ವಿಶ್ವ ಪರಿಸರ ದಿನದ ಆಚರಣೆ ತನ್ನ ಮಹತ್ವ ಕಳೆದುಕೊಳ್ಳದಿರಲಿ 

ಸಂಜೆವಾಣಿ ವಾರ್ತೆ

ಹರಪನಹಳ್ಳಿ.ಜೂ.೬; ನಮ್ಮ ಪೃಥ್ವಿ ಜೀವಿಗಳನ್ನು ಹೊಂದಿರುವ ಏಕೈಕ ಗ್ರಹ ಇದು ನಮ್ಮ ವಾಸಸ್ಥಾನ ಭೂಮಿಯಲ್ಲಿನ ಜೀವಿಗಳ ಉಗಮ ವಿಕಾಸ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸುವುದು ಪಂಚಭೂತಗಳಿಂದ ನಿರ್ಮಿತವಾದ ನಮ್ಮ ಪರಿಸರ ಸಂಕ್ಷಿಪ್ತವಾಗಿ ಹೇಳುವುದಾದರೆ ನಮ್ಮ ಸುತ್ತಲಿನ ವಾತಾವರಣವೇ ಪರಿಸರ ಎಂದು ವಕೀಲರ ಸಂಘದ ಅಧ್ಯಕ್ಷ ರಾಮಗೌಡ ಪಾಟೀಲ್ ಹೇಳಿದರು.ಪಟ್ಟಣದ ಕೇತ್ರ ಶಿಕ್ಷಾಣಾಧಿಕಾರಿಯವರ ಕಾರ್ಯಲಯ ಆವರಣದಲ್ಲಿ  ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಹಾಗೂ ಅರಣ್ಯ ಇಲಾಖೆ, ಶಿಕ್ಷಣಾ ಇಲಾಖೆ ಹರಪನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕುರಿತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಸಸಿ ನೇಡುವ ಮೂಲಕ ಪರಿಸ ದಿನಾಚರಣೆಯನ್ನು ಆಚರಿಸಿದ ಬಳಿಕ ಮಾತನಾಡಿದರು. ಸ್ಪರ್ಧಾತ್ಮಕ, ಯಾಂತ್ರಿಕ ಜೀವನದ ಜಂಜಾಟದಲ್ಲಿ ನಾವೆಲ್ಲರೂ ತಲ್ಲಿನರಾಗಿದ್ದೇವೆ, ಅಭಿವೃದ್ಧಿ, ಹಣದ ಬೆನ್ನತ್ತಿ ಓಡುವ ಈ ಓಟದಲ್ಲಿ , ಪ್ರಕೃತಿ, ಪರಿಸರದ ಕುರಿತಾದ ಆಸ್ಥೆ ಮರೆಯಾಗಿದೆ. ಆ ಕಾರಣದಿಂದ ದಿನೇ ದಿನೇ ಪ್ರಕೃತಿ ತನ್ನ ತನವನ್ನು ಕಳೆದುಕೊಳ್ಳುತ್ತಿದೆ ತನ್ನ ಜೀವವೈಧ್ಯತೆಯನ್ನು ತನ್ನ ನೈಸರ್ಗಿಕ ಸೌಂದರ್ಯ ಆತ್ಮಯತೆಯನ್ನು ಕಳೆದುಕೊಳ್ಳುತ್ತಿದೆ ಎಂದರು.ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಕೆ. ಮಲ್ಲಪ್ಪ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಂಜುನಾಥ್ ಗಿರಜ್ಜಿ, ಮಾತನಾಡಿದರು, ಪ್ಯಾನೇಲ್ ವಕೀಲರಾದ ಎಂ.ಮೃತAಜಯ್ಯ, ಜೆ. ಸೀಮಾ, ನಳೀನಾಕುಮಾರಿ, ತಾಲೂಕು ಕಾನೂನು ಸೇವಾ ಸಮಿತಿಯ ಸಿಬ್ಬಂಧಿಗಳಾದ ಕೋಟ್ರೇಶ್, ಬಸವರಾಜ್ ಸೇರಿದಂತೆ ಇತರರು ಇದ್ದರು.