ವಿಶ್ವ ಪರಿಸರ ದಿನ: ಸಸಿ ನೆಡುವ ಕಾರ್ಯಕ್ರಮ

ಕಲಬುರಗಿ,ಜೂ.7-ವಿಶ್ವ ಪರಿಸರ ದಿಚಾರಣೆಯ ದಿನದ ಪ್ರಯುಕ್ತ ರಕ್ಷೀತಾ ಇಂಟಿಗ್ರೇಟೆಡ್ ರೂರಲ್ ಮತ್ತು ಅರ್ಬನ್ ಡೆವಲಪ್ ಮೆಂಟ್ ಸೊಸೈಟಿ ವತಿಯಿಂದ ಜೂ.5 ರಿಂದ 30ರವರೆಗೆ ಸಸಿ ನೆಡುವ ಕಾರ್ಯಕ್ರಮ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳಲಾಗಿದೆ.
ವಲಯ ಅರಣ್ಯ ಅಧಿಕಾರಿಗಳು ಅರಣ್ಯ ಇಲಾಖೆ ಮತ್ತು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಸಹಯೊಗದೊಂದಿದೆ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಗಳು, ಕಾಲೇಜುಗಳು ಎಲ್ಲಾ ರಸ್ತೆ ಬದಿಗಳಲ್ಲಿ ,ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 1000 ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದರ ಸಂರಕ್ಷಣೆ ಮತ್ತು ಮಳೆ ನೀರಿನ ಪ್ರಮಾಣ ಕಡಿಮೆ ಇದ್ದಾಗ ಗ್ರಾಮ ಪಂಚಾಯತಿ ವತಿಯಿಂದ ವಾರಕ್ಕೆ ಎರಡು ಬಾರಿ ಟ್ಯಾಂಕರ್ ಮುಖಾಂತರ ನೀರು ಹಾಕಿಸಿ ಗಿಡ ಬೆಳೆಸಿ ಸಂರಕ್ಷಿಸಲು ವಿನೂತನ ಕಾರ್ಯಕ್ರಮ ಹಮ್ಮಿಕೊಳಲು ಮನವಿ ಮಾಡಲಾಗಿದೆ.
ಇದರಿಂದ ಸುಮಾರು ಅಂದಾಜು 270000 ಎರಡು ಲಕ್ಷ ಎಪ್ಪತ್ತು ಗಿಡನೆಡಲು ಅನುಕುಲವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲಿ ಒಂದೊಂದು ಗಿಡನೆಡುವುದರ ಮೂಲಕ ಪರಿಸರ ಬೆಳೆಸಿ ಉಳಿಸಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಕಾಳಗಿ ತಾಲೂಕಿನ ಚಿಂಚೋಳಿ (ಹೆಚ್) ಹಾಗೂ ಬಣಬಿ ಗ್ರಾಮದಲ್ಲಿ ಜೂ.5 ರಂದು ಸಸಿಗಳನ್ನು ನೆಡಲಾಯಿತು. ತಾಲ್ಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯತ ಅಧ್ಯಕ್ಷರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು,ರಕ್ಷೀತಾ ಇಂಟಿಗ್ರೆಟೆಡ್ ರೂರಲ್ & ಅರಬನ್ ಡೆವಲೊಪಮೆಂಟ ಸೊಸೈಟಿ ಕಲಬುರಗಿ ಸಂಸ್ಥೆಯ ಪ್ರತಿನಿದಿಗಳು, ಮುಂತಾದವರು ಭಾಗವಹಿಸಿದ್ದರು.