ವಿಶ್ವ ಪರಿಸರ ದಿನಾಚರಣೆ

ರಾಯಚೂರು.ಜೂ.೦೭- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಯಚೂರು ವತಿಯಿಂದ ಪರಿಸರ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅ.ಭಾ.ವಿ.ಪ ರಾಜ್ಯ ಉಪಾಧ್ಯಕ್ಷರಾದ ನಿಜನಂದ ರೆಡ್ಡಿ, ಅ.ಭಾ.ವಿ.ಪ ರಾಯಚೂರು ನಗರ ಉಪಾಧ್ಯಕ್ಷರಾದ ನರಸಿಂಹ ಮೂರ್ತಿ, ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಜಿ, ರಾಜ್ಯ ಕಾರ್ಯನಿರ್ವಾಹಕ ಸದಸ್ಯರಾದ ಭಾರತ ಕುಮಾರ್, ರಾಯಚೂರು ತಾಲೂಕ ಸಂಚಾಲಕರಾದ ಬಸವ ಪ್ರಭು ಬಿ, ರಾಯಚೂರು ನಗರ ಕಾರ್ಯದರ್ಶಿ ಪ್ರಮಿತಾ ಬಿ, ಹಾಗೂ ವಿಜಯ್, ಹೇಮಂತ್, ವೈಷ್ಣವಿ ಉಪಸ್ಥಿತರಿದ್ದರು.