ವಿಶ್ವ ಬಂಧು ಮರುಳಸಿದ್ದೇಶ್ವರಸ್ವಾಮಿಯ ಸಂಭ್ರಮದ ಕಾರ್ತಿಕೋತ್ಸವ

ಕೊಟ್ಟೂರು ಜ.5: : ತಾಲೂಕಿನ ತೂಲಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಗ್ರಾಮದ ಆರಾಧ್ಯ ದೈವ, ಪುರದೊಡೆಯ ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರ ಸ್ವಾಮಿಯ ಕಾರ್ತಿಕೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಅಸಂಖ್ಯಾತ ಭಕ್ತಾಧಿಗಳು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹಾಗೂ ಕರೋನ ನಿವಾರಣೆಗೆ ವಿಶೇಷ ಪೂಜೆ ಸಲ್ಲಿಸಿದರು. ರಾತ್ರಿ 10 ಘಂಟೆಗೆ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯ ಮೆರವಣಿಗೆಯು ಸಾಗಿ ಅಂತಿಮವಾಗಿ ತುರುಮಂದಿ ಶ್ರೀ ಬಸವೇಶ್ವರ ದೇವಾಲಯದಲ್ಲಿ ಉತ್ಸವ ಮೂರ್ತಿ ಪ್ರತಿಷ್ಟಾಪನೆಗೈದು ಇಡೀ ರಾತ್ರಿಯಿಡಿ ಭಜನೆ, ನಂದಿಕೋಲು ಕುಣಿತ, ಸಮೇಳ ವಾದ್ಯಗಳಿಂದ ಕಾರ್ತಿಕೋತ್ಸವ ಕಳೆಕಟ್ಟಿತು.ಆಬಾಲ ವೃದ್ದರಾದಿಯಾಗಿ ಸುಜ್ಞಾನದ ದೀವಿಗೆಗಳನ್ನು ಬೆಳಗುವ ಮುಖೇನ ಹಬ್ಬವನ್ನು ಸಂಭ್ರಮಿಸಿದರು.