ವಿಶ್ವ ಪರಿಸರ ದಿನದ ಅಂಗವಾಗಿ ಚಿತ್ರಕಲಾ ಸ್ಪರ್ಧೆ

ಕಲಬುರಗಿ :ಜೂ.4:ನಗರದ ಗೋದುತಾಯಿ ಬಡಾವಣೆಯಲ್ಲಿರುವ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಚಿತ್ರಕಲಾ ಸ್ಪರ್ಧೆಯನ್ನು ಶಾಲಾ ಮಕ್ಕಳಿಗೆ ಏರ್ಪಡಿಸಲಾಗಿತ್ತು. 1ನೇ ತರಗತಿಯಿಂದ 9ನೇ ತರಗತಿಯವರೆಗೆ ಎಲ್ಲಾ ಮಕ್ಕಳು ಉತ್ಸುಕತೆಯಿಂದ ಭಾಗವಹಿಸಿದ್ದರು.
ಚಿತ್ರಕಲಾ ಶಿಕ್ಷಕಿ ಕಲ್ಪನಾ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಚಿತ್ರಕಲಾ ಸ್ಪರ್ಧೆ ಜರುಗಿತು. ಅಲ್ಲದೇ ಇನ್ನೀತರ ಶಿಕ್ಷಕಿಯರಾದ ಮನಿಷಾ ಜೋಶಿ, ಶಿಲ್ಪಾ ಉಡಗಿ, ಧನಶ್ರೀ, ಸುಜಾತಾ ನಾಗನಹಳ್ಳಿ, ಮಂಜುಶ್ರೀ ವೀಣಾ ವರಪ್, ಶಾಹಿನ್ ಇವರೆಲ್ಲರೂ ಮಕ್ಕಳಿಗೆ ಶುಭ ಕೋರಿದರು. ಶಾಲೆಯ ಮುಖ್ಯ ಗುರುಗಳಾದ ನಾಗೇಂದ್ರ ಬಡೀಗೆರ್ ವಿಜೇತರಾದ ಹಾಗೂ ಪ್ರಶಸ್ತಿ ಪಡೆದ ಮಕ್ಕಳಿಗೆ ಅಭಿನಂದಿಸಿದರು.