ವಿಶ್ವ ತಂಬಾಕು ವಿರೋಧ ದಿನಾಚರಣೆ

ಬೀದರ್:ಜೂ.3: ಜಿಲ್ಲೆಯ ಬೀದರ್ ಗ್ರಾಮಾಂತರ ತಾಲೂಕಿನ ಬೀದರ್ ಉತ್ತರ ವಲಯದ ವಿದ್ಯಾನಗರ ಕಾರ್ಯಕ್ಷೇತ್ರದಲ್ಲಿ ವಿಶ್ವ ತಂಬಾಕು ವಿರೋಧ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಜಿಜಾ ಮಾತ ಕನ್ಯಾ ಪ್ರೌಢ ಶಾಲೆ ಮತ್ತು ಪಿ.ಯು.ಸಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಪರಮೇಶ್ವರ ಬಿರಾದರ್ ಸರ್. ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದಂತಹ ಎ. ಪಾರ್ವತಿ ಸೋನಾ ಮೇಡಂ. ಮತ್ತು ಜಿಜಾಮಾತಾ ಕನ್ಯಾ ಪ್ರೌಢಶಾಲೆಯ ಮುಖ್ಯ ಗುರುಗಳಾದ ವಾಸುದೇವ ರಾಥೋಡ್ ಸರ್. ಈ ಕಾರ್ಯಕ್ರಮಕ್ಕೆ ಮಾಹಿತಿ ನೀಡುವುದರ ಮೂಲಕ ಚಾಲನೆ ನೀಡಿದರು. ಹಾಗೂ ಶಾಲೆಯ ಮಕ್ಕಳ ವಿದ್ಯಾರ್ಥಿಗಳಿಂದ ಗಿಡ ನಾಟಿ ಮಾಡಿಸಲಾಯಿತು. ಹಾಗೂ ಈ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.