
ಕೋಲಾರ,ಮೇ.೧೫- ವಿಶ್ವ ತಾಯಂದಿರ ದಿನದ ಸಲುವಾಗಿ ಶ್ರೀ ದೇವರಾಜ್ ಅರಸ್ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಐ.ಎ.ಪಿ, ಎನ್.ಸಿ.ಇ.ಡಿ ಚಟುವಟಿಕಾ ಕಾರ್ಯಕ್ರಮದ ಅಡಿಯಲ್ಲಿ ಕೇಕ್ ಕತ್ತರಿಸುವ ಮೂಲಕ ವಿಶ್ವ ತಾಯಂದಿರ ದಿನವನ್ನು ಆಚರಿಸಲಾಯಿತು.
ತಾಯಿ ಎಂದರೆ ಕರುಣೆಯ ಕಡಲು, ಜಗದ ಸೃಷ್ಟಿಯ ಪ್ರತೀಕ, ತ್ಯಾಗದ ಇನ್ನೊಂದು ಮುಖ. ಅಮ್ಮ ಎನ್ನುವ ತೊದಲ ನುಡಿ ವಿಶ್ವದ ಎಲ್ಲಾ ಮಕ್ಕಳ ಬಾಯಲ್ಲಿಯೂ ಬರುತ್ತದೆ. ಮಾ. ಮಮ್ಮಿ. ಅಮ್ಮ ಹೀಗೆ. ಅಮ್ಮ ಎನ್ನುವುದು ವಿಶ್ವದ ಬಾಂಧವ್ಯದ ಸಂಕೇತ. ವಿಶ್ವದ ಎಲ್ಲ ತಾಯಂದಿರ ಭಾವನೆಗಳು ಒಂದೇ. ಇಂತಹ ಮಹತ್ತರವಾದ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಶ್ರೀ ದೇವರಾಜ್ ಅರಸ್ ಮೆಡಿಕಲ್ ಕಾಲೇಜ್ ಪ್ರಾಂಶುಪಾಲ ಡಾ. ಪ್ರಭಾಕರ್, ಐಎಪಿ ಸೆಂಟ್ರಲ್ ಇ.ಬಿ ಮೆಂಬರ್ ಡಾ.ಸುಮತ ನಾಯಕ್, ಐಎಪಿ ಸೌತ್ ಜೋನ್ ಕೋ ಆರ್ಡಿನೇಟರ್ ಡಾ.ಗೀತಾ ಪಾಟೀಲ್,
ಡಾ.ಕಿಶೋರ್ ಬೈಂದೂರು, ಡಾ.ಪ್ರಿಯಾ ಶಿವಳ್ಳಿ, ಐಎಪಿ ವೈಸ್ ಪ್ರೆಸಿಡೆಂಟ್ ಹಾಗೂ ಕೆಡಿಎಪಿ ಕೋಲಾರ ಜಿಲ್ಲಾ ಅಧ್ಯಕ್ಷ ಡಾ.ವೈ.ಸಿ.ಬೀರೇಗೌಡ, ಡಾ.ಆಶಾ, ಡಾ.ಶ್ರೀನಾಥ್, ಡಾ.ನರೇಂದ್ರ, ಡಾ.ಶ್ರೀಹರಿ ಮುಂತಾದ ವೈದ್ಯರು ಕಾರ್ಯಕ್ರಮವನ್ನು ಸಾಕ್ಷಿಕರಿಸಿದರು.
ವಿಶ್ವ ತಾಯಂದಿರ ದಿನದ ಸಲುವಾಗಿ ತಾಯಂದಿರನ್ನು ಮತ್ತು ಹಿರಿಯರನ್ನು ಗೌರವಿಸುವ ಮತ್ತು ಅವರಿಗೆ ಪೂಜ್ಯವಾದ ಸ್ಥಾನವನ್ನು ನೀಡುವ ಸಂದೇಶವನ್ನು ಸಮಾಜಕ್ಕೆ ನೀಡಲಾಯಿತು.