ವಿಶ್ವ ಪರಿಸರ ದಿನ ರೈತರಿಗೆ ಸಸಿ ವಿತರಣೆ

ಇಂಡಿ :ಜೂ.8: ಪ್ರಪಂಚದ್ಯಾಂತ ಜಾಗ್ರತಿ ಅಭಿಯಾನವನ್ನು ಆಯೋಜಿಸಲಾಗುತ್ತದೆ. ಇದರಿಂದಾಗಿ ಮಾನವರು ಮತ್ತು ಪ್ರಾಣಿಗಳು ಶುದ್ದ ಪರಿಸರದಲ್ಲಿ ಮುಕ್ತವಾಗಿ ಉಸಿರಾಟ ಮಾಡುತ್ತಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀ ಲಕ್ಷ್ಮೇಶ ಶೇಷಾದ್ರಿ ಹೇಳಿದರು. ಆಯ್ ಸಿ ಎ ಆರ್ ಕೃಷಿ ವಿಜ್ಞಾನ ಕೇಂದ್ರ ಇಂಡಿ ಅವರು ಆಯೋಜಿಸಿದ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನಡುವುದು ಮತ್ತು ರೈತರಿಗೆ ಸಸಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಾ|| ಶಿವಶಂಕರಮೂರ್ತಿ ಎಮ್ ಹಿರಿಯ ವಿಜ್ಞಾನಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು 2023ವರ್ಷದಲ್ಲಿ ಪ್ಲಾಸ್ಟಿಕ್ ಮಾಲಿನ್ಯವನ್ನು ಸೋಲಿಸೋಣ ಎಂಬ ದ್ಯೆಹವಾಕ್ಯದೋಂದಿಗೆ ಕೊತ್‍ದ್ ಇವಾರ (ಪಚ್ಚಿಮ ಆಪ್ರಿಕಾದ ದೇಶದಲ್ಲಿ) ಆಚರಿಸಲಾಗುತ್ತದೆ. ಹೆಚ್ಚು ಹೆಚ್ಚು ಮರಗಳನ್ನು ನೆಟ್ಟು ಪರಿಸರವನ್ನು ಉಳಿಸಿ ಭವಿಷದಲ್ಲಿ ಉತ್ತಮ ಜೀವನಕ್ಕಾಗಿ ಈ ದಿನ ಪರಿಸರ ಉಳಿಸಿ ಎಂದು ಅವರು ಹೇಳಿದು. ಡಾ|| ಸವಿತಾ ಬಿ ಮಣ್ಣು ಪರಿಕ್ಷಾ ವಿಜ್ಞಾನಿ ಮಾತನಾಡಿ ಪ್ಲಾಸ್ಟಿಕ ಲೊಟಾಗಳು, ಪ್ಲಾಸ್ಟಿಕ್ ಬಾಟಲ್ಗಳು, ಬಳಕೆಯನ್ನು ತಪ್ಪಿಸಿ ಮಣ್ಣಿನ, ಮತ್ತು ಬಾಳೆ, ತೆಂಗಿನ ಎಲೆಗಳ ಲೊಟಾಗಳು, ಮತ್ತು ಬಾಟಲ್ಗಳು, ಪ್ಲೆಟಗಳು ಬಳಸಬೇಕು. ಪರಿಸರ ಸಂರಕ್ಷಣೆಗೆ ಎಲ್ಲರ ಸಾಮೋಹಿಕ ಜವಾಬ್ದಾರಿ ಮಾತ್ರ ವಲ್ಲದೆ ಪ್ರತಿಯೋಬ್ಬರ ಹೋಣೆಗಾರಿಕೆಯು ಆಗಿದೆ ಎಂದು ಅವರು ಹೇಳಿದರು. ಈ ಸಂರ್ಭದಲ್ಲಿ ಡಾ|| ಸಂತೋಷ ಸಿಂಧೆ, ಪಶು ವಿಜ್ಞಾನಿ, ಮತ್ತು ಡಾ|| ವೀಣಾ ಚಾಂದವರಿ ಗೃಹ ವಿಜ್ಞಾನಿಗಳು ಉಪಸ್ಥೀತರಿದ್ದರು.