ವಿಶ್ವ ತಾಯಂದಿರ ದಿನ ಆಚರಣೆ

ವಿಜಯಪುರ:ಮೇ.15: ನಿಸ್ವಾರ್ಥ ಪ್ರೀತಿಯ ಸಂಕೇತವಾಗಿ ನಿಲ್ಲುವಳು ತಾಯಿ, ತನ್ನೆಲ್ಲಾ ಸುಖ ಸಂತೋಷಗಳನ್ನು ತನ್ನ ಕರುಳ ಬಳ್ಳಿಯಲ್ಲಿ ಕಾಣುವ ತಾಯಿಯ ಪ್ರೀತಿಗೆ ಈ ಜಗದಲ್ಲಿ ಬೇರೆ ಪರ್ಯಾಯಗಳಿಲ್ಲ. ನಮ್ಮ ತಾಯಿಯ ನಿಸ್ವಾರ್ಥ ಪ್ರೀತಿ ಮತ್ತು ಅವರು ತಮ್ಮ ಮಕ್ಕಳಿಗಾಗಿ ಮಾಡುವ ತ್ಯಾಗವನ್ನು ಗೌರವಿಸಲು ಪ್ರತಿ ವರ್ಷ ಮೇ 14 ರಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಶ್ರೀನಿಧಿ ಬಂಡೆ ತನ್ನ ತಾಯಿ ಸುರೇಖಾ ಜೊತೆ ವಿಶ್ವ ತಾಯಂದಿರ ದಿನವನ್ನು ಆಚರಿಸಿದ ಸಂದರ್ಭ.