ವಿಶ್ವ ಪರಿಸರ ದಿನಾಚರಣೆ

ಧಾರವಾಡ,ಜೂ7: ಉಚ್ಛ ನ್ಯಾಯಾಲಯದ ಕಾನೂನು ಸೇವಾ ಸಮಿತಿ, ಉಚ್ಚನ್ಯಾಯಾಲಯದ ವಕೀಲರ ಸಂಘ, ಅರಣ್ಯ ಇಲಾಖೆ. ಮತ್ತು ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ,ಧಾರವಾಡ ಪೀಠದ ಆವರಣದಲ್ಲಿ ವಿವಿಧ ತರಹದ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿ ಎಸ್. ಜಿ. ಪಂಡಿತ ಅವರು ಸಸಿಗಳನ್ನು ನೆಡುವುದರ ಮೂಲಕ ಚಾಲನೆಯನ್ನು ನೀಡಿದರು. ಅವರೊಂದಿಗೆ ಸನ್ಮಾನ್ಯ ಸಹನ್ಯಾಯಮೂರ್ತಿಗಳು ಹಾಗೂ ವಕೀಲರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು, ಅಡಿಷನಲ್ ಅಡ್ವಕೆಟ್ ಜನರಲ್, ಅಡಿಷನಲ್ ಸಾಲಿಟರ್ ಜನರಲ್, ಅರಣ್ಯ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿ ವಿವಿಧ ಪ್ರಭೇದದ ಸುಮಾರು 100 ಸಸಿಗಳನ್ನು ಉಚ್ಚನ್ಯಾಯಾಲಯದ ಆವರಣದಲ್ಲಿ ನೆಟ್ಟರು.