ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಅಂಗವಾಗಿ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ

ವಿಜಯಪುರ, ಜೂ.11: ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಬಾಲಕಾರ್ಮಿಕಯೋಜನಾ ಸಂಘ, ಅನೌಪಚಾರಿಕ ಶಿಕ್ಷಣ ಸಂಸ್ಥೆ, ಮತ್ತು ಲೊಯೋಲಾಕೈಗಾರಿಕಾತರಬೇತಿ ಸಂಸ್ಥೆ ವಿಜಯಪುರ ಸಹಯೋಗದೊಂದಿಗೆವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನದ ಅಂಗವಾಗಿ ಜೂ.10ರಂದು ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಅಧಿಕಾರಿ ಎಸ್.ಜಿ.ಖೈನೂರ ಅವರು ಮಾತನಾಡಿ, ದೇಶದ ಅಭಿವೃದ್ದಿಗೆ ಬಾಲಕಾರ್ಮಿಕ ಪದ್ಧತಿ ಮಾರಕವಾಗಿದೆ. ಈ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ವಿವಿಧ ಇಲಾಖೆಗಳ ಜೊತೆಗೆ ಸಾರ್ವಜನಿಕರ ಸಹಕಾರವೂ ಅತ್ಯವಶ್ಯಕವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಫಾದರ್ ಪ್ರಾನ್ಸಿಸ್ ಮೆನೆಂಜಸ್ ಸುಪಿರಿಯರ್ ಅವರು ಮಾತನಾಡಿ, ವಿಶ್ವ ಮಟ್ಟದಿಂದಲೂ ಅನೇಕ ವರ್ಷಗಳಿಂದ ಈ ಸಾಮಾಜಿಕ ಬಾಲಕಾರ್ಮಿಕ ಪಿಡುಗು ವಿರುದ್ಧ ಹೋರಾಡುತ್ತ ಬರಲಾಗಿದೆ. ಅನೇಕ ಕಾಯ್ದೆ ಕಾನೂನುಗಳನ್ನು ಜಾರಿಗೆ ತಂದು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರಯತ್ನಿಸಲಾಗಿದ್ದು, ಪ್ರತಿಯೊಬ್ಬರು ಬಾಲಕಾರ್ಮಿಕ ನಿರ್ಮೂಲನೆಗೆ ಕೈ ಜೋಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಕುಮಾರಿ ನೀಲಮ್ಮಾ ಖೇಡಗಿ, ಲೋಯೋಲಾ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಫಾದರ್ ಎಂಟೋನಿ ಲಾರೆನ್ಸ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳು ಉಪಸ್ಥಿತರಿದ್ದರು.