ವಿಶ್ವ ಪರಿಸರ ದಿನಾಚರಣೆ:ಪೂರ್ಣಿಮಾ ಶಿಕ್ಷಣ ಸಂಸ್ಥೆ ಆಚರಣೆ

ರಾಯಚೂರು.ಜು.೦೫.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಪೂರ್ಣಿಮಾ ಶಿಕ್ಷಣ ಸಂಸ್ಥೆಯಲ್ಲಿ ಉಪಾಧ್ಯಕ್ಷೆ ರೇಖಾ ಕೇಶವರೆಡ್ಡಿ ಅವರು ಸಸಿಗಳನ್ನು ನೇಡುವುದರ ಮೂಲಕ ದಿನಾಚರಣೆಯನ್ನು ಆಚರಿಸಿದರು.
ಅವರಿಂದು ನಗರದ ಪೂರ್ಣಿಮಾ ಶಿಕ್ಷಣ ಸಂಸ್ಥೆಯಲ್ಲಿ ಸಸಿ ನೆಟ್ಟು ವಿಶ್ವ ಪರಿಸರ ದಿನಾಚರಣೆಯನ್ನು ಆಚರಣೆ ಮಾಡಿ ಮಾತನಾಡಿದ ಅವರು ಪ್ರತಿಯೊಬ್ಬ ನಾಗರಿಕರು ಪರಿಸರವನ್ನು ಕಾಪಾಡುವದಷ್ಟೆಲ್ಲದೆ ಮುಂದಿನ ಪೀಳಿಗೆಗೆ ಹಾಗೂ ಮಕ್ಕಳಿಗೆ ಇದರ ಬಗ್ಗೆ ಮಾಹಿತಿ ಕೊಟ್ಟು ಪ್ರತಿಯೊಬ್ಬರು ಸಸಿಯನ್ನು ನೆಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿಖಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.