ವಿಶ್ವ ಮಕ್ಕಳ ದಿನಾಚರಣೆ


ವಿಶ್ವದಾದ್ಯಂತ ಮಕ್ಕಳ ದಿನಾಚರಣೆಯನ್ನು ನವೆಂಬರ್ 20 ರಂದು ಆಚರಿಸುತ್ತಾರೆ. ಭಾರತದಲ್ಲಿ ನವೆಂಬರ್ 14 ರಂದು ಜವಾಹರ್ ಲಾಲ್ ನೆಹರುರವರ ಹುಟ್ಟುಹಬ್ಬದಂದು ಮಕ್ಕಳ ದಿನಾಚರಣೆಯನ್ನು ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ. ಮಕ್ಕಳ ಹಕ್ಕು ಹಿತರಕ್ಷಣೆ ಮತ್ತು ಹೋಗಕ್ಷೇಮದ ಉದ್ದೇಶದೊಂದಿಗೆ ಜಗತ್ತಿನಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಾರೆ.

ವಿ.ಎನ್. ಕುಲಕರ್ಣಿ ಎನ್ನುವವರು 1951ರಲ್ಲಿ ವಿಶ್ವಸಂಸ್ಥೆಯ ಒಂದು ಯೋಜನೆಯಡಿಯಲ್ಲಿ ಇಂಗ್ಲೆಂಡಿನ ಮಕ್ಕಳ ಕಲ್ಯಾಣಕ್ಕಾಗಿ ದುಡಿಯುತ್ತಿದ್ದರು. ಆ ದಿನಗಳಲ್ಲಿ ಬಡ ಮಕ್ಕಳ ಅಭಿವೃದ್ಧಿಗಾಗಿ ನಿಧಿ ಸಂಗ್ರಹಕ್ಕೆ ರಾಣಿ ಎಲಿಜಬೆತ್-2 ಅವರ ಜನ್ಮದಿನವನ್ನು ಧ್ವಜ ದಿನಾಚರಣೆಯನ್ನಾಗಿ ಆಚರಿಸುತ್ತಾ ಧನ ಸಂಗ್ರಹಿಸಲಾಗುತ್ತಿತ್ತು.
ಆ ಸಂದರ್ಭದಲ್ಲಿ ಕುಲಕರ್ಣಿಯವರು ಮನಸ್ಸು ಸಹಜವಾಗಿಯೇ ಭಾರತೀಯ ಮಕ್ಕಳ ಸ್ಥಿತಿಗತಿಯ ಬಗ್ಗೆ ಮಿಡಿಯಿತು. ಇಂತಹದೊಂದು ಯೋಜನೆ ಭಾರತದಲ್ಲೂ ನಡೆಯಬೇಕು. ಮಕ್ಕಳಿಗಾಗಿ ಧನ ಸಂಗ್ರಹಿಸಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕು ಎನ್ನುವ ಬಗ್ಗೆ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪವಿಟ್ಟರು.

ಮಕ್ಕಳ ಹಕ್ಕು ಹಿತರಕ್ಷಣೆ ಮತ್ತು ಯೋಗಕ್ಷೇಮದ ಉದ್ದೇಶದೊಂದಿಗೆ ಜಗತ್ತಿನಾದ್ಯಂತ ಮಕ್ಕಳ ದಿನಾಚರಣೆಯನ್ನು 20 ನವೆಂಬರ್ 1954 ರಂದು ಆಚರಿಸಲು ವಿಶ್ವಸಂಸ್ಥೆ ಕರೆನೀಡಿದರು. ಮಕ್ಕಳ ದಿನಾಚರಣೆಯ ಮುಖ್ಯ ಉದ್ದೇಶ ಮಕ್ಕಳ ಹಕ್ಕು, ಹಿತರಕ್ಷಣೆ, ಯೋಗಕ್ಷೇಮ, ಮಕ್ಕಳ ಆರೋಗ್ಯ, ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿಗೆ ಶ್ರಮಿಸುವುದು. “ಇಂದಿನ ಮಕ್ಕಳೆ ಮುಂದಿನ ಜನಾಂಗ”. ಪಾಲಕರಿಗೆ ಒಂದು ಕಿವಿಮಾತು. “ಮಕ್ಕಳಿಗಾಗಿ ಆಸ್ತಿಮಾಡಬೇಡಿ, ಮಕ್ಕಳನ್ನೆ ಆಸ್ತಿಯನ್ನಾಗಿಮಾಡಿ”.  ಮಕ್ಕಳ ಯೋಗಕ್ಷೇಮ ಮತ್ತು ಕಲ್ಯಾಣ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಕ್ಕಳ ನಡುವೆ ಒಡನಾಟ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವಂತೆ ಉತ್ತೇಜಿಸುವುದು ಈ ದಿನದ ಉದ್ದೇಶ.

ಮಕ್ಕಳಿಗಿರುವ ಹಕ್ಕುಗಳೇನು?ಇಲ್ಲಿ ಮಕ್ಕಳೆಂದರೆ ಸಾಮಾನ್ಯ ಸಾಮಾನ್ಯವಾಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ವ್ಯಾಖ್ಯಾನಿಸಲಾಗುತ್ತದೆ. ಮಕ್ಕಳ ಹಕ್ಕುಗಳೆಂದರೆ ಮಾನವ ಹಕ್ಕುಗಳು, ಇದು ಅಪ್ರಾಪ್ತರ ಆರೈಕೆ ಮತ್ತು ರಕ್ಷಣೆಯ ವಿಶೇಷ ಅಗತ್ಯಗಳನ್ನು ಸಹ ಗುರುತಿಸುತ್ತದೆ.ಮಕ್ಕಳ ಹಕ್ಕುಗಳ ಕುರಿತಾದ ಅಂತಾರಾಷ್ಟ್ರೀಯ ಒಪ್ಪಂದಗಳು, ಎಲ್ಲಾ ಮಕ್ಕಳು ಶಾಂತಿ, ಘನತೆ, ಸಹನೆ, ಸ್ವಾತಂತ್ರ್ಯ, ಸಮಾನತೆ ಮತ್ತು ಒಗ್ಗಟ್ಟಿನ ಮನೋಭಾವದಿಂದ ಬೆಳೆಯಬೇಕು ಎಂದು ಹೇಳುತ್ತವೆ. ಆಧುನಿಕ ಜಗತ್ತಿನಲ್ಲಿ, ಈ ಸಿದ್ಧಾಂತಗಳು ಪ್ರತಿ ದೇಶದ ಶಿಕ್ಷಣ, ಆರೋಗ್ಯ, ಕಾನೂನು ಮತ್ತು ಸಾಮಾಜಿಕ ಸೇವೆಗಳ ವ್ಯವಸ್ಥೆಯನ್ನು ನಿರ್ದೇಶಿಸುತ್ತವೆ. ದುರದೃಷ್ಟವಶಾತ್ ಇದು ಇನ್ನೂ ಸಾಧ್ಯವಾಗಿಲ್ಲ.

 ಪ್ರಪಂಚದಾದ್ಯಂತ ಒಂದು ಬಿಲಿಯನ್ಗೂ ಹೆಚ್ಚು ಮಕ್ಕಳು ಶಾಲೆಗಳ ಮುಚ್ಚುವಿಕೆಯಿಂದ ತೊಂದರೆಗೊಳಗಾಗಿದ್ದಾರೆ. ಯುನೆಸ್ಕೊ ಪ್ರಕಾರ , ವಿಶ್ವದ ಶೇ 94ರಷ್ಟು ಯುವ ವಿದ್ಯಾರ್ಥಿಗಳ ಮೇಲೆ ಹಾಗೂ ಶೇ.99 ರಷ್ಟು ಮಧ್ಯಮ ಆದಾಯದ ದೇಶಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೆಟ್ಟು ಬಿದ್ದಿದೆ. ಕೋವಿಡ್-19 ಕ್ಕಿಂತ ಮೊದಲು, ಶಿಕ್ಷಣ ಪಡೆಯದ ಮಕ್ಕಳ ಸಂಖ್ಯೆ 250 ಮಿಲಿಯನ್ಗಿಂತ ಹೆಚ್ಚಿತ್ತು.’ಕೋವಿಡ್-19 ಮತ್ತು ಅದಕ್ಕೂ ಮೀರಿದ ಶಿಕ್ಷಣ’ ಎಂಬ ವಿಶ್ವಸಂಸ್ಥೆಯ ನೀತಿಯನ್ನು ಸಂಕ್ಷಿಪ್ತಗೊಳಿಸಿ ಕಲಿಕೆಯ ಬಿಕ್ಕಟ್ಟಿನ ಬಗ್ಗೆ ಎಚ್ಚರಿಸಿದೆ, ಅಲ್ಲಿ ಹೆಚ್ಚುವರಿ 23.8 ಮಿಲಿಯನ್ ಮಕ್ಕಳು ಮತ್ತು ಯುವಜನತೆಯು “ಸಾಂಕ್ರಾಮಿಕ ರೋಗದಿಂದ ಎದುರಾದ ಆರ್ಥಿಕ ಸಮಸ್ಯೆಯಿಂದಾಗಿ  ಶಾಲೆಗೆ ಹೋಗಲು ಸಾಧ್ಯವಾಗದಿರಬಹುದು ಅಥವಾ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುವ ಸಾಧ್ಯತೆ ಇದೆ ಎಂದು ತಿಳಿಸಿತ್ತು