ವಿಶ್ವ ಮಹಿಳಾ ದಿನಾಚರಣೆ

ಶಹಾಪೂರ:ಮಾ.10:ತಾಲೂಕಿನ ಗೋಗಿ.ಕೆ ಮತ್ತು ಗೋಗಿ.ಪಿ ಗ್ರಾಮ ಪಂಚಾಯತಿಯ ಸಂಯುಕ್ತಾಶ್ರಯದಲ್ಲಿ ತಾಲೂಕ ಮಟ್ಟದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ.ಶಹಾಪೂರ, ಸಹಾಯಕ ನಿರ್ದೇಶಕರು, ತಾಲೂಕ ಯೋಜನಾಧಿಕಾರಿಗಳು, ಮಹಿಳಾ ಗ್ರಾ.ಪಂ.ಸದಸ್ಯರು,ಸ್ವ.ಭಾ.ಮಿ ಸಮಾಲೋಚಕರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ವಸತಿ ನಿಲಯದ ಮೇಲ್ವಿಚಾರಕಿಯರು, ಜಿ.ಪಿ.ಎಲ್ ಎಫ್ ಅಧ್ಯಕ್ಷರು, ಉಪಸ್ಥಿತರಿದ್ದು, ಆಶಾ- ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ವಸತಿ ನೀಲಯದ ವಿದ್ಯಾರ್ಥಿನಿಯರು,ಗ್ರಾ.ಪಂ.ಸಿಬ್ಬಂದಿಯವರು, ಭಾಗವಹಿಸಿದ್ದರು.

ಸ್ವಚ್ಛ ಭಾರತ ಮಿಷನ್ ಹಂತ II ರ ಘಟಕಾಂಶಗಳ ಅನುಷ್ಠಾನದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಗ್ರಾಮೀಣ ಜನತೆಯಲ್ಲಿ ಜಾಗೃತರನ್ನಾಗಿ ಮಾಡುತ್ತಿರುವುದನ್ನು ಗಮನಿಸಿ,ಮಹಿಳಾ ಗ್ರಾ.ಪಂ.ಅಧ್ಯಕ್ಷರು- ಸದಸ್ಯರು, ತಾಲೂಕ ಪಂಚಾಯತಿಯ ಮಹಿಳಾ ಸಿಬ್ಬಂದಿ, ಉPಐಈ ಸದಸ್ಯರಿಗೆ, ಗೋಗಿ.ಕೆ ವಸತಿ ನಿಲಯದ ಮೇಲ್ವಿಚಾರಕಿ, ಆಶಾ- ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ ಮಾಡಲಾಯಿತು.