ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.26: ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಣೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್‌ 26ರಂದು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನವನ್ನು  ಆಚರಿಸಲಾಗುತ್ತದೆ.
 ನಗರದ ಬಿ.ಇ ಹನುಮಂತಮ್ಮ ಮೆಮೋರಿಯಲ್ ಕಾಲೇಜು ಆವರಣದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ನಿಷೇಧ ದಿನಾಚರಣೆಯನ್ನು ಆಚರಿಸಲಾಯಿತು.
 ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗಿ ತನ್ನ ಜೀವವನ್ನೇ ಕಳೆದುಕೊಳ್ಳುತ್ತಾನೆ ಹಾಗೂ ಆರ್ಥಿಕವಾಗಿ ದಿವಾಳಿ ಕೂಡ ಆಗುತ್ತಾನೆ. ಇದರಿಂದ ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸ್ನೇಹಿತರಿಂದಲೇ ಈ ಮಾದಕ ವಸ್ತುಗಳ ಬಳಸುವುದು ಕಲಿಯುತ್ತರೆ ಅದ್ದರಿಂದ ಒಳ್ಳೆಯ ಸ್ನೇಹಿತರನ್ನು ಗಳಿಸಿದಗಲೇ ಸುಂದರ ಭವಿಷ್ಯವನ್ನು ನಿರ್ಮಿಸಿ ಕೊಳ್ಳಲು ಸಾದ್ಯ ಹಾಗೂ ಸಮಾಜ ಮಾದವ ವಸ್ತುಗಳಿಂದ ಮುಕ್ತವಾಗಿರಬೇಕು. ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಣೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್‌ 26ರಂದು ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನವನ್ನು ಆಚರಿಸಲಾಗುತ್ತದೆ ಎಂದು ಸಿರುಗುಪ್ಪ ಪೋಲಿಸ್ ಠಾಣೆಯ ಸಿ.ಪಿ.ಐ ಯಶವಂತ ಬಿಸ್ನಳ್ಳಿ ತಿಳಿಸಿದರು.
  ಈ ಮಾದಕ ವಸ್ತುಗಳ ಮಾರುವಿಕೆಯ ಬಗ್ಗೆ ವಿದ್ಯಾರ್ಥಿಗಳು ಮುಕ್ತವಾಗಿ ಮಾತನಾಡಿದರು.
  ವಿಶ್ವದಾದ್ಯಂತ ಈ ದುಶ್ಚಟಗಳಿಗೆ ಮಕ್ಕಳು ಮತ್ತು ಯುವಕರು ಹೆಚ್ಚು ಬಲಿಯಾಗುತ್ತಿದ್ದಾರೆ ಕಾರಣ ಗೆಳೆಯರಿಂದ ಅದ್ದರಿಂದ ಒಳ್ಳೆಯ ಗೆಳೆಯರೊಂದಿಗೆ ಗೆಳೆತನ ಮಾಡಿದರೆ ಮಾತ್ರ ಈ ದುಶ್ಚಟಗಳಿಂದ ದೂರ ಆಗಲು ಸಾಧ್ಯ. ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಣೆ ಕಾನೂನ ಬಾಹಿರ ಎಂದು ಗೊತ್ತಿದ್ದರೂ ಇದರ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ‌ ಎಂದು ಎಲ್ಲರಿಗು ಗೊತ್ತಿರುತ್ತೆ ಅದರೆ ಈ ವಿಷಯಗಳನ್ನು ನಮ್ಮ ಠಾಣೆಗೆ ಬಂದು ತಿಳಿಸಿದರೆ ಮಾತ್ರ ಇದರ ನಿಯಂತ್ರಿಸಲು ಸಾಧ್ಯವಾಗುತ್ತದೆ. ಡ್ರಗ್‌ ಮಾಫಿಯಾ ಹತೋಟಿಗೆ ತರಲು ವಿಶ್ವದೆಲ್ಲೆಡೆ ಕಾನೂನು ಪ್ರಯತ್ನಗಳು ನಡೆಯುತ್ತಿವೆ. ಆದರೆ ಇದನ್ನು ಬುಡ ಸಮೇತ ಕಿತ್ತು ಹಾಕಲು ನಮ್ಮ ಸಹಾಯವಾಣಿ 112 ಗೆ ಪೋನ್ ಮಾಡಿ ತಿಳಿಸಬೇಕಾಗಿದೆ. ಪ್ರತಿಯೊಬ್ಬ ನಾಗರಿಕನೂ ಈ ಬಗ್ಗೆ ಜಾಗೃತಿ ಹೊಂದಿ ವಿಶ್ವವನ್ನು ಮಾದಕವಸ್ತುಗಳಿಂದ ಮುಕ್ತವಾಗಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ ಮತ್ತು ಈ ದುಶ್ಚಟ ನಿಯಂತ್ರಣಕ್ಕೆ ಬರಬೇಕೆಂದರೆ ವಿದ್ಯಾರ್ಥಿಗಳ ಕಾರ್ಯ ಬಹಳ ಬೇಕಾಗಿದೆ ಎಂದು ಡಿ.ವೈ.ಎಸ್.ಪಿ ವೆಂಕಟೇಶ ತಿಳಿಸಿದರು.
 ತೆಕ್ಕಲಕೋಟೆ ಪೋಲಿಸ್ ಠಾಣೆಯ ಸಿ.ಪಿ.ಐ ಸುಂದೆರೇಶ್, ಸಿರಿಗೇರಿ ಠಾಣೆಯ ಪಿ.ಎಸ್.ಐ ಸದ್ದಾಂ ಹುಸೇನ್‌, ಪ್ರಿನ್ಸಿಪಾಲ್ ಪವನ್ ಕುಮಾರ್, ಉಪನ್ಯಾಸಕರಾದ ಸಂಯುಕ್ತ ಕುಲಕರ್ಣಿ, ಕಾಲೇಜಿನ  ಶಿಕ್ಷಕರಾದ ರುದ್ರಪ್ಪ, ಅಜುರುದ್ದಿನ್ ಹಾಗೂ ಸಹಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು