ವಿಶ್ವ ಪಾರಂಪರಿಕಾ ದಿನ: ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರಾದ ಹಕ್ಕಬುಕ್ಕರು ಭಾರತ ದೇಶದ ಆಸ್ತಿ

ಚಿತ್ರದುರ್ಗ: ಏ.19 : ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರಾದ “ಹಕ್ಕಬುಕ್ಕರು” ಈ ರಾಷ್ಟçದ ಮಹಾ ಆಸ್ತಿ, ಅವರ ಕಾಲದ ಚರಿತ್ರೆಯನ್ನು ಪ್ರತಿಯೊಬ್ಬರೂ ಓದಿ ತಿಳಿಯಬೇಕಿದೆ. ಏಕೆಂದರೆ ಸುವರ್ಣಯುಗದ ಇತಿಹಾಸವನ್ನು, ದಾಖಲೆಗಳನ್ನು ತಿರುಚುವ ಪ್ರಯತ್ನಗಳು ಇತ್ತೀಚೆಗೆ ಹೆಚ್ಚು ನಡೆಯುತ್ತಿದ್ದು ಇದು ಪರಂಪರೆಗೆ ಮಾಡುವ ಮೋಸ ಎಂದು ವಿಶ್ವ ಹಾಲುಮತ ಹಕ್ಕಬುಕ್ಕ ಯುವ ಒಕ್ಕೂಟದ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಕೆಂಚಪ್ಪ ಎಸ್ ಹುಲಿಯಾನ್ ಹೇಳಿದರು. ಅವರು ಚಿತ್ರದುರ್ಗದ ಕನಕ ಗುರುಪೀಠದ ಶಾಖಾಮಠದಲ್ಲಿ ವಿಶ್ವ ಪಾರಂಪರಿಕಾ ದಿನದ ಅಂಗವಾಗಿ ಜಿಲ್ಲಾ ಕುರುಬರ ಸಂಘ, ಹಾಲುಮತ ಮಹಾಸಭಾ, ಕನಕ ನೌಕರರ ಸಂಘ, ವಿಶ್ವ ಹಾಲುಮತ ಹಕ್ಕಬುಕ್ಕ ಯುವ ಒಕ್ಕೂಟದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ, ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆ ಹಾಗೂ ಕುರುಬ ಜಯಂತಿ ಉದ್ಘಾಟಿಸಿ ಮಾತನಾಡಿದರು.14 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವನ್ನು “ಹಕ್ಕಬುಕ್ಕರು” ಸ್ಥಾಪಿಸಿದರು. ಈ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಕುರುಬರು ಎನ್ನುವ ಬಗ್ಗೆ ಎಲ್ಲಾ ಇತಿಹಾಸ ತಜ್ಞರು, ಏಕಕಂಠದಲ್ಲಿ ಸಾರಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸುಮಾರು 55 ಕ್ಕೂ ಹೆಚ್ಚು ದಾಖಲೆಗಳು ಕುರುಬ ಕುಲಸಂಜಾತರೆAದು ಸಾಕ್ಷಿ ಹೇಳುತ್ತವೆ ಆದರೆ ಇಂದು ರಾಜ್ಯದಲ್ಲಿ ಇತಿಹಾಸವನ್ನು ತಿರುಚುವವರು ಹೆಚ್ಚಾಗಿದ್ದಾರೆ ಇದು ಅಪಾಯಕಾರಿ ಎಂದರು.ವಿಜಯನಗರ ಸಾಮ್ರಾಜ್ಯದ ಬಗ್ಗೆ ಗೊತ್ತಿಲ್ಲದೆ ಮಾತನಾಡುವವರು ಬೇಕಾದರೆ. ಚಿಂತಕ ಚಂದ್ರಕಾAತ್ ಬಿಜ್ಜರಗಿ ಅವರ “ಕುರುಬರು ಆಳಿದ ವಿಜಯನಗರ ಸಾಮ್ರಾಜ್ಯ” ಎಂಬ ಕೃತಿ ಓದಲಿ. ವಿದೇಶಿ ತಜ್ಞರ ಹೇಳಿಕೆಗಳು, ಗೆಜೆಟ್ಟಿಯರ್ ಗಳು, ಕೈಪಿಯತ್ತುಗಳು, ಗದ್ಯಕೃತಿಗಳು, ಕಾವ್ಯಗಳು, ಶಾಸನಗಳು ಸರ್ವಜ್ಞನ ತ್ರಿಪದಿ, ಜನಪದ ಹಾಡು-ಕಥೆ-ವಾಡಿಕೆಗಳು ಇವುಗಳಲ್ಲಿ ಸಹ ಕುರುಬರು ಎಂದಿದೆ. ಡಾ.ಲಿಂಗದಳ್ಳಿ ಹಾಲಪ್ಪನವರ “ಕರ್ನಾಟಕ ಸಾಮ್ರಾಜ್ಯ ವಿಜಯನಗರ” ಕೃತಿಯಲ್ಲಿ ಕುರುಬರು ಎಂದಿದೆ ರಾಬರ್ಟ್ ಸಿವೆಲ್, ಹೆಚ್.ವಿಲ್ಸನ್ ಮಿ.ಕೌಟೋ. ಮುಂತಾದ ಹತ್ತು ವಿದೇಶಿ ವಿದ್ವಾಂಸ ಮಹನೀಯರು, ಇತಿಹಾಸ ತಜ್ಞರು ಹಕ್ಕಬುಕ್ಕರನ್ನು ಕುರುಬರೆಂದು ಹೇಳಿರುತ್ತಾರೆ ಎಂದರು.ಉಪನ್ಯಾಸಕರಾದ ಡಾ.ಎಸ್.ಆರ್. ಲೇಪಾಕ್ಷ ಮಾತನಾಡಿ. ನಾಡಿನಲ್ಲಿ ಕುರುಬರ ಜಯಂತಿ ತುಂಬಾ ಅರ್ಥಪೂರ್ಣವಾಗಿ ನಡೆಯುತ್ತಿವೆ. ನಮ್ಮ ಸಂಸ್ಕೃತಿ ಇತಿಹಾಸ ಪರಂಪರೆಯನ್ನು ನಾವು ಮುಂದಿನ ಪೀಳಿಗೆಗೆ ಹೇಳಬೇಕಿದೆ. ಭಾರತದ ಮತ್ತು ಕರ್ನಾಟಕದ ಇತಿಹಾಸಕಾರರು ಹಕ್ಕಬುಕ್ಕರನ್ನು ಕನ್ನಡಿಗರು ಮತ್ತು ಕುರುಬರು ಎಂದು ಏಕಕಂಠದಿAದ ಘೋಷಿಸಿದ್ದಾರೆ. ಆದ ಕಾರಣ ಹಕ್ಕಬುಕ್ಕರ ಸವಿನೆನಪಿನಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಏಪ್ರೀಲ್ 18 ರಂದು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆ ದಿನವನ್ನು ಎರಡು ದಶಕಗಳಿಂದ ಆಚರಿಸಿಕೊಂಡು ಬರುತ್ತಿದೆ ಎಂದರು.ಸಮಾರAಭದ ಅಧ್ಯಕ್ಷತೆವಹಿಸಿದ್ದ ಚಿತ್ರದುರ್ಗ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಶ್ರೀರಾಮ್ ಮಾತನಾಡಿ ಹಕ್ಕಬುಕ್ಕರ ಸಾಮ್ರಾಜ್ಯ ಸ್ಥಾಪನೆ ವೇಳೆ ವಿದ್ಯಾರಣ್ಯ ಗುರುಗಳ ಕೃಪೆ ಇದೆ. ಹಾಗೆಯೆ ನಮಗೆ ನಮ್ಮ ಕನಕ ಮಠದ ಕೃಪೆ ಇದೆ. ಕುರುಬರಾದ ನಾವು ಮುಂದೆ ಹಕ್ಕಬುಕ್ಕರ ಹೆಸರಿನಲ್ಲಿ ವಿವಿಧ ಕಾರ್ಯಕ್ರಮ ಮಾಡುತ್ತೇವೆ. ಮತ್ತು ಸಮಾಜಕ್ಕಾಗಿ ಜೀವಕೊಡಲು ಸಿದ್ಧ, ನಮ್ಮ ಸಮಾಜದ ಯುದ್ಧಮಾಡಿ ಅನೇಕಭಾಗಗಳಲ್ಲಿ ರಾಜರಾಗಿ ಆಳ್ವಿಕೆ ಮಾಡಿದ್ದು ಕುರುಬ ಸಮಾಜದ ಕೊಡುಗೆ ಅಪಾರವಾಗಿದೆ ಎಂದರು.  ಬುಡಕಟ್ಟು ಸಂಸ್ಕೃತಿ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಸಂಚಾಲಕ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಮಾಲತೇಶ್ ಅರಸ್ ಹರ್ತಿಕೋಟೆ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಹಕ್ಕಬುಕ್ಕರು ಕನ್ನಡ ಭಾಷೆಯ ಮಾತನಾಡುವ ಮೊದಲ ರಾಜರಾಗಿದ್ದರು. ಅವರ ಕಾಲದಲ್ಲಿ ಸಾಹಿತ್ಯ, ಗ್ರಂಥಮಾಲಿಕೆ ಅತ್ಯುತ್ತಮವಾಗಿದ್ದವು, ಅಂದು ರಾಜರ ಆಸ್ಥಾನದಲ್ಲಿ ಕವಿಗಳನ್ನು ವಿದ್ವಾಂಸರನ್ನು, ಚಿಂತಕರನ್ನು, ಸಾಹಿತ್ಯ ಪಂಡಿತರೂ ನೆಲೆಸಿದ್ದರು. ಆದರೆ ಇಂದಿನ ಸರ್ಕಾರಗಳು ಸಾಹಿತ್ಯ ಕ್ಷೇತ್ರವನ್ನು ಹೆಚ್ಚು ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದರು.ಮಾಜಿ ನಗರಸಭೆ ಅಧ್ಯಕ್ಷ ಹೆಚ್. ಮಂಜಪ್ಪ, ಕನಕ ನೌಕರರ ಸಂಘದ ಅಧ್ಯಕ್ಷ ಕೆಂಚಪ್ಪ, ಹಾಲುಮತ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಮ್ಮೆಹಟ್ಟಿ ಹನುಮಂತಪ್ಪ, ಮಹಿಳಾ ಕುರುಬರ ಸಂಘದ ಅಧ್ಯಕ್ಷೆ ಹಾಗೂ ನಗರಸಭಾ ಸದಸ್ಯೆ ಪಿ.ಕೆ,ಮೀನಾಕ್ಷಿ ಮಾತನಾಡಿದರು.ಸಮಾರಂಭದಲ್ಲಿ ಎಂ.ವಿ ಮಾಳೇಶ್, ಮುತ್ತುರಾಜ್, ಕನಕ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಸರ್ವೇ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ನಿರ್ದೇಶಕ ಗುರುನಾಥ್, ಕಲ್ಲೇಶ್ ಡಿ ಮೌರ್ಯ ಇತರರಿದ್ದರು. ಇದೇ ಸಂದರ್ಭದಲ್ಲಿ ಎಮ್ಮೆಹಟ್ಟಿ ಹನುಮಂತಪ್ಪ ಅವರ ಸಂಪಾದಕತ್ವದ ಕನಕವಾಣಿ ಮಾಸಿಕ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಕಲಾವಿದ ಪ್ರಧಾನ್ ಪ್ರಾರ್ಥಿಸಿದರು. ಹನುಮಂತಪ್ಪ ಸ್ವಾಗತಿಸಿದರು. ನಿರೂಪಿಸಿ ರಾಘವೇಂದ್ರ ವಂದಿಸಿದರು.