ವಿಶ್ವ ಪುಸ್ತಕ ಹಾಗೂ ಕೃತಿ ಸ್ವಾಮ್ಯ ದಿನಾಚರಣೆ

ಇಂಡಿ:ಏ.24:ವಿಶ್ವ ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನವು ವಿವಿಧ ದೇಶಗಳು ಮತ್ತು ಪ್ರದೇಶಗಳ ಪುಸ್ತಕಗಳನ್ನು ಪ್ರಚಾರ ಮಾಡುವ ಮೂಲಕ, ಕೃತಿಗಳ ಅನುವಾದಗಳನ್ನು ಪೆÇ್ರೀತ್ಸಾಹಿಸುವ ಮೂಲಕ ಮತ್ತು ವೈವಿಧ್ಯಮಯ ಸಾಹಿತ್ಯ ಸಂಪ್ರದಾಯಗಳನ್ನು ಉತ್ತೇಜಿಸುವ ಮೂಲಕ ಸಾಂಸ್ಕøತಿಕ ವಿನಿಮಯವನ್ನು ಉತ್ತೇಜಿಸುತ್ತದೆ. ಇದು ವಿಶ್ವ ಸಾಹಿತ್ಯದ ಶ್ರೀಮಂತಿಕೆ ಮತ್ತು ವೈವಿಧ್ಯತೆಯನ್ನು ಆಚರಿಸುತ್ತದೆ’ ಎಂದು ಗ್ರಂಥಪಾಲಕ ರಾಘವೇಂದ್ರ ಇಂಗನಾಳ ಹೇಳಿದರು.
ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಅಡಿಯಲ್ಲಿ “ವಿಶ್ವ ಪುಸ್ತಕ ಹಾಗೂ ಕೃತಿ ಸ್ವಾಮ್ಯ” ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಂಶುಪಾಲ ಡಾ.ಎಸ್.ಬಿ.ಜಾಧವ ಮಾತನಾಡಿ ಓದುವದು ಜೊತೆಗೆ ಬರೆಯುವುದು ಪ್ರತಿಯೊಬ್ಬ ಕಲಿಕಾರ್ಥಿಯ ಆದ್ಯ ಕರ್ತವ್ಯವಾಗಿದೆ ನಾವೆಲ್ಲ ಓದುಗ ಉಪನ್ಯಾಸಕರು ಮಹತ್ವದ ಪುಸ್ತಕಗಳ ಓದಿನಿಂದ ವಿದ್ಯಾರ್ಥಿಗಳ ಆಳಕ್ಕೀಳಿದು ಪಾಠಮಾಡಬಹುದು.’ ಎಂದು ಹೇಳಿದರು.
ಪ್ರಾಧ್ಯಾಪಕರಾದ ಡಾ.ಶ್ರೀಕಾಂತ ರಾಠೋಡ, ಡಾ.ಜಯಪ್ರಸಾದ ಡಿ, ಮಲ್ಲಿಕಾರ್ಜುನ ಕೋಣದೆ ಮಾತನಾಡಿದರು.
ಡಾ.ಪಿ.ಕೆ.ರಾಠೋಡ, ಡಾ.ಸುರೇಂದ್ರ ಕೆ, ಶೃತಿ ಪಾಟೀಲ, ಬಲರಾಮ ವಡ್ಡರ, ಶ್ವೇತಾ ಕಾಂತ, ಪಂಕಜ ಕುಲಕರ್ಣಿ, ಶೃತಿ ಬಿರಾದಾರ, ಪರಶುರಾಮ ಅಜಮನಿ ಮತ್ತಿತರಿದ್ದರು.