ವಿಶ್ವ ಪರಿಸರ ದಿನಾಚರಣೆಯಂದು ಸ್ವಚ್ಚತಾ ಕಾರ್ಯಕ್ರಮ

ಸಂಜೆವಾಣಿ ವಾರ್ತೆ

ದಾವಣಗೆರೆ. ಜೂ.೬; ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ  ಮತ್ತು ಹಿಮಾಲಯನ್ ಅಡ್ವೆಂಚರ್  ಅಂಡ್ ನೇಚರ್ ಅಕಾಡಮಿ.ದಾವಣಗೆರೆ ತಿಮ್ಮೋಜಿ ಆರ್ಕಿಟೆಕ್ಸ್ ಚನ್ನಗಿರಿ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಶ್ರೀಗಿರಿ ರಂಗನಾಥ ಸ್ವಾಮಿ ಬೆಟ್ಟ ದಾನವಾಡಿಯಲ್ಲಿ  ಜಿಲ್ಲಾ ಮುಖ್ಯ ಆಯುಕ್ತರಾದ ಮುರುಘರಾಜೇಂದ್ರ ಜೇ  ಚಿಗಟೇರಿ  ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚನ್ನಗಿರಿ ಬಿಇಒ ಜಯಪ್ಪ ಎಲ್ ಮಾತನಾಡಿ ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿ ಗಳು ಉತ್ತಮವಾದ ಸೇವೆಯನ್ನು ಮಾಡುತ್ತಿದ್ದೀರಾ ಇಂತಹ ಒಳ್ಳೆ ಕೆಲಸಕ್ಕೆ ನಮ್ಮ ಸಹಕಾರ ಇದೆ ಎಂದು ಹರ್ಷ ವ್ಯಕ್ತ ಪಡಿಸಿದರು.ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮಹೇಶ್ ಎಚ್ ದೊಡ್ಡಮನಿ  ರೋವರ್ಸ್ ಮತ್ತು ರೆಂಜರ್ಸ್ ವಿದ್ಯಾರ್ಥಿಗಳು ಇಂತಹ ಕಾಡಿನಲ್ಲಿ ಬಂದು ಸ್ವಚ್ಛತೆ ಮಾಡುತ್ತಿರುವುದು ನಿಸ್ವಾರ್ಥ ಸೇವೆ ಈ ನಿಮ್ಮ ಸೇವೆ ಹೀಗೆ ಮುಂದುವರೆಯಲಿ ಎಂದು ಅಭಿನಂದಿಸಿದರು.  ಪರಿಸರ ಪ್ರಜ್ಞೆ ಎಲ್ಲಾ ಸಾರ್ವಜನಿಕರಲ್ಲಿ ಬರಬೇಕು ಸುಂದರವಾದ ಪ್ರಕೃತಿಯಲ್ಲಿ ಬಂದು ಕುಡಿದು. ತಿಂದು ತಾವು ತಂದತಹ ಪ್ಲಾಸ್ಟಿಕ್ ಲೋಟ,ಬಾಟಲಿ.  ಪ್ಲೇಟ್ಸ್ ಗಳನ್ನು ಎಸೆದು ಹೋಗುತ್ತಾರೆ. ತಂದ ವಸ್ತುಗಳನ್ನೆಲ್ಲ ವಾಪಸು ತೆಗೆದು ಕೊಂಡು ಹೋಗಿ ಕಸದ ಬುಟ್ಟೆಗೆ  ಹಾಕಿದರೆ ಪರಿಸರವನ್ನು ಸ್ವಚವಾಗಿಡಬಹುದು ಎಂದು  ಹಿಮಾಯನ್ ಅಡ್ವೆಂಚರ್ ಅಂಡ್ ನೇಚರ್  ಅಕಾಡೆಮಿಯ  ಪ್ರದಾನ ಕಾರ್ಯದರ್ಶಿ ಎನ್. ಕೆ. ಕೊಟ್ರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೀಪಕ್ ತೀಮೋಜಿ ರವರು ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಿಸಿದರು. ಸ್ಥಳೀಯ ಪೂಜಾರಿಗಳು ಇದೇ ಮೊದಲ ಬಾರಿಗೆ  ಸ್ವಚ್ಛತಾ ಕಾರ್ಯಕ್ರಮವು ಮಾಡಿರುವುದು ಎಂದು ಹರ್ಷವನ್ನು ವ್ಯಕ್ತಪಡಿಸಿದರು. ದಾವಣಗೆರೆ ಜಿಲ್ಲಾ ಪಂಚಾಯತ್ ಪ್ರೋಗ್ರಾಮ್ ಆಫೀಸರ್ ಪೂರ್ಣಿಮಾ   ಸ್ಥಳಕ್ಕೆ ಭೇಟಿ ನೀಡಿ ಅಭಿನಂದಿಸಿದರು.ಬಿಆರ್ ಸಿ ಶಂಕರಪ್ಪ ಮತ್ತು ಸಿಆರ್ ಪಿ  ನಾಗರಾಜ್ ರೋವರ್ಸ್ ರೇಂಜರ್ಸ್ ಸೇವೆಯ ಬಗ್ಗೆ ಸಂತಸ ವ್ಯಕ್ತ ಪಡಿಸಿದರು, ಎಂ ರತ್ನ ಜಿಲ್ಲಾ ಕಾರ್ಯದರ್ಶಿ ಮತ್ತು  ಸುಖವಾನಿ ಜಿಲ್ಲಾ ಸಹ ಕಾರ್ಯದರ್ಶಿ ಡಾ, ಶಕುಂತಲಾ ರೇಂಜರ್ ಲೀಡರ್ ಮತ್ತು ಅಮೂಲ್ಯ ರೇಂಜರ್ ಲೀಡರ್ ರವರು ಮತ್ತು ಡಿಬಿ ಶಶಿಕುಮಾರ್  .ಎಸ್. ಜಿ. ವಿ ಅಶ್ವಿನಿ. ಮತ್ತು  ಚನ್ನಬಸಪ್ಪ, ಸ್ವಾಮಿ ಡಿ ಬಿ. ಕೃಷ್ಣಮೂರ್ತಿ. ಎನ್. ನವೀನ್. ಕಶಾಪ್. ಸರವನ್ ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.