
ಲಕ್ಷ್ಮೇಶ್ವರ,ಮೇ.13: ನರ್ಸಿಂಗ್ ವ್ಯವಸ್ಥೆಯ ಸಂಸ್ಥಾಪಕಿ ಫೆÇ್ಲೀರೆನ್ಸ ನೈಟಿಂಗೇಲ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ವಿಶ್ವ ದಾದಿಯರ ದಿನಾಚರಣೆಯನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೇಕೆ ಕತ್ತರಿಸುವ ಮೂಲಕ ಆಚರಿಸಲಾಯಿತು.
ಬಳಿಕ ಮಾತನಾಡಿದ ನೈಟಿಂಗೇಲ್ ರಾಜ್ಯ ಪ್ರಶಸ್ತಿ ವಿಜೇತ ಶಕುಂತಲಾ ನಾಗರೆಡ್ಡಿ ಅವರು ಮಾತನಾಡಿ ಜಗತ್ತಿನಲ್ಲಿ ಮೊಟ್ಟ ಮೊದಲು ನರ್ಸಿಂಗ್ ವ್ಯವಸ್ಥೆಯನ್ನು ಅನುಕರಣೆಗೆ ತಂದ ನೈಟಿಂಗೇಲ್ ಅವರ ಜನ್ಮದಿನಾಚರಣೆಯ ಅಂಗವಾಗಿ ವಿಶ್ವದಾದ್ಯರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಈ ವೃತ್ತಿ ಅತ್ಯಂತ ಕಳಕಳಿಯ ಸಾಮಾಜಿಕ ವ್ಯವಸ್ಥೆಯ ಬಡವ ಬಲ್ಲಿದ ಎನ್ನದೆ ಎಲ್ಲರನ್ನೂ ಸಮಾನ ದೃಷ್ಟಿಕೋನದಿಂದ ಸೇವೆ ಮಾಡುವ ದಾದಿಯರ ಕೊಡುಗೆ ವೈದ್ಯಕೀಯ ರಂಗಕ್ಕೆ ವಿಶೇಷ ಕೊಡುಗೆಯನ್ನು ನೀಡಿದೆ ಎಂದರು ಪ್ರತಿಯೊಬ್ಬ ದಾದಿಯರು ಸೇವಾ ಮನೋಭಾವನೆಯನ್ನ ಬೆಳೆಸಿಕೊಂಡು ಯಾವುದೇ ಫಲಾಪೀಕ್ಷೆಗಳನ್ನು ಬಯಸದೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಗಂಗಾ ಪಾಟೀಲ್ ಆಶಾ ಭಂಡಾರಿ ಶ್ವೇತಾ ಬಿ ಸಿ ರಾಜೇಶ್ವರಿ ಸುಣಗಾರ ವಿಜಯಲಕ್ಷ್ಮಿ ಹಡಪದ ಪಾರ್ವತಿ ಲಮಾಣಿ ಬಸವರಾಜ್ ಕರ್ಕಿ ಕಟ್ಟಿ ಶಿವಯ್ಯ ಕುಲಕರ್ಣಿ ಫಕಿರೇಶ್ ಜಂತ್ಲಿ ರವಿ ಕೊಪ್ಪದ ಇದ್ದರು.