ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಆಚರಿಸಲಾಯಿತು

ರಾಯಚೂರು.ಡಿ.೨೦- ಇತ್ತೀಚಿಗೆ ಭಾರತ ಸರಕಾರ ನೆಹರು ಯುವ ಕೇಂದ್ರ, ರಾಯಚೂರು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಭಾರತ ಸೇವಾದಳ, ಮಾನವ ಹಕ್ಕುಗಳು ಹಾಗೂ ಭ್ರಷ್ಟಚಾರ ವಿರೋಧಿ ಸಂಸ್ಥೆ ದೆಹಲಿ, ಸುಮಯ್ಯ ಮಹಿಳಾ ಮಂಡಳಿ ರಾಯಚೂರು ಹಾಗೂ ಡಾ|| ಬಿ.ಆರ್. ಅಂಬೇಡ್ಕರ ಯುವ ಅಭಿವೃದ್ದಿ ಸಂಘ ರಾಯಚೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಪ್ರಸ್ತಾವಿಕವಾಗಿ ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿಗಳಾದ ಜಿ.ಎಸ್. ಹಿರೇಮಠ ಅವರು ಮಾತನಾಡುತ್ತ ನೆಹರು ಯುವ ಕೇಂದ್ರದಲ್ಲಿ ಸಿಗುವ ಸೌಲಭ್ಯಗಳನ್ನು ತಿಳಿಸಿಕೊಡುತ್ತ ಯುವ ಶಕ್ತಿ ದೇಶದ ಆಸ್ತಿ ವಿದ್ಯಾರ್ಥಿಗಳು ದುಶ್ಚಟ್ಟಗಳಿಗೆ ಬಲಿಯಾಗಬಾರದು ವಿದ್ಯಾರ್ಥಿ ಹಂತದಿಂದಲೇ ಉತ್ತಮ ಸಂಘಟನೆಯ ಮೂಲಕ ಹಳ್ಳಿಗಳ ಹಾಗೂ ದೇಶಾಭಿವೃದ್ದಿ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಈ ದೇಶವು ಯವಕರಿಂದ ಕೂಡಿದೆ ಆದರಿಂದ ಯುವಕರ ಶಕ್ತಿಯನ್ನು ಈ ದೇಶದ ಅಭಿವೃದ್ದಿಗೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸೈಯದ್ ಸಾಧಿಕ್ ತಾತಾ ಜಿಲ್ಲಾ ಅಧ್ಯಕ್ಷರು ಮಾನವ ಹಕ್ಕುಗಳು ಹಾಗೂ ಭ್ರಷ್ಟಚಾರ ವಿರೋಧಿ ಸಂಸ್ಥೆ ರಾಯಚೂರು ಮಾನವ ಹಕ್ಕುಗಳ ಉಲ್ಲಂಘನೆ ತಡೆಯುವಲ್ಲಿ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರೂಪಾ ಶ್ರೀನಿವಾಸನಾಯಕ ಜಿಲ್ಲಾ ಅಧ್ಯಕ್ಷರು ಮಾನವ ಹಕ್ಕುಗಳು ಹಾಗೂ ಭ್ರಷ್ಟಚಾರ ವಿರೋಧಿ ಸಂಸ್ಥೆ ರಾಯಚೂರು ಮಹಿಳಾ ಘಟಕ ಇವರು ಮಾತನಾಡುತ್ತ ಸಮಾಜದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆ ನಡೆಯುತಿದೆ ಇದನ್ನು ತಡೆಗಟ್ಟಲು ಸರಕಾರ ಮತ್ತು ಅನೇಕ ಸಂಘ – ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತೀವೆ ಆದರೂ ಉಲ್ಲಂಘನೆ ಆಗುತ್ತಿದೆ. ಆದರಿಂದ ಪ್ರತಿಯೊಬ್ಬರಲ್ಲಿ ಸ್ವಯಂ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ ತಾವುಲ್ಲಾ ಗಾರಲದಿನ್ನಿ ವಕೀಲರು ಹಾಗೂ ಕಾರ್ಯದರ್ಶಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಯಚೂರು ಇವರು ಮಾತನಾಡುತ್ತ ಕರೋನಾ ವೈರಸ್ ಬಗ್ಗೆ ತಿಳಿಸಿ ಕೊಟ್ಟರು ಪ್ರತಿಯೊಬ್ಬರು ಮಾಸ್ಕನ್ನು ಧರಿಸಿ ಸಮಾಜಿಕ ಅಂತರವನ್ನು ಕಾಪಾಡಬೇಕೆಂದು ಹೇಳಿದರು. ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ ಟಿ.ರಾಮಯ್ಯನಾಯಕ ಉಡಮಗಲ್ ವಕೀಲರು ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರು ಇವರು ಮಾತನಾಡುತ್ತ ಪ್ರಪಂಚದಲ್ಲಿ ಯಾವುದೇ ದೇಶದಲ್ಲಿ ಇರಲಾರದಂತಹ ಸಂವಿಧಾನವನ್ನು ಡಾ|| ಬಾಬಾ ಸಾಹೇಬ್ ಅಂಬೇಡ್ಕರ ಅವರು ನೀಡಿದ್ದಾರೆ ಅದರಲ್ಲಿ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ನೀಡಿದರೆ ಆದರೆ ಹಕ್ಕುಗಳ ಮಾತ್ರವಲ್ಲದೇ ಕರ್ತವ್ಯಗಳನ್ನು ಪ್ರತಿಯೊಬ್ಬರು ಪಾಲಿಸಬೇಕೆಂದು ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾಸ್ಕ, ಸ್ಯಾನಿಟೈಜರ್, ಎರ್ನಾಜಿ ಜ್ಯೂಸ್ ಪ್ರತಿಯೊಬ್ಬರಿಗೂ ವಿತರಿಸಲಾಯಿತು. ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆಯನ್ನು ತಿರುಮಲೇಶ ಕಾರ್ಯದರ್ಶಿ ಡಾ|| ಬಿ.ಆರ್. ಅಂಬೇಡ್ಕರ ಯುವ ಅಭಿವೃದ್ದಿ ಸಂಘ ರಾಯಚೂರು ಇವರು ವಹಿಸಿದರೆ ಕೊನೆಯಲ್ಲಿ ವಂದನಾರ್ಪಣೆಯನ್ನು ಹೀನಾ ಕೌಸರ್ ಅಧ್ಯಕ್ಷರು ಸುಮಯ್ಯ ಮಹಿಳಾ ಮಂಡಳಿ ರಾಯಚೂರು ಸರ್ವರನ್ನು ವಂದಿಸಿದರು.