ವಿಶ್ವ ಪರಿಸರ ದಿನಾಚರಣೆ

ಕೊಟ್ಟೂರು ಜೂ 5:, ಪಟ್ಟಣದ ಎಲ್.ಬಿ.ಬಡವಾಣೆಯಲ್ಲಿವಿಶ್ವಪರಿಸರ ದಿನಾಚರಣೆ ಅಂಗವಾಗಿ ತಹಶೀಲ್ದಾರ್ ಜಿ ಅನಿಲ್ ಕುಮಾರ್,ಎಲ್ ಐಸಿ ಅಭಿವೃದ್ಧಿ ಅಧಿಕಾರಿ ಎಂಎಸ್ ಶಿವನಗುತ್ತಿ, ಪ್ರಾಚಾರ್ಯ ಎಂಎಸ್ ನಿರ್ಮಲಾ ಶಿವನಗುತ್ತಿ ಸಸಿಹಾಕುವ ಮೂಲಕ ಆಚರಣೆ ಮಾಡಲಾಯಿತು.
ತಹಶೀಲ್ದಾರ್ ಜಿ ಅನಿಲ್ ಕುಮಾರ್ ಮಾತನಾಡಿ “ವೃಕ್ಷೋ ರಕ್ಷತಿ ರಕ್ಷಿತಃ” ಇಂದು ಮರಗಳನ್ನು ಹೆಚ್ಚಾಗಿ ಪೀಠೋಪಕರಣಗಳಿಗಾಗಿ ಕಡಿಯುತ್ತಿದ್ದು, ಮರಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿದೆ. ಇದರಿಂದ ಶುದ್ಧಗಾಳಿಯೂ ದೊರೆಯುವುದು ಕೂಡ ಕಷ್ಟವಾಗುವ ಪರಿಸ್ಥಿತಿ ಎದುರಾಗಿದ್ದು, ಇನ್ನೂ ಮಳೆಬೆಳೆಯೂ ಕಡಿಮೆ ಆಗಿರುವುದನ್ನು ಗಮನಿಸಬಹುದು. ಇದಕ್ಕೆ ಮೂಲ ಕಾರಣ ಪರಿಸರ ಸಂರಕ್ಷಣೆಯನ್ನು ಮಾಡದಿರುವುದು ಹಾಗೂ ಪರಿಸರ ಸಂರಕ್ಷಣೆಯ ಮುಖೇನ ಗಿಡಗಳನ್ನು ಬೆಳೆಸಲು ಮುಂದಾಗಬೇಕು ಎಂದರು.ಈ ಸಂದರ್ಭದಲ್ಲಿ ಬಿಎಸ್ ವಿರೇಶಪರಸಪ್ಫ ,ಬಂಜಾರನಾಗರಾಜಸೇರಿದಂತೆ ಅನೇಕ ರಿದ್ದರು