
(ಸಂಜೆವಾಣಿ ವಾರ್ತೆ)
ವಿಜಯಪುರ: ಜು.13:ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ನಿರ್ಮಿಸುವಲ್ಲಿ ನಮ್ಮೆಲ್ಲರ ಪಾತ್ರ ದೊಡ್ಡದಿದೆ. ಈ ನಿಟ್ಟಿನಲ್ಲಿ ಪೇಪರ್ ಬ್ಯಾಗ್ ಬಳಕೆ ತುಂಬಾನೆ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಪ್ಲಾಸ್ಟಿಕ್ ಬಳಕೆ ನಿರ್ಮೂಲನೆಗಾಗಿ ಎಲ್ಲರಲ್ಲೂ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 12 ರಂದು ವಿಶ್ವ ಪೇಪರ್ ಬ್ಯಾಗ್ ದಿನವನ್ನು ಆಚರಿಸಲಾಗುತ್ತಿದೆ.
ಪ್ಲಾಸ್ಟಿಕ್ ಚೀಲಗಳಿಗಿಂತ ಕಾಗದದ ಚೀಲಗಳನ್ನು ಬಳಸುವುದರಿಂದ ಹಲವಾರು ಪ್ರಯೋಜನಗಳಿವೆ. ಅವುಮರುಬಳಕೆ ಮಾಡಬಹುದಾದ ಮತ್ತು ಹೆಚ್ಚು ಜೈವಿಕ ವಿಘಟನೀಯವಾಗಿದ್ದು, ಪರಿಸರಕ್ಕೆ ಕಡಿಮೆ ಹಾನಿಕಾರಕವಾಗಿವೆ. ಪ್ಲಾಸ್ಟಿಕ್ ಚೀಲಗಳ ಬಳಕೆಯು ಪರಿಸರಕ್ಕೆ ಹಾನಿಯಾಗುವುದಲ್ಲದೆ ಮಾನವನ ಆರೋಗ್ಯಕ್ಕೂ ಅಪಾಯವನ್ನುಂಟುಮಾಡುವ ಜಾಗತಿಕ ಕಾಳಜಿಯಾಗಿದೆ.
ಕಾಗದದ ಚೀಲಗಳು 100% ಮರುಬಳಕೆ ಮಾಡಬಹುದಾದವು. ಪ್ಲಾಸ್ಟಿಕ್ ಚೀಲಗಳ ತಯಾರಿಕೆಗೆ ಹೋಲಿಸಿದಾಗ ಕಾಗದದ ಚೀಲಗಳನ್ನು ತಯಾರಿಸಲು ಕಡಿಮೆ ಶಕ್ತಿ ಬೇಕು. Á್ಲಸ್ಟಿಕ್ ಚೀಲಗಳಂತೆ ಪೇಪರ್ ಬ್ಯಾಗ್‍ಗಳು ಪ್ರಾಣಿಗಳಿಗೆ ಹಾನಿಕಾರಕವಲ್ಲ.
ಈ ಪೇಪರ್ ಬ್ಯಾಗ್ ದಿನದಂದು ನಾವೆಲ್ಲರೂ ಸೇರಿ ಪೇಪರ್ ಬ್ಯಾಗ್‍ಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸೋಣ.ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಅನುಶ್ರೀ-ಶ್ರೀನಿಧಿ ಬಂಡೆ ಅವರು ಪೇಪರ್ ಬ್ಯಾಗ್ ದಿನವನ್ನು ಆಚರಿಸಿದರು.