ವಿಶ್ವ ಮಣ್ಣಿನ ದಿನಾಚರಣೆ

ಕಲಬುರಗಿ:ಡಿ.8:ವಲಯ ಕೃಷಿ ಸಂಶೋಧನಾ ಕೇಂದ್ರ, ಭಾ.ಕೃ.ಸಂ.ಮಂ.-ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಮಹಾವಿದ್ಯಾಲಯ, ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ, ವಲಯ ಕೃಷಿ ಸಂಶೋಧನಾ ಕೇಂದ್ರ, ಕಲಬುರಗಿಯಲ್ಲಿ ವಿಶ್ವ ಮಣ್ಣಿನ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಣ್ಣು ವಿಜ್ಞಾನಿ ಡಾ. ಕೆ.ಬಸವರಾಜ, ವ.ಕೃ.ಸಂ.ಕೇಂ., ಕಲಬುರಗಿ ಇವರು ಮಣ್ಣಿನ ನಿರ್ವಹಣೆಯಲ್ಲಿ ಮಾಡಿದ ಕಾರ್ಯದ ಗೌರವಾರ್ತವಾಗಿ ಥೈಲ್ಯಾಂಡ ದೇಶದ ರಾಜ ಭೂಮಿಬೋಲ್ ಅದುಲ್ಯದೇಜ್ ಅವರ ಜನ್ಮ ದಿನವನ್ನು ಪ್ರತಿ ವರ್ಷ 5ನೇ ಡಿಸೆಂಬರ್‍ದಂದು 2014 ರಿಂದ ಮಣ್ಣು ಸಂಬಂಧಿತ ವಿವಿಧ ಮೂಲ ವಿಷಯಗಳೊಂದಿಗೆ ವಿಶ್ವ ಮಣ್ಣು ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಣ್ಣು ಸವಳಾಗುವುದನ್ನು ತಡೆಗಟ್ಟುವ ಮತ್ತು ಮಣ್ಣಿನ ಉತ್ಪಾದಕತೆಯನ್ನು ಹೆಚ್ಚಿಸುವ ಮಾರ್ಗ ಉಪಾಯಗಳನ್ನು ಮತ್ತು ಮನುಷ್ಯನ ಅನೇಕ ದೈಹಿಕ ಮತ್ತು ಮಾನಸಿಕ ಕಾಯಿಲೆಗಳು ಮಣ್ಣಿನಲ್ಲಿರುವ ಪೋಷಕಾಂಶಗಳ ಕೊರತೆಯ ಪರಿಣಾಮವಾಗಿವೆ. ಆದುದರಿಂದ ಮಣ್ಣಿನ ಆರೋಗ್ಯವೇ ನಮ್ಮ ಆರೋಗ್ಯವೆಂದು ಪ್ರತಿಪಾದಿಸಿದರು.
ಉದ್ಘಾಟಕರ ಭಾಷಣದಲ್ಲಿ ಡಾ.ಜೆ.ಆರ್. ಪಾಟೀಲ, ನಿವೃತ್ತ ಸಹ ಸಂಶೋಧನಾ ನಿರ್ದೇಶಕರು, ವ.ಕೃ.ಸಂ.ಕೇ., ಕಲಬುರಗಿ ಇವರು ಮಾತನಾಡುತ್ತಾ ಮಣ್ಣಿನ ಆರೋಗ್ಯವೇ ನಮ್ಮ ಆರೋಗ್ಯ, ಕೃಷಿಯಲ್ಲಿ ಪ್ಲಾಸ್ಟೀಕ್ ಬಳಕೆಯನ್ನು ನಿಷೇಧಿಸಬೇಕೆಂದು ಹಾಗೂ ಜಮೀನಿಗೆ ಹೆಚ್ಚು ಹೆಚ್ಚು ಸಾವಯವ ಗೊಬ್ಬರ ಹಾಕಿ, ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚು ಮಾಡಬೇಕೆಂದು ತಿಳಿಸಿಕೊಟ್ಟರು.
ಡಾ. ರಾಜು ತೆಗ್ಗೆಳಿ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ಇವರು ಮಣ್ಣಿಗೆ ಜೀವವಿದೆ, ಮಣ್ಣು ಎಲ್ಲಿಂದ ಉತ್ಪಾದನೆಯಾಗುತ್ತದೆ, ಮಣ್ಣು ತಾಯಿಗೆ ಸಮ ಮತ್ತು ಮಣ್ಣಿನ ಸಂಪನ್ಮೂಲಗಳನ್ನು ಸುಸ್ಥಿರ ನಿರ್ವಹಣೆಗಾಗಿ ಯಾವ ಕ್ರಮಗಳನ್ನು ಅನುಸರಿಸಬೇಕೆಂದು ವಿವರಸಿದರು.
ಡಾ. ರಾಚಪ್ಪ ವ್ಹಿ. ಹಾವೇರಿ, ಹಿರಿಯ ವಿಜ್ಞಾನಿ (ಕೀಟಶಾಸ್ತ್ರ), ವ.ಕೃ.ಸಂ.ಕೇ., ಕಲಬುರಗಿ ಇವರು ಮಾತನಾಡಿ ಬೆಳೆ ತ್ಯಾಜ್ಯ ವಸ್ತುಗಳನ್ನು ಸುಡುವುದರ ಬದಲು ಕಾಂಪೋಸ್ಟ್ ಮತ್ತು ಎರೆಹುಳು ಗೊಬ್ಬರ ಮಾಡಿ ಜಮೀನಿಗೆ ಹಾಕುವುದರಿಂದ ಮಣ್ಣಿನಲ್ಲಿ ಸಾವಯವ ಅಂಶ ಹೆಚ್ಚು ಮಾಡಿ, ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳನ್ನು ಸುಧಾರಿಸಿ ಮಣ್ಣನ್ನು ಸುಸ್ಥಿರ ಕೃಷಿಗೆ ಬಳಸಬಹುದೆಂದು ತಿಳಿಸಿದರು.
ಅಧ್ಯಕ್ಷೆಯ ಭಾಷಣದಲ್ಲಿ ಡಾ.ಎಂ.ಎಂ. ಧನೋಜಿ, ಸಹ ಸಂಶೋಧನಾ ನಿರ್ದೇಶಕರು, ವ.ಕೃ.ಸಂ.ಕೇ., ಕಲಬುರಗಿ ಅವರು ಮಣ್ಣಿಗೆ ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ, ಸಾವಯವ ಗೊಬ್ಬರಗಳ ಬಳಕೆಗೆ ಹೆಚ್ಚಿನ ಮಹತ್ವಕೊಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಡಾ.ಮುನಿಸ್ವಾಮಿಎಸ್., ಹಿರಿಯ ವಿಜ್ಞಾನಿ (ಜಿ.ಪಿ.ಬಿ.), ವ.ಕೃ.ಸಂ.ಕೇ., ಕಲಬುರಗಿ, ಕಾರ್ಯಕ್ರಮದ ಸ್ವಾಗತವನ್ನು ಡಾ.ಬಿ.ಎಸ್.ರೆಡ್ಡಿ, ಹಿರಿಯ ಕ್ಷೇತ್ರ ಅಧೀಕ್ಷಕರು, ವ.ಕೃ.ಸಂ.ಕೇ., ಕಲಬುರಗಿ ಹಾಗೂ ವಂದನಾರ್ಪಣೆಯನ್ನು ಡಾ.ಎಸ್.ಬಿ.ಏರಿ, ವಿಜ್ಞಾನಿ (ಜೈವಿಕ ತಂತ್ರಜ್ಞಾನ), ವ.ಕೃ.ಸಂ.ಕೇ., ಕಲಬುರಗಿ ಇವರು ನೆರವೇರಿಸಿದರು. ವಲಯ ಕೃಷಿ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯ ಎಲ್ಲಾ ಸಿಬ್ಬಂದಿ ವೃಂದದವರು ಉಪಸ್ಥಿತರಿದ್ದರು.