ವಿಶ್ವ ದಾಖಲೆಯ ಸಾಧಕ ರೇವಣ್ಣ ಡೊಣಗಿಗೆ ಅಕಾಡೆಮಿ ಬಾಲಗೌರವ ಪ್ರಶಸ್ತಿ

ವಿಜಯಪುರ :ಮಾ.30: ವಿಜಯಪುರದ ವಿಶ್ವ ದಾಖಲೆಯ ಸಾಧಕ ರೇವಣ್ಣ ಡೊಣಗಿ ಇವರಿಗೆ ಅಕಾಡೆಮಿ ಬಾಲ ಗೌರವ ಪ್ರಶಸ್ತಿ ಲಭಿಸಿದೆ.

         ವಿಜಯಪುರರದ ಇಟ್ಟಂಗಿಹಾಳ ಎಕ್ಸಲೆಂಟ್ ಆಂಗ್ಲ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ರೇವಣ್ಣ ಡೊಣಗಿ ಇವರಿಗೆ ಕರ್ನಾಟಕ ಸರಕಾರದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಕೊಡುವ ಪ್ರತಿಷ್ಟಿತ ಅಕಾಡೆಮಿ ಬಾಲಗೌರವ ಪ್ರಶಸ್ತಿ ದೊರಕಿದೆ.
          ರೇವಣ್ಣ ಡೊಣಗಿ ಬಹುಮುಖ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು ಮಹಾತ್ಮ ಗಾಂಧೀಜಿಯ ಭಾವಚಿತ್ರವನ್ನು ಕೇವಲ 26 ಸೆಕೆಂಡಿನಲ್ಲಿ ಬಿಡಿಸಿ ವಿಶ್ವ ದಾಖಲೆ ಸಾಧನೆ ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಿದೆ.
       ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಆಡಿಟೋರಿಯಂನಲ್ಲಿ ಜರುಗಿದ ಭವ್ಯ ಸಮಾರಂಭದಲ್ಲಿ ಧಾರವಾಡದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವರಾದ ಆಚಾರ ಹಾಲಪ್ಪ ಬಸಪ್ಪ ಹಾಗೂ ಅಕಾಡೆಮಿ ಅಧ್ಯಕ್ಷರಾದ ನವೀನ್ ಸವಣೂರ ಇವರು ಪ್ರಶಸ್ತಿ ನೀಡಿ ಗೌರವಿಸಿದರು. ಸಮಾರಂಭದಲ್ಲಿ ಪೆÇಲೀಸ್ ವರಿಷ್ಟಾಧಿಕಾರಿ ಲೋಕೇಶ ಜಗಲಾಸರ್, ಜಿ ಪಂ ಸಿ ಇ ಓ ಸುರೇಶ ಇಟ್ನಾಲ್, ಮಾಜಿ ಅಧ್ಯಕ್ಷ ಶಂಕರ ಹಲಗತ್ತಿ, ಯೋಜನಾಧಿಕಾರಿ ಭಾರತಿ ಶೆಟ್ಟರ, ಜಂಬುನಾಥ ಕಂಚ್ಯಾಣಿ, ಅಣ್ಣಾಜಿ ಪಡತಾರೆ, ರಾಜಶೇಖರ ಕುಕ್ಕುಂದಾ, ದಾಕ್ಷಾಯಣಿ ಭಟ್ ಮತ್ತಿತರರು ಉಪಸ್ಥಿತರಿದ್ದರು.
 ಚಿತ್ರಕಲೆ, ಯೋಗ, ಸಸ್ಯ ಅಧ್ಯಯನದಲ್ಲಿ ಸಾಧನೆ ಮಾಡಿದ ರೇವಣ್ಣ ಇವರಿಗೆ ಅಕಾಡೆಮಿ ಬಾಲಗೌರವ ಪ್ರಶಸ್ತಿ ಲಭಿಸಿದ್ದು ನಮಗೆ ತುಂಬಾ ಹೆಮ್ಮೆ ಎನಿಸಿದೆ. ಇವರ ಸಾಧನೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚಿಗೆ ಸಾಗಿ ನಮ್ಮ ಜಿಲ್ಲೆಯ ಕೀರ್ತಿ ಎಲ್ಲಡೆ ಹರಡಲಿ ಎಂದು ಎಕ್ಸಲೆಂಟ್ ಶಾಲೆಯ ಫೌಂಡರ್ ಅಧ್ಯಕ್ಷರಾದ ಶಿವಾನಂದ ಕೆಲೂರ್ ಅಭಿನಂದಿಸಿ ಶುಭ ಹಾರೈಸಿದ್ದಾರೆ. ಅದೇ ರೀತಿ ಉಪಾಧ್ಯಕ್ಷ ದಯಾನಂದ ಕೆಲೂರ್, ನಿರ್ದೇಶಕಿ ಜ್ಯೋತಿ ದೇಸಾಯಿ ಮತ್ತಿತರರು ಶುಭ ಹಾರೈಸಿದ್ದಾರೆ.