“ವಿಶ್ವ ಥಲಸ್ಮಿಯಾ ದಿನ” ದ ಅಂಗವಾಗಿ ರಕ್ತದಾನ ಶಿಬಿರ

ಬೀದರ:ಮೇ.10:ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಪ್ ಇಂಡಿಯಾ (ಎಫ್ ಪಿಎಐ) ಬೀದರ ಶಾಖೆ, ಸಾಯಿ ಲೈಫ್ ಸೈನ್ಸೆಸ್, ಬೀದರ ಹಾಗೂ ಬ್ರಿಮ್ಸ್ ರಕ್ತನಿಧಿ ಕೇಂದ್ರ, ಬೀದರ ಇವರುಗಳ ಸಂಯುಕ್ತಾಶ್ರಯದಲ್ಲಿ ಕೋಳಾರ ಕೈಗಾರಿಕಾ ವಲಯದಲ್ಲಿರುವ ಸಾಯಿ ಲೈಫ್ ಸೈನ್ಸೆಸ್, ಬೀದರ ಕಂಪನಿಯಲ್ಲಿ “ವಿಶ್ವ ಥಲಸ್ಮಿಯಾ ದಿನ” ದ ಅಂಗವಾಗಿ “ರಕ್ತದಾನ ಶಿಬಿರ ಹಾಗೂ ಮಹಿಳೆಯರ ಗರ್ಭಕೋಶ ಕ್ಯಾನ್ಸರ್ ಪತ್ತೆ ತಪಾಸಣಾ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಎಫ್ ಪಿಎಐ ಸಂಸ್ಥೆಯ ಅಧ್ಯಕ್ಷರಾದ ಡಾ. ನಾಗೇಶ ಪಾಟೀಲ್ ಇವರು “ರಕ್ತದಾನ ಶಿಬಿರ” ಕ್ಕೆ ಚಾಲನೆ ನೀಡಿದರು. ಹಾಗೂ ಸಾಯಿ ಲೈಫ್ ಸೈನ್ಸೆಸ್ ಕಂಪನಿಯ ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಯಿ ಲೈಫ್ ಸೈನ್ಸೆಸ್ ಕಂಪನಿಯ ಮುಖ್ಯ ವ್ಯವಸ್ಥಾಪಕರಾದ ಗಿರಿ ಬಾಬು ಇವರು ಎಫ್ ಪಿಎಐ ಸಂಸ್ಥೆಯ 50 ವರ್ಷಗಳ ನಿರಂತರ ಆರೋಗ್ಯ ಸೇವೆಗೆ ಹಾಗೂ ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಎಫ್ ಪಿಎಐ ಸಂಸ್ಥೆಯ ಶಾಖಾ ವ್ಯವಸ್ಥಾಪಕರಾದ ಶ್ರೀನಿವಾಸ ಬಿರಾದಾರ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು.

ಸಾಯಿ ಲೈಫ್ ಸೈನ್ಸೆಸ್ ಕಂಪನಿಯ ಸಿಬ್ಬಂದಿಯಾದ ಕಿರಣ್ ಇವರು ಶಿಬಿರದ ವ್ಯವಸ್ಥೆ ಮಾಡಿದರು.

ಈ ಸಂದರ್ಭದಲ್ಲಿ ಎಫ್ ಪಿಎಐ ಸಂಸ್ಥೆಯ ಗೌರವ ಖಜಾಂಚಿಗಳಾದ ಡಾ. ವಿಜಯ ಕೊಂಡಾ, ಕಾರ್ಯಕಾರಿಣಿ ಸಭೆಯ ಸದಸ್ಯರಾದ ಸುಬ್ರಮಣ್ಯ ಪ್ರಭು ಇವರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಬ್ರಿಮ್ಸ್ ರಕ್ತನಿಧಿ ಕೇಂದ್ರ, ಬೀದರ ಏರ್ಪಡಿಸಿದ ರಕ್ತದಾನ ಶಿಬಿರದಲ್ಲಿ ಸಾಯಿ ಲೈಫ್ ಸೈನ್ಸೆಸ್ ಕಂಪನಿಯ 132 ಜನ ಸಿಬ್ಬಂದಿಗಳು ರಕ್ತದಾನ ಮಾಡಿದರು. ರಕ್ತನಿಧಿ ಕೇಂದ್ರದ ಆಪ್ತಸಮಾಲೋಚಕರಾದ ಸ್ತುತಿ ಹಾಗೂ ಸಿಬಂದಿವರ್ಗದವರು ರಕ್ತದಾನ ಶಿಬಿರದಲ್ಲಿ ಕಾರ್ಯನಿರ್ವಹಿಸಿದರು.

ಎಫ್ ಪಿಎಐ ಸಂಸ್ಥೆಯ ವೈದ್ಯಾಧಿಕಾರಿಗಳಾದ ಡಾ. ಆಕಾಶ ಬುಳ್ಳಾ ಇವರು ಮಹಿಳೆಯರ ಆರೋಗ್ಯ ತಪಾಸಣೆ ಮಾಡಿದರು ಹಾಗೂ ಡಾ. ಚಿನ್ನಮ್ಮಾ ಬಿರಾದಾರ ಇವರು ಮಹಿಳೆಯರ ಗರ್ಭಕೋಶ ಕ್ಯಾನ್ಸರ್ ಪತ್ತೆ ತಪಾಸಣೆ ಮಾಡಿದರು. ಶೂಶ್ರಕಿಯರಾದ ಜೈಮೇರಿ ಹಾಗೂ ಸುಹಾಸಿನಿ ಇವರು ಈ ಶಿಬಿರದಲ್ಲಿ ಸಹಕರಿಸಿದರು.