ವಿಶ್ವ ದಾಖಲೆ ಪುಟ ಸೇರಿದ ೧೪ ತಿಂಗಳ ಪುಟಾಣಿ….

ಬೆಂಗಳೂರು, ಮಾ.೯- ರಾಜಧಾನಿ ಬೆಂಗಳೂರಿನ ಬರೀ ೧೪ ತಿಂಗಳ ಪುಟಾಣಿ ಮಗುವೊಂದು ೫೦೦ ಪದಗಳು ಮತ್ತು ೩೩೬ ವಸ್ತುಗಳನ್ನು ಗುರುತಿಸುವ ಮೂಲಕ ವಿಶ್ವ ದಾಖಲೆ ಪುಟ ಸೇರಿದೆ.
ಚಿಕ್ಕಮಗಳೂರು ಜಿಲ್ಲೆಯ ಕಂಬಿಹಳ್ಳಿ ನಿವಾಸಿ ಪ್ರಸ್ತುತ ಬೆಂಗಳೂರಿನ ಆರ್ ಟಿ ನಗರದಲ್ಲಿರುವ ಡಿ.ಎಮ್.ಧನಲಕ್ಷ್ಮಿಕುಮಾರಿ ಮತ್ತು ಹುಲಿಯಪ್ಪಗೌಡ ಕೆ ಅವರ ೧೪ ತಿಂಗಳ ಮಗು ಮನಸ್ಮಿತಾ ಈ ಸಾಧನೆಗೈದಿದ್ದಾರೆ.
ಕಲಾಂ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯೂ ೫೦೦ ಪದಗಳು ಮತ್ತು ೩೩೬ ವಸ್ತುಗಳನ್ನು ಗುರುತಿಸಿದ ವಿಶ್ವದ ಮೊದಲ ಮಗು ಎಂದು ಪ್ರಕಟಿಸಿದ್ದು, ಅಸಾಧಾರಣ ಗ್ರಹಣ ಶಕ್ತಿ ಮೇಧಾವಿ ಎಂದು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದರು.
ಮನಸ್ಮಿತಾ ಅವರಿಗೆ ಕಳೆದ ಮಾರ್ಚ್ ೩ರಂದು ಟೀಚ್ ಆಡಿಟೋರಿಯಂ ಚೆನ್ನೈನಲ್ಲಿ ಕಲಾಂ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಅವರು ವಿಶ್ವ ದಾಖಲೆ ಗೌರವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದ್ದಾರೆ.

ಇನ್ನೂ ಕೇವಲ ೧೪ ತಿಂಗಳಿಗೆ ಈಕೆ ದಾಖಲೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಗುವಿನ ತಾಯಿ ಡಿ. ಎಮ್. ಧನಲಕ್ಷ್ಮಿಕುಮಾರಿ ಅವರು ಗೃಹಿಣಿಯಾಗಿದ್ದು, ತಂದೆ ಹುಲಿಯಪ್ಪಗೌಡ ಕೆ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತಿ ಹೊಂದಿದ್ದಾರೆ.
ಮನಸ್ಮಿತಾ ಅವರು ಕನ್ನಡ ಮತ್ತು ಇಂಗ್ಲಿಷ್ ಅಕ್ಷರಮಾಲೆ ಸೇರಿದಂತೆ ೩೩೬ ವಿವಿಧ ವಸ್ತುಗಳು ಮತ್ತು ೫೦೦ ಪದಗಳನ್ನು ಗುರುತಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕಲಾಂ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ಮನಸ್ಮಿತಾ ಅವರನ್ನು ಅಸಾಧಾರಣ ಗ್ರಹಣಶಕ್ತಿ ಮೇಧಾವಿ ಎಂದು ಗುರುತಿಸಿ ಶ್ಲಾಘಿಸಿದ್ದಾರೆ.