ವಿಶ್ವ ಪರಿಸರ ದಿನಾಚರಣೆ

ಕಲಬುರಗಿ,ಜೂ.5-ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆವರಣದಲ್ಲಿ ಸಸಿ ನಡೆವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ ಅವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಪರಿಸರ ರಕ್ಷಣೆಗಾಗಿ ಸಸಿಗಳನ್ನು ನೆಡಲು ಸೂಚಿಸಿದರು. ಇದರಿಂದ ವಾತವರಣದಲ್ಲಿ ಆಮ್ಲಜನಕ ಹೆಚ್ಚಳವಾಗುವುದರ ಜೊತೆಗೆ ಮನುಷ್ಯನ ಆರೋಗ್ಯ ಸುಧಾರಿಸುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಭಾಗೀಯ ಎನ್.ಪಿ.ಸಿ.ಸಿ.ಹೆಚ್.ಹೆಚ್. ನೋಡಲ್ ಅಧಿಕಾರಿ ಡಾ: ಬಸವರಾಜ ಗುಳಗಿ, ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ ಅಧಿಕಾರಿಗಳಾದ ಡಾ: ವಿವೇಕಾನಂದ ರೆಡ್ಡಿ, ಡಾ: ವಿನೋದ, ಆರೋಗ್ಯ ಇಲಾಖೇಯ ನೌಕರ ಸಂಘದ ಅಧ್ಯಕ್ಷ ಚಂದ್ರಕಾಂತ ಏರಿ, ಪ್ರಯೋಗಶಾಲಾ ತಂತ್ರಜ್ನ ಅಧಿಕಾರಿಗಳ ಸಂಘದ ಅಧ್ಯಕ್ಷ ಶರಣಬಸಪ್ಪ ಅರಳಿಮಾರ, ಡಿ. ಹೇಚ್.ಓ. ಕಚೇರಿಯ ಸಹಾಯಕ ಆಡಳಿತ ಅಧಿಕಾರಿ ಪಿ.ಪಿ ನಾಯಕ, ಕಛೇರಿ ಅಧೀಕ್ಷಕರುಗಳಾದ ಮಹೇಶಸಿಂಗ ಠಾಕೂರ, ಸಂಗೀತಾ ಸಾವಳಗಿ, ವಿಭಾಗೀಯ ಕೀಟಶಾಸ್ತ್ರಜ್ಞೆ ಗಂಗೋತ್ರಿ, ಆರೋಗ್ಯ ಮೇಲ್ವಿಚಾರಕ ಅಧಿಕಾರಿಗಳಾದ ಗಣೇಶ ಚಿನ್ನಾಕಾರ, ಕರ್ಣಕ ಕೋರೆ, ಶರಣಬಸಪ್ಪ ಬಿರಾದರ, ಕಾಶೀನಾಥ, ಮಲ್ಲಿಕಾರ್ಜುನ ನಡಗಟ್ಟಿ, ಸಂತೋಷ ಮುಳಜೆ, ನಂದಕಿಶೋರ, ಸವಿತಾಕುಮಾರಿ, ಜಗದೇವಿ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.