ವಿಶ್ವ ಮಣ್ಣು ದಿನಾಚರಣೆ

ಬಸವಕಲ್ಯಾಣ: ಡಿ.7:ತಾಲೂಕಿನ ಮಂಠಾಳ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಬೀದರ ಅವರ ಸಹಯೋಗದಿಂದ 75ನೇ ಸ್ವಾತಂತ್ರ ಅಮೃತ ಮಹೋತ್ಸವದ ನಿಮಿತ್ಯವಾಗಿ ವಿಶ್ವ ಮಣ್ಣು ದಿನಾಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸುನೀಲಕುಮಾರ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಮಣ್ಣು ಮತ್ತು ಅದರ ಉತ್ಪಾದನೆಗೆ ಹೆಚ್ಚಿಸಲು ಪ್ರತಿಯೊಬ್ಬರು ಕಾಳಜಿ ವಹಿಸಬೇಕು. ಫಲವತ್ತತೆ ಹೆಚ್ಚಾದಾಗ ಅದರಿಂದಾಗಿ ಉತ್ತಮವಾಗಿ ಬೆಳೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಸಹಾಯಕ ಕೃಷಿ ನಿರ್ದೇಶಕ ಮಾಥರ್ಂಡ ಮಚಕುರಿ ಮಾತನಾಡಿ, ಕೃಷಿ ಇಲಾಖೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಲು ಸರ್ಕಾರದಿಂದ ಪೂರೈಸುವ ಗೊಬ್ಬರ, ಲಘು ಪೋಶಂಕಾಶಗಳ ಮತ್ತು ಇತರೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಶ್ರೀಶೈಲ, ಮಣ್ಣು ವಿಜ್ಞಾನ ಪರಿಣಿತ ಕೈಲಾಶ್, ಸಸ್ಯ ರೋಗ ಶಾಸ್ತ್ರಾಜ್ಞರಾದ ವಿದ್ಯಾಸಾಗರ ಹಾಜರಿದ್ದರು.