ವಿಶ್ವ ಮಾನವ ಕುವೆಂಪು ಸಂದೇಶ ಚಿಂತನೆ ಅಗತ್ಯ

ರಾಯಚೂರು, ಡಿ.೨೯- ರಾಷ್ಟ್ರ ಕವಿ ಕುವೆಂಪು ತಮ್ಮ ಸಾಹಿತ್ಯದ ಮೂಲಕ ಮನುಷ್ಯನನ್ನು ವಿಶ್ವ ಮಾನವನಾಗಿ ಹೇಗೆ ಕಲ್ಪನೆ ಮಾಡಬೇಕು ಎಂಬುದು ಇಡೀ ಪ್ರಪಂಚಕ್ಕೆ ಸಂದೇಶ ನೀಡಿದ ಮಹಾನ್ ವ್ಯಕ್ತಿ ಎಂದು ಹಿರಿಯ ಸಾಹಿತಿ ವೀರಹನುಮನ್ ಅವರು ಹೇಳಿದರು.
ಅವರಿಂದು ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಕಾರ್ಯಕ್ರಮವ ಉದ್ಘಾಟಿಸಿ ಮಾತನಾಡುತ್ತಾ, ಕುವೆಂಪು ಗುರಿ ಸಾಧನೆಯೊಂದಿಗೆ
ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕೆಂದು ಅವರು ಹೇಳುತ್ತಿದ್ದರು ಎಂದರು.ಕುವೆಂಪು ಅವರ ವಿಶ್ವಮಾನವ ಕಲ್ಪನೆ ಆಧ್ಯಾತ್ಮಿಕವಾಗಿ ಹಾಗೂ ವೈಜ್ಞಾನಿಕವಾಗಿ ಅದ್ಭುತ ಕಲ್ಪನೆಯಾಗಿದೆ. ಸರ್ವಕಾಲಿಕ ಶ್ರೇಷ್ಠವಾಗಿದೆ ಎಂದರು. ಮನುಷ್ಯ ಹುಟ್ಟುತ್ತ ವಿಶ್ವ ಮಾನವನಾಗಿದ್ದರೂ, ಬೆಳೆಯುತ್ತ ಅಲ್ಪ ಮಾನವನಾಗುತ್ತಾನೆ ಎಂದು ಅಭಿಪ್ರಾಯಪಟ್ಟರು. ೧೨ ಶತಮಾನದ ಪಂಪ ಮತ್ತು ಕುಮಾರವ್ಯಾಸ ಜಗತ್ತು ಒಳತಿಗೆ ಉತ್ತಮ ಸಂದೇಶಗಳನ್ನು ಸಾರಿದ್ದರು.
ಕುವೆಂಪು ಅವರ ಸಂದೇಶಗಳು ಇಂದಿನ ಪೀಳಿಗೆಗೆ ತಲುಪಬೇಕು ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಮಂಗಳ ನಾಯಕ, ಸಾಹಿತಿಗಳು ಸೇರಿದಂತೆ ಉಪಸ್ಥಿತರಿದ್ದರು.