ವಿಶ್ವ ಮಣ್ಣಿನ ದಿನ!


ವಿಶ್ವ ಮಣ್ಣಿನ ದಿನಾಚರಣೆಯನ್ನು ಪ್ರತಿ ವರ್ಷ ಡಿ.5 ರಂದು  ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ(FAO) ವತಿಯಿಂದ ಆಚರಿಸಲಾಗುತ್ತದೆ. ಇದರ ಕೇಂದ್ರ ಕಚೇರಿ ರೋಮ್ ನಲ್ಲಿದೆ.

ಮಣ್ಣು ಭೂಮಿಯ ಮೇಲಿನ ಪದರವಾಗಿದ್ದು, ಸಾವಯವ ಮತ್ತು ಅಜೈವಿಕ ವಸ್ತುಗಳ ಮಿಶ್ರಣವಾಗಿದೆ, ಇದರಲ್ಲಿ ಸಸ್ಯಗಳು ಬೆಳೆಯುತ್ತವೆ. ಇದು ಸೀಮಿತ ನೈಸರ್ಗಿಕ ಸಂಪನ್ಮೂಲವಾಗಿದೆ. ಮಾನವನ ಸಮಯದ ಪ್ರಮಾಣದಲ್ಲಿ ಅದು ನವೀಕರಿಸಲಾಗುವುದಿಲ್ಲ. ಆದಾಗ್ಯೂ, ಮಾನವನ ಜೀವನೋಪಾಯದಲ್ಲಿ ಮಣ್ಣು ವಹಿಸುವ ಅಗತ್ಯವಾದ ಪಾತ್ರದ ಹೊರತಾಗಿಯೂ, ಅನುಚಿತ ನಿರ್ವಹಣಾ ಪದ್ಧತಿಗಳ ಕಾರಣದಿಂದಾಗಿ ಮಣ್ಣಿನ ಸಂಪನ್ಮೂಲಗಳ ಅವನತಿಗೆ ವಿಶ್ವಾದ್ಯಂತ ಹೆಚ್ಚಳ, ಸಮರ್ಥನೀಯ ತೀವ್ರತೆಯನ್ನು ಚಾಲನೆ ಮಾಡುವ ಜನಸಂಖ್ಯೆಯ ಒತ್ತಡ ಮತ್ತು ಈ ಅಗತ್ಯ ಸಂಪನ್ಮೂಲದ ಮೇಲೆ ಅಸಮರ್ಪಕ ಆಡಳಿತವನ್ನು ಹೊಂದಿದೆ.

ಮಾನವ ಮತ್ತು ಮಣ್ಣಿಗೆ ಬಿಡಲಾರದ ನಂಟು. ಮಣ್ಣು ಇಡೀ ಜೀವಸಂಕುಲದ ನಾಂದಿ. ಎಲ್ಲಾ ಜೀವರಾಶಿಗಳಿಗೂ ಮಣ್ಣು ಬೇಕೇ ಬೇಕು. ಜಗತ್ತು ಇಂದು ಎಷ್ಟೇ ಮುಂದುವರಿದಿದ್ದರೂ ಮಣ್ಣಿನ ಸಾಂಗತ್ಯವಿಲ್ಲದೆ ಯಾರ ಜೀವನವೂ ಮುಂದೆ ಹೋಗದು. ಅದು ತಿನ್ನುವ ವಸ್ತುವಾಗಿರಲಿ, ತೊಡುವ ಬಟ್ಟೆಯಾಗಿರಲಿ ಅಥವಾ ವಾಸಿಸುವ ಮನೆಯಾಗಿರಲಿ, ಎಲ್ಲವೂ ಮಣ್ಣು ಜನ್ಯವೇ ಆಗಿರುತ್ತವೆ. ಆದ್ದರಿಂದ ನಮ್ಮ ಪೂರ್ವಜರು ಮಣ್ಣನ್ನು ಅತಿ ಶ್ರೇಷ್ಠ ಮತ್ತು ಪವಿತ್ರ ಎಂದು ಪರಿಗಣಿಸಿದ್ದಾರೆ.

ಯಾವ ಋುಣವನ್ನಾದರೂ ತೀರಿಸಬಹುದು ಆದರೆ ಮಣ್ಣಿನ ಋುಣವನ್ನು ತೀರಿಸುವುದು ಎಂದಿಗೂ ಅಸಾಧ್ಯ ಎಂಬ ಗಾದೆ ಮಾತು ಕೂಡಾ ಇದೆ. ಇದು ಮಣ್ಣಿನ ಮಹತ್ವವನ್ನು ಸಾರುತ್ತದೆ. ಇಂಥ ಮಣ್ಣಿನ ಮಹತ್ವವನ್ನು ಅರಿಯುವ ಉದ್ದೇಶದಿಂದಲೇ ಈ ದಿನವನ್ನು ಆಚರಿಸಲಾಗುತ್ತದೆ.

ನಮ್ಮ ಬದುಕಿನ ಎಲ್ಲಾ ಸ್ತರಗಳಲ್ಲೂ ಪೂರಕವಾಗಿರುವ ಮಣ್ಣು ಇಂದು ವಿವಿಧ ಮಾಲಿನ್ಯಗಳಿಂದಾಗಿ ಕಲುಷಿತಗೊಳ್ಳುತ್ತಿದೆ. ಮಣ್ಣಿನ ಸವಕಳಿ ಹೆಚ್ಚುತ್ತಿದ್ದು, ಅದರ ಪೋಷಕಾಂಶ ಮಟ್ಟ ಕಡಿಮೆಯಾಗುತ್ತಿದೆ. ಇದನ್ನು ಅರಿತುಕೊಳ್ಳುವ ಕಾರ್ಯಕ್ರಮಗಳನ್ನು ವಿಶ್ವ ಮಣ್ಣು ದಿನದಂದು ಹಮ್ಮಿಕೊಳ್ಳಲಾಗುತ್ತದೆ. ಮಣ್ಣಿನ ಪ್ರಮಾಣ, ಗುಣಮಟ್ಟಗಳಲ್ಲಿ ವ್ಯತ್ಯಯವುಂಟಾದರೆ ಅದು ನಮ್ಮ ಆಹಾರ, ನೀರು, ಗಾಳಿ ಒಟ್ಟಿನಲ್ಲಿ ಇಡೀ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮವುಂಟು ಮಾಡುತ್ತದೆ. ಆದ್ದರಿಂದ ಮಣ್ಣಿನ ರಕ್ಷ ಣೆಯೇ ಪ್ರತಿಯೊಬ್ಬರ ಧ್ಯೇಯವಾಗಿರಬೇಕು. 2002 ರಲ್ಲಿ ಇಂಟರ್‌ನ್ಯಾಷನಲ್‌ ಯೂನಿಯನ್‌ ಆಫ್‌ ಸಾಯ್ಲ್‌ ಸೈನ್ಸ್‌ ಎಂಬ ಸಂಸ್ಥೆ ಈ ದಿನಾಚರಣೆಯನ್ನು ಆರಂಭಿಸಿತು.

ಮಣ್ಣಿನ ಪ್ರಮಾಣ, ಗುಣಮಟ್ಟಗಳಲ್ಲಿ ವ್ಯತ್ಯಯವುಂಟಾದರೆ ಅದು ನಮ್ಮ ಆಹಾರ, ನೀರು, ಗಾಳಿ ಸೇರಿದಂತೆ ಇಡೀ ಪರಿಸರದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಆದ್ದರಿಂದ ಮಣ್ಣಿನ ರಕ್ಷ ಣೆಯೇ ಪ್ರತಿಯೊಬ್ಬರ ಧ್ಯೇಯವಾಗಿರಬೇಕು ಎನ್ನುತ್ತಾರೆ ಕೃಷಿ ತಜ್ಞರು. ಮಣ್ಣು ಭೂಮಿಯ ಮೇಲಿನ ಪದರವಾಗಿದ್ದು, ಸಾವಯವ ಮತ್ತು ಅಜೈವಿಕ ವಸ್ತುಗಳ ಮಿಶ್ರಣವಾಗಿದೆ. ಇದು ಸೀಮಿತ ನೈಸರ್ಗಿಕ ಸಂಪನ್ಮೂಲವಾಗಿದೆ. ವಾತಾವರಣಕ್ಕಿಂತ ಮಣ್ಣು ಮೂರು ಪಟ್ಟು ಹೆಚ್ಚು ಇಂಗಾಲವನ್ನು ಹೊಂದಿದೆ.

ಬದಲಾಗುವ ವಾತಾವರಣದ ಸವಾಲುಗಳನ್ನು ಎದುರಿಸಲು ನಮಗೆ ಸಹಾಯ ಮಾಡುತ್ತದೆ. ಅಂದಾಜು ಶೇ. 95 ರಷ್ಟು ಆಹಾರ ನಮಗೆ ಭೂಮಿಯಿಂದ ಸಿಗುತ್ತದೆ. ನಮ್ಮ ಜಾಗತಿಕ ಮಣ್ಣುಗಳಲ್ಲಿ ಶೇ. 33 ರಷ್ಟು ಈಗಾಗಲೇ ಅಳಿದುಹೋಗಿದೆ. ಮೇಲ್ಪದರಲ್ಲಿರುವ 1 ರಿಂದ 2 ಇಂಚು ಮಣ್ಣು ಸತ್ವದಿಂದ ಕೂಡಿದೆ. ಮಣ್ಣಿನಲ್ಲಿ 17 ಪೋಷಕಾಂಶಗಳಿರಬೇಕು. ಆದರೆ ಇಂದು ನಾವು ಭೂಮಿಗೆ 3 ರಿಂದ 4 ಪೋಷಕಾಂಶಗಳನ್ನು ಮಾತ್ರ ನೀಡುತ್ತಿದ್ದೇವೆ. ಆದ್ದರಿಂದಲೇ ಪ್ರತಿಯೊಬ್ಬ ರೈತರು ಮಣ್ಣು ಪರೀಕ್ಷೆ ಮಾಡಿಸಿ ಅಗತ್ಯಕ್ಕೆ ತಕ್ಕಂತೆ ಪೋಷಕಾಂಶ ನೀಡಬೇಕು ಎಂದು  ಸಲಹೆ ನೀಡಿದ್ದಾರೆ.