ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಸೈಕ್ಲೋಥಾನ್

ಕಲಬುರಗಿ:ಮಾ.05: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷವಾಗಿ ಮಹಿಳೆಯರಿಗೆ ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆಯ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ “ಹೆಲ್ತಿ ವುಮೆನ್ ಹೆಲ್ಲತಿ ಇಂಡಿಯಾ”ಎಂಬ ಷೋಷವಾಕ್ಯೊಂದಿಗೆ ಇಂದು ರವಿವಾರದಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಸೈಕ್ಲೋಥಾನ್‍ನ್ನು ಪ್ರಾರಂಭಮಾಡಲಾಯಿತು. ಇದು ಆರಂಭಗೊಂಡು ಈ ಸೈಕ್ಲೋಥಾನ್‍ವು ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದ ಮಾರ್ಗವಾಗಿ ಶರಣಬಸವೇಶ್ವರ ದೇವಸ್ಥಾನ ಅಪ್ಪನ ಕೆರೆ, ಜಗತ್ ಸರ್ಕಲ್ ಮೂಲಕ ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯವರೆಗೆ ತಲುಪಿತ್ತು. ಆ ಸಮಯದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ, ಆರ್.ಸಿ.ಹೆಚ್. ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ಡಿ.ಎಸ್.ಓ. ಡಾ.ಸುರೇಶ ಮೇಕಿನ್, ಡಿಪಿಸಿ.ಎನ್.ಸಿ.ಡಿ., ಡಾ. ಪ್ರೀತಮ್ ಎ. ತೇಲ್ಕರ್, ಕೆ.ಸಿ.ಸಿ. ಅಧ್ಯಕ್ಷ ಕಿರಣ್ ಶಟ್‍ಕರ್, ಡಾ. ಮಂಗಲಾ ರುದ್ರವಾಡಿ, ಡಾ.ಪಾಟೀಲ್, ಅವರು ಉಪಸ್ಥಿತರಿದ್ದರು.