ವಿಶ್ವ ಪರಿಸರ ಸಂರಕ್ಷಣೆ ದಿನ ಆಚರಣೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ. ಜು,29- ನಗರದ ಸರ್ಕಾರಿ ಉದ್ರ್ದು ಪ್ರೌಢಶಾಲಾ ಆವರಣದಲ್ಲಿ ವಿಶ್ವ ಪರಿಸರ ಸಂರಕ್ಷಣೆ ದಿನ ಅಂಗವಾಗಿ ನೈಸರ್ಗಿಕ ಪರಿಸರ ಸಂರಕ್ಷಣೆ ಸೇವಾ ಟ್ರಸ್ಟ್ ವತಿಯಿಂದ ಸಸಿಗಳನ್ನು ನೆಡುವ ಮೂಲಕ ಆಚರಿಸಿದರು.
ಅಧ್ಯಕ್ಷ ಸಿರಿಗೇರಿ ಮಂಜು ಮಾತನಾಡಿ ಪ್ರತಿಯೊಂದು ದಿನಾಚರಣೆ ಹಾಗೂ ವಿವಿಧ ಹಬ್ಬಗಳ ನೆನಪಿಗಾಗಿ ಕೇವಲ ಒಂದೇ ಒಂದು ಸಸಿಯನ್ನು ನೆಡುವು ಮೂಲಕ ಪರಿಸರದೊಳಗೆ ಮನೆಯಂತೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ, ಕಾಡು ಬೆಳಸಿ ನಾಡು ಉಳಿಸಿ ಎಂದು ತಿಳಿಸಿದರು.
ಬಿಜೆಪಿ ಎಸ್.ಸಿ.ಮೋರ್ಚದ ಜಿಲ್ಲಾಧ್ಯಕ್ಷ ಮೇಕೆಲಿ ವೀರೇಶ, ಬಿಜೆಪಿ ಮುಖಂಡ ಸಫೀ, ಬಿ.ಆರ್.ಸಿ. ಕೆ.ಗಜೇಂದ್ರ, ಸಿ.ಆರ್.ಪಿ. ಮಾರಿತಿ, ವಾರ್ಡನ ಬಾಳಪ್ಪ, ಮುಖ್ಯಗುರು ಶಹರ್ ಬೇಗಂ, ಟ್ರಸ್ಟ್‍ನ ಉಪಾಧ್ಯಕ್ಷ ರವಿಕುಮಾರ ಹಾಗೂ ವಿದ್ಯಾರ್ಥಿಗಳು ಇದ್ದರು.