ವಿಶ್ವ ಬೈಸಿಕಲ್ ದಿನಾಚರಣೆ: ಸೈಕಲ್ ಜಾಥಾ

ಮೈಸೂರು, ಜೂ.03:- ಇಂದು ವಿಶ್ವ ಬೈಸಿಕಲ್ ದಿನಾಚರಣೆ ಪ್ರಯುಕ್ತ ಸೈಕಲ್ ಜಾಥಾ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಕಚೇರಿಯಿಂದ ಆಯೋಜಿಸಲಾಗಿತ್ತು.
ಜಾಧಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಿಂದ ಹೊರಟು ಎಸ್ ಪಿ ಆಫೀಸ್ ವೃತ್ತದಿಂದ ಹಾಗೂ ಗೋಪಾಲಗೌಡ ಆಸ್ಪತ್ರೆಯ ವೃತ್ತದಿಂದ ಮರಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ಸೈಕಲ್ ರ್ಯಾಲಿಯನ್ನು ಮುಕ್ತಾಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಮಹಾದೇವ ಪ್ರಸಾದ್ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ಅರ್ಚನಾ ಕಾರ್ಯಕ್ರಮ ಸಂಯೋಜಕರು ಪದ್ಮಾವತಿ ಉಪಜಿಲ್ಲಾ ಆರೋಗ್ಯ ಅಧಿಕಾರಿಗಳು ಯಶೋಧ ತಾಲೂಕು ಮೇಲ್ ವಿಚಾರಕರು ಹಾಗೂ ಸಮುದಾಯದ ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು