವಾರಿ ವಹಿಸಿದ್ದ ಲಯನ್ ಡಾ ಮಂಜುನಾಥ ಹಟ್ಟಿ ಉದರ ರೋಗ ತಜ್ಞರು ವಿಶ್ವ ಯಕೃತ್ತಿನ ಉರಿಯೂತ ದಿನಾಚರಣೆಯ ಉದ್ದೇಶ ವಿವರಿಸಿದರು. ಜುಲೈ ೨೮ ಹೆಪಾಟೈಟಿಸ್ ಬಿ ವೈರಸ್ ಕಂಡು ಹಿಡಿದ ಡಾ ಬ್ಲೂಂಬರ್ಗ ಬರೂಚ ಅವರ ಜನ್ಮದಿನವಾಗಿದ್ದು ವಿಶ್ವದಾದ್ಯಂತ ಈ ದಿನವನ್ನು ವಿಶ್ವ ಯಕೃತ್ತಿನ ಉರಿಯೂತ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ಹೆಪಾಟೈಟಿಸ್ ಬಿ ವೈರಸ್ ಮತ್ತು ಸಿ ವೈರಸ್ ನಿಂದ ಯಕೃತ್ತಿನ ಉರಿಯೂತ ಉಂಟಾಗುತ್ತದೆ ಮತ್ತು ಕೊನೆಯಲ್ಲಿ ಸಿರೋಸಿಸ್ ಹಾಗೂ ಯಕೃತ್ತಿನ ಕ್ಯಾನ್ಸರ್ ಬರಬಹುದು. ಇವು ಮಾರಣಾಂತಿಕ. ಈಗ ಬಿ ವೈರಸ್ ವಿರುದ್ಧ ವ್ಯಾಕ್ಸಿನ್ ಲಭ್ಯವಿದ್ದು ಈ ಮಾರಕ ಕಾಯಿಲೆಯನ್ನು ತಡೆಯಬಹುದು ಎಂದು ತಿಳಿಸಿದರು. ಅದಲ್ಲದೆ ಈ ವೈರಸ್ ನಿಂದ ಬರುವ ಕಾಯಿಲೆಗೆ ಔಷಧಿಗಳು ಲಭ್ಯ ಇವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ಸ್ ಶಾಲೆಯ ಅಧ್ಯಕ್ಷರಾದ ಶರಣ ಭೂಪಾಲ ನಾಡಗೌಡ ಅವರು ಡಾ ಮಂಜುನಾಥ ಮತ್ತು ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದರು. ಶಾಲಾ ಸಿಬ್ಬಂದಿ ಈ ಮಾಹಿತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಾಳಿ ಅವರು ಕ್ಲಬ್ ನ ಮೂಲಕ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಹೃದಯ ರೋಗ ತಜ್ಞರಾದ ಲಯನ್ ಸುರೇಶ ಸಗರದ ಅವರು ಸಾಮಾನ್ಯ ಆರೋಗ್ಯ ಕಾಪಾಡಲು ಕೈಗೊಳ್ಳಲು ಬೇಕಾದ ಉಪಾಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಶಾಲೆಯ ಸಿಬ್ಬಂದಿ ಮತ್ತು ಲಯನ್ ಸದಸ್ಯರಿಗೆ ಬಿಪಿ,ಸಕ್ಕರೆ ಪರೀಕ್ಷೆಯ ಜೊತೆ ಹೆಪಾಟೈಟಿಸ್ ಬಿ ವೈರಸ್ ಮತ್ತು ಸಿ ವೈರಸ್ ಪರೀಕ್ಷೆ ಮಾಡಲಾಯಿತು.
ಲಯನ್ ರಾಜೇಂದ್ರ ಕುಮಾರ್ ಶಿವಾಳೆ ಅವರು ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಲಯನ್ಸ ಕ್ಲಬ್ ಸದಸ್ಯರಾದ ಲಯನ್ ಕೆ ಎಂ ಪಾಟೀಲ್, ಲಯನ್ ಡಾ.ಸುರೇಶ ಸಗರದ, ಲಯನ್ ಗೋವಿಂದರಾಜು, ಲಯನ್ ಲಯನ್ ಹೆಮಣ್ಣ, ಲಯನ್ ಗುರುನಾಥ ಪಾಟೀಲ, ಲಯನ್ ಶೆಟ್ಟಿ ನಾಗರಾಜ, ಬಿ.ಎ.ರಾಯಚೂರು, ಲಯನ್ ಬಸವರಾಜ ಗದಗಿನ, ಲಯನ್ ನರೇಶಬಾಬು, ಲಯನ್ ಶೈಲೇಶ ಮುಂತಾದವರು ಬಾಗವಹಿಸಿದ್ದರು. ಲಯನ್ ಶಾಲೆಯ ಪ್ರಾಂಶುಪಾಲರಾದ ರಜನಿ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಲಯನ್ ಸದಸ್ಯರ ಕುಟುಂಬ ಸದಸ್ಯರು ಮತ್ತು ಶಾಲೆಯ ಸಿಬ್ಬಂದಿ ಭಾಗವಹಿಸಿದ್ದರು.